ಬಾಲಿವುಡ್ ನಟ ಅಮಿತಾಭ್ ಬಚ್ಚನ್ ರಾಕ್ಲೋದ ಪೋಲಿಷ್ ನಗರದ ಫೋಟೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಪ್ರಸಿದ್ಧ ಹಿಂದಿ ಕವಿಯಾಗಿದ್ದ ಅಮಿತಾಭ್ ಬಚ್ಚನ್ ತಂದೆ ಹರಿವಂಶ ರೈ ಬಚ್ಚನ್ ಅವರ ಹೆಸರನ್ನು ಪೋಲೆಂಡ್ ಸಿಟಿ ಸ್ಕ್ವೇರ್‌ಗೆ ನಾಮಕರಣ ಮಾಡಲಾಗಿದೆ. ಇದು ನಮ್ಮ ಕುಟುಂಬ ಮತ್ತು ಭಾರತಕ್ಕೆ ಹೆಮ್ಮೆ ಎಂದಿದ್ದಾರೆ ನಟ ಅಮಿತಾಭ್.

ರಾಕ್ಲೋ ಸಿಟಿಯ ಸಿಟಿ ಕೌನ್ಸಿಲ್ ಪೊಲೀಷ್ ಸಿಟಿ ಸ್ಕ್ವೇರ್‌ಗೆ ನಮ್ಮ ತಂದೆಯ ಹೆಸರನ್ನು ಇಟ್ಟಿದೆ. ಈ ದಸರಾ ಸಂದರ್ಭ ಇದಕ್ಕಿಂತ ದೊಡ್ಡ ಆಶಿರ್ವಾದ ಏನಿದೆ..? ನಮ್ಮ ಕುಟುಂಬಕ್ಕಿದು ಹೆಮ್ಮೆ. ರಾಕ್ಲೋದಲ್ಲಿರುವ ಭಾರತೀಯರಿಗಿದು ಹೆಮ್ಮೆ ಎಂದು ಬರೆದಿದ್ದಾರೆ.

Big Bಗೆ ಮೊಮ್ಮಗಳ ಬಿಗ್ ಹಗ್: ಹೀಗಿತ್ತು ಅಮಿತಾಭ್ ಬರ್ತ್‌ಡೇ ಪಾರ್ಟಿ

ಬಹಳಷ್ಟು ಜನರು ಅಮಿತಾಭ್ ಸುದ್ದಿಗೆ ಕಮೆಂಟ್ ಮಾಡಿ ಸಂಭ್ರಮಿಸಿದ್ದಾರೆ. ಡಿಸೆಂಬರ್‌ನಲ್ಲಿ ಈ ವಿಚಾರವನ್ನು ಅಮಿತಾಬ್ ಶೇರ್ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ನಾಮಕರಣ ಮಾಡಿದ್ದು, ಫೋಟೋವನ್ನು ನಟ ಶೇರ್ ಮಾಡಿಕೊಂಡಿದ್ದಾರೆ. ಪೋಲೆಂಡ್‌ ಚರ್ಚ್‌ನಲ್ಲಿ ಅಮಿತಾಭ್ ತಂದೆಯ ಹೆಸರಲ್ಲಿ ಪ್ರಾರ್ಥನೆ ಸಲ್ಲಿಸಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.