ಸಂಗೀತ ಮಾಂತ್ರಿಕ ಎ.ಆರ್​ ರೆಹಮಾನ್​ @57: ದಿಲೀಪ್,​ ರೆಹಮಾನ್​ ಆಗಿದ್ದು ಏಕೆ? ಹೇಗೆ?

 ಸಂಗೀತ ಮಾಂತ್ರಿಕ ಎ.ಆರ್​ ರೆಹಮಾನ್​ ಅವರ ಹುಟ್ಟುಹಬ್ಬವಿಂದು. ದಿಲೀಪ್ ಆಗಿದ್ದವರು​ ರೆಹಮಾನ್​ ಆಗಿದ್ದು ಏಕೆ? ಹೇಗೆ?
 

AR Rahmans birthday Why he converted from Hinduism to Islam suc

ಎ.ಆರ್​.ರೆಹಮಾನ್​... ಬಹುಶಃ ಈ ಹೆಸರು ಕೇಳದವರೇ ಇಲ್ಲವೇನೋ. ಅಲ್ಹಾ ರಖಾ ರೆಹಮಾನ್​ ಎನ್ನುವುದು ಪೂರ್ತಿ ಹೆಸರು. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಸಂಗೀತ ಮಾಂತ್ರಿಕನ ಸಂಗೀತಕ್ಕೆ ಮೋಡಿ ಹೋದವರು ಕೋಟ್ಯಂತರ ಮಂದಿ. ಎರಡೆರಡು ಆಸ್ಕರ್ ಪ್ರಶಸ್ತಿ ಗೆದ್ದ ಖ್ಯಾತಿ ಇವರದ್ದು. ಏಷ್ಯಾದಲ್ಲೇ ಆಸ್ಕರ್ ಗೆದ್ದ ಮೊದಲಿಗೆ ಎನ್ನುವ ಖ್ಯಾತಿ ಅವರಿಗೆ ಇದೆ. ಆರು ರಾಷ್ಟ್ರ ಪ್ರಶಸ್ತಿ, ಎರಡು ಅಕಾಡೆಮಿ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿ, 15 ಫಿಲ್ಮಪೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ರೆಹಮಾನ್ ಭಾರತೀಯ ಚಿತ್ರರಂಗದ ಹಾಡುಗಳಿಗೆ ಅಂತರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಸಂಗೀತ ನಿರ್ದೇಶಕ ಇವರು.  ಇಂದು (ಜ.6) ಈ ಸಂಗೀತ ಮಾಂತ್ರಿಕನಿಗೆ 57ನೇ ಹುಟ್ಟುಹಬ್ಬದ ಸಂಭ್ರಮ. 1967ರ ಜನವರಿ 6ರಂದು ಹುಟ್ಟಿರುವ ದಿಲೀಪ್​ ಕುಮಾರ್​ ಅವರು ಕೊನೆಗೆ ರೆಹಮಾನ್​ ಆಗಿ ಬದಲಾದದ್ದೇ ಒಂದು ರೋಚಕ. 

ಹೌದು. ಈ ವಿಷಯ ಬಹುತೇಕ ಮಂದಿ ಗೊತ್ತಿರಲಿಕ್ಕಿಲ್ಲ. ಎ.ಆರ್​.ರೆಹಮಾನ್​ ಅವರು ಹುಟ್ಟಿದ್ದು ಹಿಂದೂ ಧರ್ಮದಲ್ಲಿ. ಬಾಲ್ಯದಲ್ಲಿ ಅವರ ಹೆಸರು ದಿಲೀಪ್​ ಕುಮಾರ್​. ನಂತರ ಅವರು ರೆಹಮಾನ್​ ಆದರು. ಹಿಂದೂ ಆಗಿದ್ದವರು ಮುಸ್ಲಿಂ ಧರ್ಮ ಪಾಲಿಸುತ್ತಾ ಇರುವ ಹಿಂದಿದೆ ಇಂಟರೆಸ್ಟಿಂಗ್​ ಸ್ಟೋರಿ. ಈ ಕಥೆ ರೆಹಮಾನ್ ಅವರ ಜೀವನಚರಿತ್ರೆ 'ದಿ ಸ್ಪಿರಿಟ್ ಆಫ್ ಮ್ಯೂಸಿಕ್' ನಲ್ಲಿ ಉಲ್ಲೇಖಗೊಂಡಿದೆ. 2000ನೇ ಸಾಲಿನಲ್ಲಿ ಬಿಡುಗಡೆಗೊಂಡಿರುವ ಈ ಜೀವನ ಚರಿತ್ರೆಯಲ್ಲಿ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡದ್ದು ಏಕೆ ಎಂದು ಉಲ್ಲೇಖವಿದೆ. ಆದರೆ ಈ ಬಗ್ಗೆ ರೆಹಮಾನ್​ ಅವರು ಇತ್ತೀಚೆಗೆ ಮಾತನಾಡಲು ಇಷ್ಟಪಡುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ.

ಪವನ್​ ಕಲ್ಯಾಣ್​ಗೆ ಇದೇ ವರ್ಷ 3ನೇ ಬಾರಿ ಡಿವೋರ್ಸ್​ ಎಂದ ಜ್ಯೋತಿಷಿ ರಾಜಕೀಯ ಭವಿಷ್ಯದಲ್ಲಿ ಹೇಳಿದ್ದೇನು?

ಅಷ್ಟಕ್ಕೂ  ದಿಲೀಪ್​ ಕುಮಾರ್​ ರೆಹಮಾನ್​ ಆಗಿದ್ದು ಹೇಗೆ ಎನ್ನುವ ವಿಷಯ ತಿಳಿಯುವ ಮೊದಲು ಇವರ ಬಾಲ್ಯದ ಕುರಿತು ಒಂದಿಷ್ಟು ಮಾಹಿತಿ ಹೇಳಲೇಬೇಕು.  ಬಾಲ್ಯದಲ್ಲಿ ತಂದೆ ಆರ್​.ಕೆ.ಶೇಖರ್​ ಅವರನ್ನು ಕಳೆದುಕೊಂಡವರು ರೆಹಮಾನ್​ . ಆಗ ಅವರಿಗೆ ಕೇವಲ 9 ವರ್ಷ. ಇವರ ತಾಯಿಯ ಹೆಸರು ಕರೀಮಾ ಬೇಗಂ. ಆದ್ರೆ ತಮಗೆ ತಿಳಿವಳಿಕೆ ಬಂದಾಗಿನಿಂದಲೂ ತಮ್ಮ ಅಮ್ಮ ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದರು ಎಂದು ರೆಹಮಾನ್​ ಹೇಳುತ್ತಾರೆ. ತಂದೆ ಶೇಖರ್ ಅವರ ನಿಧನದ ಬಳಿಕ ಅತಿ ಚಿಕ್ಕ ವಯಸ್ಸಿನವರಾಗಿದ್ದ ದಿಲೀಪ್​ ಅವರೇ ಸಂಸಾರದ ನೊಗ ಹೊರಬೇಕಾಗಿ ಬಂತು.  ಅವರ ತಂದೆ ಶೇಖರ್ ಅವರು ಮಲಯಾಳಂ ಚಿತ್ರಗಳಲ್ಲಿ ಸಂಗೀತ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದರಿಂದ ಸಂಗೀತ ರಕ್ತದಲ್ಲಿ ಬಂದಿತ್ತು. ಆದರೆ ಕುಟುಂಬ ನಿರ್ವಹಣೆಗಾಗಿ ಶಾಲೆಯನ್ನು ಬಿಡಬೇಕಾಯಿತು. ಆದರೆ ಅದಾಗಲೇ ದಿಲೀಪ್​ ಅವರು ಇಸ್ಲಾಂ ಧರ್ಮಕ್ಕೆ ವಾಲಿದ್ದರು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ರೆಹಮಾನ್ ತಂದೆಗೆ ಕ್ಯಾನ್ಸರ್ ಇತ್ತು. ಅವರ ಕೊನೆಯ ದಿನಗಳಲ್ಲಿ ಸೂಫಿ ಒಬ್ಬರು ಸೇವೆ ಮಾಡಿದ್ದರು. ಅವರಿಂದ ದಿಲೀಪ್​  ಪ್ರಭಾವಗೊಂಡಿದ್ದರು. ತಂದೆಯ ನಿಧನದ ಬಳಿಕ ಅವರನ್ನು ಭೇಟಿ ಮಾಡಿದ ದಿಲೀಪ್​ ಅವರು ಸೂಫಿಯವರ ಹಾದಿ ಹಿಡಿದರು.  ಇದರಿಂದ ನಮಗೆ ಶಾಂತಿ ಸಿಕ್ಕಿತು ಎಂದು ಜೀವನ ಚರಿತ್ರೆಯಲ್ಲಿ ಅವರು ಹೇಳಿಕೊಂಡಿದ್ದಾರೆ.  

‘ನನ್ನ ತಾಯಿ ಹಿಂದೂ ಧರ್ಮವನ್ನು ಪರಿಪಾಲಿಸುತ್ತಿದ್ದರು. ಅವರು ಆಧ್ಯಾತ್ಮಿಕವಾಗಿ ಸಾಕಷ್ಟು ಒಲವು ಹೊಂದಿದ್ದರು. ನಾವು ವಾಸ ಮಾಡುತ್ತಿದ್ದುದು ಹಬಿಬುಲ್ಲಾ ರಸ್ತೆಯಲ್ಲಿ. ನಮ್ಮ ಮನೆಯ ಗೋಡೆಯ ಮೇಲೆ ಹಿಂದೂ ದೇವರುಗಳು ರಾರಾಜಿಸುತ್ತಿದ್ದವು. ಇದರ ಜೊತೆ ಮದರ್ ಮೇರಿ ಫೋಟೋ ಕೂಡ ಇತ್ತು. ಇದರ ಜೊತೆ ಮೆಕ್ಕಾ, ಮದೀನಾದ ಫೋಟೋಗಳು ಇದ್ದವು’ ಎಂದಿದ್ದಾರೆ ರೆಹಮಾನ್​. ‘ನನ್ನ ತಾಯಿ ಎಆರ್ ಎಂಬುದನ್ನು ಆಯ್ಕೆ ಮಾಡಿದರು. ಎಆರ್​ ಎಂದರೆ ಅಲ್ಲಾಹ್ ರಖಾ ಎಂದು. ಅಮ್ಮನ  ಕನಸಿನಲ್ಲಿ ಈ ಹೆಸರು ಬಂದಿತ್ತು. ನನ್ನ ಕುಟುಂಬದ ಇತರರು ರೆಹಮಾನ್ ಎನ್ನುವ ಹೆಸರನ್ನು ಆಯ್ಕೆ ಮಾಡಿದರು’ ಎಂದಿದ್ದರು ರೆಹಮಾನ್. ರೆಹಮಾನ್  ಆದ ಮೇಲೆ ಅವರು ಆರಂಭದಲ್ಲಿ ಪಿಯಾನೋ ನುಡಿಸುವ ಮೂಲಕ ಮನೆಯ ಖರ್ಚನ್ನು ನಿಭಾಯಿಸಿದರು.  ನಂತರ ಅವರು ತಮ್ಮದೇ ಆದ ಬ್ಯಾಂಡ್ ಸ್ಥಪಿಸಿದರು.  ಜಾಹೀರಾತುಗಳಿಗೆ ಜಿಂಗಲ್ಸ್ ಬರೆದರು.  ಎಆರ್ ರೆಹಮಾನ್ ಸುಮಾರು 300 ಜಾಹೀರಾತುಗಳಿಗೆ ಜಿಂಗಲ್ಸ್ ಬರೆದಿದ್ದಾರೆ ಎನ್ನಲಾಗಿದೆ. ಬಳಿಕ ಅವರಿಗೆ ಬ್ರೇಕ್​ ಸಿಕ್ಕಿದ್ದು,  ತಮಿಳು ಚಿತ್ರ 'ರೋಜಾ' ದಿಂದ.

ಕಟ್ಟಡದಿಂದ ಜಿಗಿಯುತ್ತಿದ್ದ ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ 'ಅನಿಮಲ್'​ ನಟ: ವಿಡಿಯೋ ವೈರಲ್​

1992 ತೆರೆ ಕಂಡ ರೋಜಾ ಬಳಿಕ, ಅದರ ಭಾರಿ ಯಶಸ್ಸಿನ ಮೂಲಕ  ಅವರ ಸಿನಿ ಪಯಣ ಶುರುವಾಯಿತು.  2008ರಲ್ಲಿ ತೆರೆಕಂಡ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಹಾಡುಗಳಿಗಾಗಿ ಅವರು ಆಸ್ಕರ್ ಪ್ರಶಸ್ತಿ ಪಡೆದರು. ಮಾಧ್ಯಮ ವರದಿಗಳ ಪ್ರಕಾರ, ಇಂದು ಎಆರ್ ರೆಹಮಾನ್ ಅವರ ನಿವ್ವಳ ಮೌಲ್ಯವು ಕೋಟಿಗಳಲ್ಲಿಲ್ಲ ಶತಕೋಟಿಗಳಲ್ಲಿದೆ. 1748 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

Latest Videos
Follow Us:
Download App:
  • android
  • ios