ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಅನುಷ್ಕಾ ಯೋಗದ ಜೊತೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ.  ಇದೇ ತಿಂಗಳು ಡೇಟ್‌ ಇದ್ದು, ಹೀಗೆಲ್ಲಾ ಮಾಡಬಹುದಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಪ್ರಖ್ಯಾತ ಮಾಗಜೀನ್‌ಗೆ ಗರ್ಭಿಣಿ ಅನುಷ್ಕಾ ಪೋಸು.. ಸಖತ್ ಕಮೆಂಟ್ಸ್! 

ವೈಟ್‌ ಶರ್ಟ್‌, ಬ್ಲಾಕ್ ಪ್ಯಾಂಟ್ ಧಿರಿಸಿ ಅನುಷ್ಕಾ ಥ್ರೆಡ್‌ ಮಿಲ್‌ನಲ್ಲಿ ಓಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈಗಾಗಲೇ ಅನುಷ್ಕಾ ಮುಖದಲ್ಲಿ ತಾಯ್ತನ ಗ್ಲೋ ಎದ್ದು ಕಾಣುತ್ತಿದೆ. ಕೆಲವು ದಿನಗಳ ಹಿಂದೆ ಪತಿ ವಿರಾಟ್ ಸಹಾಯದಿಂದ ಶಿರ್ಸಾಸನ ಮಾಡಿದ್ದರು. ಆಗಲೂ ಆಕೆಯ ಧೈರ್ಯ ಮೆಚ್ಚಿದ್ದರು ಮಂದಿ. ವೈದ್ಯರ ಸಲಹೆ ಪಡೆದು ನಿಯಮಿತ ವ್ಯಾಯಾಮ ಮಾಡುತ್ತಿದ್ದರೂ, ಕೆಲವರಿಗೆ ಮೊದಲ ಮಗು ಎಂದರೆ ಆತಂಕ ಇದ್ದೇ ಇರುತ್ತದೆ. ಆದರೆ ಅನುಷ್ಕಾ ಕೂಲ್‌ ಆಗಿರುವುದನ್ನು ನೋಡಿ ಸಂತೋಷ ಪಟ್ಟಿದ್ದಾರೆ.

ಮನೆಯಲ್ಲಿಯೇ ಫುಲ್‌ ರೆಸ್ಟ್‌ ಪಡೆಯುತ್ತಿರುವ ಅನುಷ್ಕಾ ಶರ್ಮಾ ಇತ್ತೀಚಿಗೆ 'Vogue' ಮ್ಯಾಗಜಿನ್‌ ಕವರ್ ಪೇಜಿಗೆ ತಮ್ಮ ಬೇಬಿ ಬಂಪ್ ಫೋಟೋ ಫೋಸ್ ಕೊಟ್ಟಿದ್ದರು. ವೈದ್ಯರ ಬಳಿ ಹೋಗಲು ಮಾತ್ರ ಮನೆಯಿಂದ ಬರುತ್ತಿರುವ ಕಾರಣ ಹೆಚ್ಚಾಗಿ ಕ್ಯಾಮೆರಾಗಳ ಕಣ್ಣಿಗೆ ಕಾಣಿಸಿಕೊಂಡಿಲ್ಲ. ಅನುಷ್ಕಾ ಇನ್‌ಸ್ಟಾಗ್ರಾಂ ಕಮೆಂಟ್ಸ್‌ನಲ್ಲಿ ಅಭಿಮಾನಿಗಳು ಸಲಹೆ ಕೇಳುತ್ತಿದ್ದಾರೆ. 'ನೀವು ತುಂಬಾನೇ ಸ್ಟ್ರಾಂಗ್ ಹೆಂಗ್ಸು' ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್, ಮಡದಿಯ ಪ್ರಧಾನ ಸೇವಕ..ತಪ್ಪೇನಿಲ್ಲ ಬಿಡಿ! 

ಒಟ್ಟಾರೆ ಜನವರಿಯಲ್ಲಿ ನಾವು ಜೂನಿಯರ್ ವಿರಾಟ್‌ನಾ ಅಥವಾ ಜೂನಿಯರ್ ಅನುಷ್ಕಾಳನ್ನು ಬರ ಮಾಡಿಕೊಳ್ಳುತ್ತಾರ ಎಂದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.