ಆಮೀರ್​ ಖಾನ್​ ಅವರ ಮಾಜಿ ಪತ್ನಿ ಕಿರಣ್​ ರಾವ್​ ಅವರು ತಾವು ಹಲವು ಬಾರಿ ಗರ್ಭಪಾತ ಆಗಿರುವ ಕುರಿತು ಓಪನ್​  ಆಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?  

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್​​ ಖಾನ್ ಅವರು ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಇಂದು ಅಂದರೆ ಮಾರ್ಚ್​ 14 ಆಮೀರ್​ ಖಾನ್​ ಅವರಿಗೆ 59ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಮಾಜಿ ಪತ್ನಿ ಕಿರಣ್​ ರಾವ್​ ಕೆಲವೊಂದು ವಿಷಯಗಳನ್ನು ಬಹಿರಂಗಗೊಂಡಿದ್ದಾರೆ. ಅಂದಹಾಗೆ, ಕೆಲವು ಬಾಲಿವುಡ್ ನಟರಂತೆ ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇವರ ಇಬ್ಬರು ಪತ್ನಿಯರೂ ಹಿಂದೂಗಳೇ ಎನ್ನುವುದು ವಿಶೇಷ, ಈಗ ಇಬ್ಬರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್​ ಮತ್ತು ಜುನೈದ್​ ಖಾನ್​ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್​ ರಾವ್​ ಅವರಿಂದ ಆಜಾದ್​ ರಾವ್​ ಖಾನ್​ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ಕಳೆದ ಡಿಸೆಂಬರ್​ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್​ ಅವರ ಮದುವೆ ಸಮಾರಂಭಕ್ಕೆ ಕಿರಣ್​ ಅವರು ಕೂಡ ಹಾಜರಿದ್ದುದು ಇದಕ್ಕೆ ಸಾಕ್ಷಿ.

ಇದೀಗ ಲಾಪತಾ ಲೇಡೀಸ್​ ಚಿತ್ರ ಮಾಡುವ ಮೂಲಕ ಕಿರಣ್​ ರಾವ್​ ಅವರು ಮತ್ತೆ ಬಣ್ಣದ ಲೋಕಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಇದು ಅವರ ನಿರ್ದೇಶನದ ಎರಡನೆಯ ಚಿತ್ರ. ಈ ಚಿತ್ರ ಇದೀಗ 50 ದಿನಗಳನ್ನು ಪೂರೈಸಿದೆ. ಇದೀಗ ನಟಿ ತಮ್ಮ ಮತ್ತು ಆಮೀರ್​ ಖಾನ್​ ಕುರಿತು ಮಾತನಾಡಿದ್ದಾರೆ. ತಾವು ಮಗುವನ್ನು ಪಡೆಯಲು ಹೇಗೆಲ್ಲಾ ಕಷ್ಟಪಟ್ವಿ, ಕೊನೆಗೆ ಮಗು ಹೆರಲು ಸಾಧ್ಯವಾಗದೇ ಬಾಡಿಗೆ ತಾಯ್ತನದ ಮೂಲಕ ಹೇಗೆ ಮಗುವನ್ನು ಪಡೆದುಕೊಂಡೆವು ಎಂಬ ಬಗ್ಗೆ ಮಾತನಾಡಿದ್ದಾರೆ. 

ಡಿವೋರ್ಸ್​ ಆದ್ಮೇಲೆ ಡೇಟಿಂಗ್ ಶುರು ಮಾಡಿದ್ವಿ​: ಆಮೀರ್​ ಖಾನ್​ 2ನೇ ಮಾಜಿ ಪತ್ನಿ ಕಿರಣ್​

ಝೂಮ್‌ ಮಾಧ್ಯಮದ ಜತೆ ಈ ವಿಷಯವನ್ನು ಕಿರಣ್‌ ರಾವ್‌ ಶೇರ್​ ಮಾಡಿಕೊಂಡಿದ್ದಾರೆ. ನಾನು ಮತ್ತು ಆಮೀರ್​ ಮಗು ಹೊಂದಲು ತುಂಬಾ ಪ್ರಯತ್ನಿಸಿದೆವು. ಆದರೆ, ಐದು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಮಿಸ್‌ಕ್ಯಾರೇಜ್‌ ಆಯಿತು. ಗರ್ಭ ಧರಿಸಿದರೂ ಅದು ನಿಲ್ಲುತ್ತಿರಲಿಲ್ಲ. ಆದರೆ ತಾಯಿಯಾಗುವ ಆಸೆ ತುಂಬಿತ್ತು. ಮಗುವನ್ನು ಹೊಂದಲು ತುಂಬಾ ಉತ್ಸುಕಳಾಗಿದ್ದೆ. ಕೊನೆಗೆ ಗರ್ಭ ನಿಲ್ಲಲು ಸಾಧ್ಯವೇ ಇಲ್ಲ ಎಂದಾದಾಗ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದೆವು. ಆಜಾದ್​ ಹುಟ್ಟಿದ ಎಂದು ಹೇಳಿದ್ದಾರೆ. ಇದನ್ನು ಬಿಟ್ಟು ಬೇರೆ ಆಯ್ಕೆ ನಮಗೆ ಇರಲಿಲ್ಲ ಎಂದಿದ್ದಾರೆ. 

ಮಗುವನ್ನು ಪಡೆದ ಬಳಿಕ ಹತ್ತು ವರ್ಷ ಚಿತ್ರರಂಗದಿಂದ ದೂರವಾಗಿದ್ದ ಕಿರಣ್​ ಅವರು, ಅಜಾದ್‌ನನ್ನು ಬೆಳೆಸುವುದೇ ನನ್ನ ಪ್ರಮುಖ ನಿರ್ಧಾರವಾಗಿತ್ತು. ಆದ್ದರಿಂದ ಚಿತ್ರರಂಗದಿಂದ ದೂರವಾಗಿರುವುದಕ್ಕೆ ಯಾವುದೇ ಬೇಸರವಾಗಿಲ್ಲ ಎಂದು ಹೇಳಿದ್ದಾರೆ. ಅಜಾದ್‌ನನ್ನು ಮಗನಾಗಿ ಪಡೆದು ನಾನು ತುಂಬಾ ಖುಷಿಪಟ್ಟೆ. ಇದು ನನ್ನ ಜೀವನದ ಅಮೂಲ್ಯ ವರ್ಷಗಳು. ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಸಿನಿಮಾ ಮಾಡಿಲ್ಲ ಎಂದು ಬೇಜಾರಿಲ್ಲ. ನಾನು ಈ ಹತ್ತು ವರ್ಷವನ್ನು ಖುಷಿಯಿಂದ ಕಳೆದ. ಯಾವುದೇ ಬೇಸರವಿಲ್ಲ ಎಂದಿದ್ದಾರೆ. ಅಂದಹಾಗೆ ಆಜಾದ್​ ಹುಟ್ಟಿದ್ದು 2013ರಲ್ಲಿ. ಇದೇ ಸಂದರ್ಭದಲ್ಲಿ ಬಾಡಿಗೆ ತಾಯ್ತನದ ಕುರಿತು ಮಾತನಾಡಿರುವ ಅವರು, ಸ್ವಾಭಾವಿಕವಾಗಿ ಮಗುವನ್ನು ಪಡೆಯಲು ಸಾಧ್ಯವಿಲ್ಲದೆ ಇರುವವರು ಇನ್ನೊಂದು ವಿಧಾನವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ಮಾತನಾಡಲು ಬಯಸುವುದಿಲ್ಲ. ಸಾರ್ವಜನಿಕರ ಗಮನದಲ್ಲಿರುವ ನಾವು ಈ ಸುದ್ದಿಯನ್ನು ಮುಚ್ಚಿಡುವುದಿಲ್ಲ. ನಮ್ಮ ನಿರ್ಧಾರದ ಬಗ್ಗೆ ಯಾವುದೇ ಬೇರೆ ಭಾವನೆ ಹೊಂದಿಲ್ಲ. ಈ ಕುರಿತು ಮುಕ್ತವಾಗಿ ಮಾತನಾಡಲು ನಿರ್ಧರಿಸಿದ್ದೇವೆ. ನಮ್ಮ ಅನುಭವ ತಿಳಿದುಕೊಂಡು ಜನರಿಗೆ ಉಪಯೋಗವೂ ಆಗಬಹುದು ಎಂದಿದ್ದಾರೆ. 

ಕೃಷ್ಣಮೃಗ ಕೊಂದದ್ದಾಯ್ತು, ಸದ್ದು ಮಾಡ್ತಿದೆ ಹಿಟ್‌ ಆ್ಯಂಡ್ ರನ್ ಕೇಸ್! ಸಲ್ಮಾನ್‌ ಕತೆ ಒಂದಾ... ಎರಡಾ?