Asianet Suvarna News Asianet Suvarna News

ಸೂಪರ್ ಡ್ಯಾನ್ಸ್‌ನಲ್ಲಿ ಶಿಲ್ಪಾ ಶೆಟ್ಟಿ ಇಲ್ಲ; ಮೌನ ಮುರಿದ ಅನುರಾಗ್ ಬಸು!

ಡ್ಯಾನ್ಸ್‌ ಕಾರ್ಯಕ್ರಮದಲ್ಲಿ ಶಿಲ್ಪಾ ಯಾಕಿಲ್ಲ ಎಂದು ಕೊನೆಗೂ ಉತ್ತರಿಸಿದ ಮತ್ತೊಬ್ಬ ಜಡ್ಜ್‌ ಅನುರಾಗ್ ಬಸು.

Anurag Basu opens up on super dance 4 co judge Shilpa Shetty absence vcs
Author
Bangalore, First Published Aug 17, 2021, 4:21 PM IST
  • Facebook
  • Twitter
  • Whatsapp

ಉದ್ಯಮಿ ರಾಜ್‌ ಕುಂದ್ರಾ ಬ್ಲೂ ಫಿಲಂ ಚಿತ್ರೀಕರಣ ಪ್ರಕರಣದಲ್ಲಿ ಸಿಲುಕಿಕೊಂಡ ನಂತರ ಪತ್ನಿ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸುತ್ತಿದ್ದಾರೆ, ಎಂದು ಬಿ-ಟೌನ್‌ನಲ್ಲಿ ಮಾತುಗಳು ಹರಿದಾಡುತ್ತಿದೆ. ಈ ಕಾರಣದಿಂದ ಶಿಲ್ಪಾ ಕೈಯಲ್ಲಿದ್ದ ಅನೇಕ ಪ್ರಾಜೆಕ್ಟ್‌ಗಳು ಕೈ ತಪ್ಪಿ ಹೋಗಿವೆ. ಅಲ್ಲದೇ ಈಗಾಗಲೆ ಮಾಡುತ್ತಿದ್ದ ಪ್ರಾಜೆಕ್ಟ್‌ಗಳನ್ನೂ ಅರ್ಧಕ್ಕೇ ಬಿಟ್ಟಿದ್ದಾರೆ. 

ಪತಿ ರಾಜ್‌ ಕುಂದ್ರಾ ಜೈಲಲ್ಲಿ, ಕೂಲ್ ಆಗಿರಿ ಎಂದ ಪತ್ನಿ ಶಿಲ್ಪಾ ಪ್ರಾಣಯಾಮ ವಿಡಿಯೋ ವೈರಲ್!

ಕಿರುತೆರೆ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸೂಪರ್ ಡ್ಯಾನ್ಸ್‌ ಸೀಸನ್ 4ರಲ್ಲಿ ಶಿಲ್ಪಾ ಶೆಟ್ಟಿ ಪ್ರಮುಖ ತೀರ್ಪುಗಾರ್ತಿ. ಶಿಲ್ಪಾ ಜೊತೆ ಗೀತಾ ಕಪೂರ್ ಹಾಗೂ ಅನುರಾಗ್ ಬಸು ಕೂಡ ಇರುತ್ತಾರೆ. ವಾರ ವಾರವೂ ಸೆಲೆಬ್ರಿಟಿಗಳು ಸ್ಪೆಷಲ್ ಜಡ್ಜ್ ಆಗಿ ಆಗಮಿಸುತ್ತಾರೆ. ಪೊಲೀಸರು ರಾಜ್‌ ಕುಂದ್ರಾನನ್ನು ಬಂಧಿಸಿದ ನಂತರ ಶಿಲ್ಪಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ನೋರಾ ಫತೇರಿ, ಕರೀಷ್ಮಾ ಕಪೂರ್ ಸೇರಿ ಅನೇಕರು ಶಿಲ್ಪಾ ಸ್ಥಾನ ತುಂಬುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ವಾಹಿನಿಯಿಂದ ಉತ್ತರ ಸಿಗದ ಕಾರಣ ಸಹ ತೀರ್ಪುಗಾರ ಅನುರಾಗ್ ಬಸುರನ್ನು ಪ್ರಶ್ನೆ ಮಾಡಿದ್ದಾರೆ. 

Anurag Basu opens up on super dance 4 co judge Shilpa Shetty absence vcs

'ನಾವು ಶಿಲ್ಪಾ ಶೆಟ್ಟಿ ಅವರನ್ನು ಸೆಟ್‌ನಲ್ಲಿ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಕಾರ್ಯಕ್ರಮದಲ್ಲಿರುವ ನಮ್ಮೆಲ್ಲರ ನಡುವೆ ಒಂದು ಬಾಂಧವ್ಯವಿದೆ.  ನಾವೆಲ್ಲರೂ ಒಂದೇ ಕುಟುಂಬದವರು ಎನ್ನುವಂತೆ ಇದ್ದೀವಿ. ಒಬ್ಬ ವ್ಯಕ್ತಿ ಇಲ್ಲದಾಗ ತುಂಬಾ ನೋವು ಆಗುತ್ತೆ. ಶಿಲ್ಪಾ ನಮಗೆ ಪ್ರಿಯ. ಶಿಲ್ಪಾ ಶೆಟ್ಟಿ ಮತ್ತೆ ವಾಪಸ್ ಆಗುವ ಬಗ್ಗೆ ನನಗೆ ಯಾವುದೇ ಸುಳಿವು ಇಲ್ಲ. ನಾನು ಅವರಿಗೆ ಮೆಸೇಜ್‌ ಕಳುಹಿಸಿದ್ದೆ. ಯಾವಾಗ ಬರ್ತೀರಾ ಎಂದು ಕೇಳಿದ್ದೆ. ಆದರೆ ಅವರ ಕಡೆಯಿಂದ ನನಗೆ ಯಾವುದೇ ಉತ್ತರ ಬಂದಿಲ್ಲ. ಹಾಗಾಗಿ ಅವರು ಯಾವಾಗ ಬರ್ತಾರೆ ಎನ್ನುವುದೂ ನನಗೆ ಗೊತ್ತಿಲ್ಲ. ಏನಾಗುತ್ತಿದೆ ಎನ್ನುವುಗದೂ ನನ್ನ ಗಮನಕ್ಕೆ ಬಂದಿಲ್ಲ. ಶೀಘ್ರದಲ್ಲಿಯೇ ಅವರು ನಮ್ಮ ಜೊತೆಯಾಗಲೆಂದು ಆಶಿಸೋಣ,' ಎಂದು ಅನುರಾಗ್ ಹೇಳಿದ್ದಾರೆ.

Follow Us:
Download App:
  • android
  • ios