Asianet Suvarna News Asianet Suvarna News

ಇದೇ ಜನರು 'ಕಾಶ್ಮೀರ್ ಫೈಲ್ಸ್' ಅನ್ನೂ ವಿರೋಧಿಸಿದ್ರು: ಕೇರಳ ಸ್ಟೋರಿ ವಿವಾದಕ್ಕೆ ಅನುಪಮ್ ಖೇರ್ ರಿಯಾಕ್ಷನ್

ಇದೇ ಜನರು 'ಕಾಶ್ಮೀರ್ ಫೈಲ್ಸ್' ಅನ್ನೂ ವಿರೋಧಿಸಿದ್ರು ಎಂದು ಹಿರಿಯ ನಟ ಅನುಪಮ್ ಖೇರ್ ದಿ ಕೇರಳ ಸ್ಟೋರಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

Anupam Kher about The Kerala Story controversy and he says same people opposed The Kashmir Files sgk
Author
First Published May 9, 2023, 4:03 PM IST | Last Updated May 9, 2023, 4:03 PM IST

ವಿವಾದಗಳ ನಡುವೆಯೇ ದಿ ಕೇರಳ ಸ್ಟೋರಿ ಸಿನಿಮಾ ಕೊನೆಗೂ ರಿಲೀಸ್ ಆಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ದೇಶದಾದ್ಯಂತ ದಿ ಕೇರಳ ಸ್ಟೋರಿ ಸಿನಿಮಾ ತೆರೆಗೆ ಬಂದಿದ್ದು ಕರ್ನಾಟಕದಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಒಂದಿಷ್ಟು ವಿರೋಧ, ಟೀಕೆಯ ನಡುವೆಯೂ ಅನೇಕರು ಕೇರಳ ಸ್ಟೋರಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನು ಅನೇಕರು ದಿ ಕೇರಳ ಸ್ಟೋರಿ ಸಿನಿಮಾವನ್ನು ಕಾಶ್ಮೀರ್ ಫೈಲ್ಸ್‌ಗೆ ಹೋಲಿಸುತ್ತಿದ್ದಾರೆ. ಈ ಬಗ್ಗೆ ಇದೀಗ ಕಾಶ್ಮೀರ್ ಫೈಲ್ಸ್ ಸ್ಟಾರ್ ಹಿರಿಯ ನಟ ಅನುಪಮ್ ಖೇರ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗಷ್ಟೆ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿ ಕೇರಳ ಸ್ಟೋರಿ ತಂಡಕ್ಕೆ ಎಚ್ಚರಿಕೆ ನೀಡಿದ್ದರು. ಇದೀಗ ಅನುಪಮ್ ಖೇರ್ ಮಾತನಾಡಿ, ಇದೇ ಜನರು ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ವಿರೋಧಿಸಿದ್ದರು ಎಂದು ಹೇಳಿದ್ದಾರೆ. 

'ಮತ್ತೊಮ್ಮೆ, ಅವರು ಒಂದೇ ಮುಖಗಳು ಎಂದು ನಾನು ಹೇಳುತ್ತೇನೆ. ನಾನು ಸಿನಿಮಾ ನೋಡಿಲ್ಲ ಆದರೆ ಜನ ವಾಸ್ತವಕ್ಕೆ ಹತ್ತಿರವಾದ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ. ಇಂಥ ವಿಷಯಗಳನ್ನು ಸಿನಿಮಾ ಮಾಡಲು ಸ್ವತಂತ್ರರು. ಯಾರೂ ಅವರನ್ನು ತಡೆಯುವುದಿಲ್ಲ' ಎಂದು ಹೇಳಿದ್ದಾರೆ. 

ಸುದೀಪ್ತೋ ಸೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ಅದಾ ಶರ್ಮಾ ನಟಿಸಿದ್ದಾರೆ. ಕೆಲಸ ಹುಡುಕಿ ಬೇರೆ ದೇಶಗಳಿಗೆ ಹೋಗುವ ಕೇರಳದ ಅನೇಕ ಯುವತಿಯರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಬ್ರೈನ್ ವಾಶ್ ಮಾಡಲಾಗುತ್ತದೆ ಹಾಗೂ ಮತಾಂತರದ ಬಗ್ಗೆ ಈ ಸಿನಿಮಾದಲ್ಲಿ ತೋರಸಲಾಗಿದೆ. ಈ ವಿಚಾರ ಅನೇಕರ ವಿರೋಧಕ್ಕೆ ಕಾರಣವಾಗಿದೆ.  ಇದು ಸುಳ್ಳು ಎಂದು ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. 

The Kerala Story ಬ್ಯಾನ್​ ವಿಷ್ಯಕ್ಕೆ ನಟಿ ಶಬನಾ ಅಜ್ಮಿ ಹೇಳಿದ್ದೇನು?

ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ 

'The Kerala Storyತಂಡ, ಮೊದಲು ನಾನು ನಿಮ್ಮ ಧೈರ್ಯಶಾಲಿ ಪ್ರಯತ್ನಕ್ಕಾಗಿ ಅಭಿನಂದಿಸುತ್ತೇನೆ. ಅದೇ ಸಮಯದಲ್ಲಿ ನಾನು ನಿಮಗೆ  ಕೆಟ್ಟ ಸುದ್ದಿಯನ್ನು ನೀಡುತ್ತೇನೆ, ಇಲ್ಲಿಂದ ಇನ್ಮುಂದೆ ನಿಮ್ಮ ಜೀವನವು ಒಂದೇ ಆಗಿರುವುದಿಲ್ಲ. ನೀವು ಊಹಿಸಲಾಗದ ದ್ವೇಷವನ್ನು ಸ್ವೀಕರಿಸುತ್ತೀರಿ. ನೀವು ಉಸಿರುಗಟ್ಟಿದ ಅನುಭವ ಪಡೆಯುತ್ತೀರಿ. ಅನೇಕ ಬಾರಿ ನೀವು ಗೊಂದಲಕ್ಕೊಳಗಾಗಬಹುದು ಮತ್ತು ಖಿನ್ನತೆಗೆ ಒಳಗಾಗಬಹುದು' ಎಂದು ಹೇಳಿದ್ದಾರೆ. 

ಊಹಿಸಲಾಗದ ದ್ವೇಷ ಅನುಭವಿಸ್ತೀರಿ: 'ದಿ ಕೇರಳ ಸ್ಟೋರಿ' ತಂಡಕ್ಕೆ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಎಚ್ಚರಿಕೆ

ಕೆಲವು ರಾಜ್ಯಗಳಲ್ಲಿ ಕೇರಳ ಸ್ಟೋರಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಪಶ್ಚಿಮ ಬಂಗಾಲದಲ್ಲಿ ದಿ ಕೇರಳ ಸ್ಟೋರಿ ಸಿನಿಮಾವನ್ನು ಬ್ಯಾನ್ ಮಾಡಿದ್ದಾರೆ. ಮಧ್ಯ ಪ್ರದೇಶದಲ್ಲಿ ಚಿತ್ರಕ್ಕೆ ತೆರಿಗೆ ಫ್ರೀ ಗೊಳಿಸಿದೆ. ತೆರಿಗೆ ವಿನಾಯಿತಿ ಘೋಷಿಸಬೇಕೆಂದು ಮಧ್ಯ ಪ್ರದೇಶದ ಕೆಲವು ಹಿಂದುಪರ ಸಂಘಟನೆಗಳು, ಬಿಜೆಪಿ ತಮ್ಮದೇ ಸಿಎಂ ಅವರನ್ನು ಒತ್ತಾಯಿಸಿತ್ತು. ಇದೀಗ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ವಿಡಿಯೋ ಒಂದನ್ನು ಪ್ರಕಟಿಸಿದ್ದು, ದಿ ಕೇರಳ ಸ್ಟೋರಿ ಸಿನಿಮಾವನ್ನು ಹೊಗಳಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

Latest Videos
Follow Us:
Download App:
  • android
  • ios