ಸದಾ ಡಿಫರೆಂಟ್ ಆಗಿ ಏನಾದರೂ ಹೊಸದನ್ನು ಮಾಡುವ ಅಮಿತಾಬಚ್ಚನ್ ಇದೀಗ ಮೇಕೆ ಜೊತೆ ವಾಕ್ ಮಾಡಲು ಶುರು ಮಾಡಿದ್ದಾರೆ. ಇದೇನಿದು ಮೇಕೆ ಜೊತೆ ವಾಕ್ ಮಾಡ್ತಾರಾ ಎಂದು ಹುಬ್ಬೇರಿಸಬೇಡಿ. 

ಬೆಂಗಳೂರು (ಏ. 12): ಅಮಿತಾಬಚ್ಚನ್ ಮೇಕೆ ಜೊತೆ ವಾಕಿಂಗ್ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ವಿದೇಶದಲ್ಲಿಯೂ ಅಬ್ಬರಿಸಲಿದೆ ’ಕವಚ’

ಮೇಕೆ ಜೊತೆ ಇರುವ ಫೋಟೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. 'ಟಿ3138 ಮೇಕೆ ಜೊತೆ ವಾಕ್' ಎಂದು ಬರೆದುಕೊಂಡಿದ್ದಾರೆ. ಅರೇ! ಇದೇನಿದು ಅಮಿತಾಬ್ ಯಾಕೆ ಮೇಕೆ ಜೊತೆ ವಾಕ್ ಮಾಡ್ತಾ ಇದ್ದಾರೆ ಎಂದೆನಿಸಬಹುದು. 

Scroll to load tweet…

ದ್ವಿಭಾಷೆಯಲ್ಲಿ ತಯಾರಾಗುತ್ತಿರುವ ’ತೇರಾ ಯಾರ್ ಹೂ ಮೈ’ ಶೂಟಿಂಗ್ ನಲ್ಲಿ ಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ. ನಟ ಸೂರ್ಯ ಹಾಗೂ ರಮ್ಯಾ ಕೃಷ್ಣ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

ಈ ಚಿತ್ರದ ಶೂಟಿಂಗ್ ಗಾಗಿ ಅಮಿತಾಬ್ ಮೇಕೆ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಿನಿಮಾ ಬಿಡುಗಡೆಯಾಗುವವರೆಗೆ ಕಾಯಬೇಕಾಗಿದೆ.