Asianet Suvarna News Asianet Suvarna News

ಕೆಲಸವೇ ಸಿಗ್ತಿಲ್ಲ ಎಂದು ದುಃಖಿಸಿದ ನಟ ಸುಶಾಂತ್​ ಸಿಂಗ್ EX Girlfriend

ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಮಾಜಿ ಪ್ರಿಯತಮೆ ಅಂಕಿತಾ ಲೋಖಂಡೆ ತಮಗೆ ಯಾವುದೇ ಉದ್ಯೋಗ ಸಿಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಅವರು ಹೇಳಿದ್ದೇನು?
 

Ankita Lokhande reveals she has not got any role offer after Manikarnika
Author
First Published Mar 14, 2023, 8:25 PM IST | Last Updated Mar 14, 2023, 8:25 PM IST

ನಟ ಸುಶಾಂತ್​ ಸಿಂಗ್​ ರಜಪೂತ್​ (Sushanth Singh Rajput) ಆತ್ಮಹತ್ಯೆ ಮಾಡಿಕೊಂಡು ಎರಡೂವರೆ ವರ್ಷಗಳೇ ಕಳೆದುಹೋದವು. 2020ರ ಜೂನ್​ 14ರಂದು ಸುಶಾಂತ್ ಸಿಂಗ್  ಅವರ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಮುಂಬೈನಲ್ಲಿರುವ ಅವರ ಅಪಾರ್ಟ್​ಮೆಂಟ್​ನಲ್ಲಿ ಪತ್ತೆಯಾಗಿತ್ತು. ಈ ಅಪಾರ್ಟ್​ಮೆಂಟ್​ ಅನ್ನು ಸುಶಾಂತ್​ ಅವರು ಬಾಡಿಗೆಗೆ ಪಡೆದಿದ್ದರು. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದರ ಬಗ್ಗೆ ಥಹರೇವಾರಿ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಇವರ ಜೀವನದ  ಪಟ ತೆರೆದಾಗ  ಮಾಜಿ ಗೆಳತಿಯರ ಕುರಿತ ಗಾಸಿಪ್ ಬಹಳ ಇವೆ. ಅದರಲ್ಲಿ ಮುಖ್ಯವಾದದ್ದು ನಟಿ ಅಂಕಿತಾ ಲೋಖಂಡೆ (Ankita lokhande).  

ಪವಿತ್ರ ರಿಶ್ತಾ ಧಾರವಾಹಿಯಲ್ಲಿ (Serial) ಜೊತೆಯಾಗಿ ನಟಿಸಿದ ಈ ಜೋಡಿ ಪ್ರೇಮಕ್ಕೆ ಸಿಲುಕಿ ಐದು ವರ್ಷ ಡೇಟಿಂ​ಗ್​ ಮಾಡಿದ್ದರು. ಇವರಿಬ್ಬರೂ  ಮದುವೆಯಾಗುತ್ತಾರೆಂದೇ ಎಲ್ಲರೂ ಭಾವಿಸಿದ್ದರು. ಅವರು ಮನೆಯನ್ನು ಖರೀದಿಸಿ ಸುಶಾಂತ್ ಹೆಸರನ್ನೂ ಇಟ್ಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು.  ಸುಶಾಂತ್​ಗೆ ಬಾಲಿವುಡ್ ಅವಕಾಶ ಸಿಕ್ಕಿದ ತಕ್ಷಣ ಅಂಕಿತಾರಿಂದ ದೂರವಾದರು ಎನ್ನುವ ಒಂದು ಮಾತಿದ್ದರೆ, ಅಂಕಿತಾ ಅವರೇ ಸುಶಾಂತ್​ರಿಂದ ದೂರರಾಗಿ ವಿಕ್ಕಿ ಜೈನ್ ಜೊತೆ ಮದುವೆಯಾದರು ಎನ್ನಲಾಗುತ್ತಿದೆ. ಒಟ್ಟಿನಲ್ಲಿ  2014 ರಲ್ಲಿ ಈ ಜೋಡಿ ಬೇರ್ಪಟ್ಟರೆ ಅಂಕಿತಾ  2021 ರಲ್ಲಿ ಚಿಕ್ಕಿ ಜೊತೆ ಮದುವೆಯಾದರು.

ನಟ ಸುಶಾಂತ್​ ಸಿಂಗ್​ 'ಆತ್ಮ'ಕ್ಕೆ ಹೆದರಿ ಫ್ಲ್ಯಾಟ್​ ಖಾಲಿ! ಎರಡೂವರೆ ವರ್ಷದ ಬಳಿಕ ಸಿಕ್ಕ ಟೆನೆಂಟ್!
 
ಆದರೆ ಇದೀಗ ಅಂಕಿತಾ ಲೋಖಂಡೆ ಅವರ ಕೈಯಲ್ಲಿ ಯಾವ ಪ್ರಾಜೆಕ್ಟ್​ಗಳೂ ಇಲ್ಲವಂತೆ. ತಮಗೆ  ಕೆಲಸವೇ ಸಿಗುತ್ತಿಲ್ಲ ಎಂದು ನಟಿ ದುಃಖ ತೋಡಿಕೊಂಡಿದ್ದಾರೆ.  2019 ರಲ್ಲಿ ಬಿಡುಗಡೆಯಾದ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ನಂತರ  ಯಾವುದೇ ಆಫರ್ ಬಂದಿಲ್ಲ ಎಂದಿದ್ದಾರೆ.  ಸುಶಾಂತ್ ಸಿಂಗ್ ರಜಪೂತ್ ಜೊತೆ 'ಪವಿತ್ರ ರಿಶ್ತಾ' ಟಿವಿ ಶೋನಲ್ಲಿ ಅರ್ಚನಾ ದೇಶಮುಖ್ ಪಾತ್ರವನ್ನು ನಿರ್ವಹಿಸಿದ ನಂತರ ಅಂಕಿತಾ ಲೋಖಂಡೆ ಮನೆಮಾತಾದರು. ಅವರು 5 ವರ್ಷಗಳ ಕಾಲ ಈ ಶೋನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು ಮತ್ತು ನಂತರ 'ಕಾಮಿಡಿ ಸರ್ಕಸ್' ಮತ್ತು 'ಏಕ್ ಥಿ ನಾಯಕಿ' ನಂತಹ ಶೋಗಳಲ್ಲಿ ಕಾಣಿಸಿಕೊಂಡರು. 2019 ರಲ್ಲಿ, ಅಂಕಿತಾ ಕಂಗನಾ ರಣಾವತ್ (Kangana Ranaut) ಅಭಿನಯದ  'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇದಾದ ನಂತರ ಅವರು 'ಬಾಘಿ 3' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ‘ಮಣಿಕರ್ಣಿಕಾ’ (Manikarnika: The Queen of Jhansi) ಚಿತ್ರದ ನಂತರ ತಮಗೆ ಯಾವುದೇ ಸಿನಿಮಾ ಆಫರ್ ಬಂದಿಲ್ಲ ಎಂದು ಅಂಕಿತಾ ಹೇಳಿಕೊಂಡಿದ್ದಾರೆ.

ಅಂಕಿತಾ ಪ್ರಕಾರ, "ಮಣಿಕರ್ಣಿಕಾ ನಂತರ, ನಾನು ನನ್ನ ಕೈಯಲ್ಲಿ ಯಾವುದೇ ಕತ್ತಿಯನ್ನು ತೆಗೆದುಕೊಂಡಿಲ್ಲ ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನನ್ನು ಮುನ್ನಡೆಸುವ ಗಾಡ್‌ಫಾದರ್ ಕೂಡ ನನಗೆ ಇಲ್ಲ, ನಾನು ಪ್ರತಿಭಾವಂತೆ, ಇದು ನನಗೆ ಗೊತ್ತು, ನಿಮಗೂ ಇದರ ಅರಿವಿದೆ. ನಿರಾಕರಿಸಲು ನನ್ನ ಬಳಿ ಪ್ರತಿಭೆಯ ಕೊರತೆ ಇಲ್ಲ. ಆದರೆ ಕೆಲಸ ಕೇಳಿಕೊಂಡು ಹೋಗುವುದರಲ್ಲಿಯೂ  ನನಗೆ ನಂಬಿಕೆ ಇಲ್ಲ ಎಂದು  ಅಂಕಿತಾ  ಹೇಳಿದ್ದಾರೆ. ಕೆಲಸದ ಕುರಿತು ಹೇಳುವುದಾದರೆ, 2022 ರಲ್ಲಿ, ಅಂಕಿತಾ ಅವರು, ಪತಿ ವಿಕ್ಕಿ ಜೈನ್ (Vicky Jain) ಜೊತೆಗೆ 'ಸ್ಮಾರ್ಟ್ ಜೋಡಿ' ರಿಯಾಲಿಟಿ ಶೋ ಗೆದ್ದರು. ಅವರ ಎರಡು ಚಿತ್ರಗಳು 'ದಿ ಲಾಸ್ಟ್ ಕಾಫಿ' ಮತ್ತು 'ಸ್ವಾತಂತ್ರ್ಯವೀರ್ ಸಾವರ್ಕರ್', ಈ ವರ್ಷ ದೊಡ್ಡ ತೆರೆಗೆ ಬರಬಹುದು.

ಸುಶಾಂತ್ ಸಿಂಗ್‌ ಹಾಗೆ ಚಿತ್ರರಂಗ ತೊರೆಯಲು ನಿರ್ಧರಿಸಿದ್ರಂತೆ ಖ್ಯಾತ ನಟಿ ಯಾಮಿ ಗೌತಮ್

Latest Videos
Follow Us:
Download App:
  • android
  • ios