ಹಿಂದಿ ಮಾತನಾಡಿದ ನಿರೂಪಕಿಯನ್ನು ಟ್ರೋಲ್ ಮಾಡಿದ ರಹಮಾನ್ | ವೇದಿಕೆಯಿಂದ ಹೊರಗೆ ನಡೆದ ಗಾಯಕ

ಮ್ಯೂಸಿಕ್ ಮಾಸ್ಟ್ರೋ ಎ.ಆರ್. ರಹಮಾನ್ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ 99 ಸಾಂಗ್ಸ್‌ನ ಆಡಿಯೊ ಲಾಂಚ್‌ನಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕಾಗಿ ನಿರೂಪಕಿಯನ್ನು ತಮಾಷೆಯಾಗಿ ಟ್ರೋಲ್ ಮಾಡಿದ್ದಾರೆ.

ರಹಮಾನ್ ಮೊದಲ ಬಾರಿಗೆ ಚಿತ್ರಕಥೆ ಬರೆದಿದ್ದಾರೆ ಮತ್ತು ಸಿನಿಮಾ ಸಹ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಪ್ರಮುಖ ನಟ ನಟ ಇಹಾನ್ ಭಟ್ ಅವರೊಂದಿಗೆ ರಹಮಾನ್ ಕಾಣಿಸಿಕೊಂಡರು.

ಬಾಯಲ್ಲಿ ನೀರೂರಿಸುವಂತಿದೆ ಪಿಗ್ಗಿ ರೆಸ್ಟೋರೆಂಟ್ ಸೋನಾ ಖಾದ್ಯಗಳು

ನಿರೂಪಕಿ ತಮಿಳಿನಲ್ಲಿ ರಹಮಾನ್ ಅವರನ್ನು ಸ್ವಾಗತಿಸಿದರು ಮತ್ತು ನಂತರ ಇಹಾನ್ ಅವರನ್ನು ಹಿಂದಿಯಲ್ಲಿ ಸ್ವಾಗತಿಸಿದರು. ಇದಕ್ಕೆ ರಹಮಾನ್ ಹಿಂದಿ ಎಂದು ಕೇಳಿ ವೇದರಿಕೆಯಿಂದ ಕೆಳಗೆ ಇಳಿದಿದ್ದಾರೆ.

ನೋಡುತ್ತಿದ್ದಂತೆಯೇ ವೇದಿಕೆಯಿಂದ ಹೊರನಡೆದರು. ನಂತರ ಅವರು ಆಂಕರ್ ಬಳಿ, ನೀವು ತಮಿಳಿನಲ್ಲಿ ಮಾತನಾಡುತ್ತೀರೋ ಇಲ್ಲವೋ ಎಂದು ನಾನು ಆಗಲೇ ಕೇಳಲಿಲ್ಲವೇ ಎಂದೂ ಪ್ರಶ್ನಿಸಿದ್ದಾರೆ.

ಮಾಲೀನ್ಯದಿಂದ ಕುಗ್ಗುತ್ತಿದೆ ಶಿಶ್ನದ ಗಾತ್ರ: ಮಾಹಿತಿ ಶೇರ್ ಮಾಡಿದ ನವ ವಿವಾಹಿತ ನಟಿ.

ಇದಕ್ಕೆ ಆಂಕರ್ ತಮಿಳಿನಲ್ಲಿ ಇಹಾನ್ ಅವರನ್ನು ಸ್ವಾಗತಿಸಲು ಹಿಂದಿಯಲ್ಲಿ ಮಾತನಾಡಿದ್ದಾಗಿ ಹೇಳಿದ್ದಾರೆ. ಇದಕ್ಕೆ ರಹಮಾನ್ ನಕ್ಕು ನಾನು ತಮಾಷೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರೂ ದೊಡ್ಡದಾಗಿ ನಕ್ಕಿದ್ದಾರೆ.

View post on Instagram