ಹಾಲಿವುಡ್‌ ಚಿತ್ರರಂಗದ ಖ್ಯಾತ ನಟ ಎಲ್ವಿಸ್‌ ಪ್ರೀಸ್ಲಿ ಮತ್ತು ಪ್ರಿಸ್ಸಿಲ್ಲಾ ಪ್ರೀಸ್ಲಿ ಅವರ ಮೊಮ್ಮಗ, ಖ್ಯಾತ ಪಾಪ್‌ ಗಾಯಕಿ ಲಿಸಾ ಮೇರಿ ಮಗ ಬೆಂಜಮಿನ್ ಕೀಫ್ ನೇಣಿಗೆ ಶರಣಾಗಿದ್ದಾರೆ.

'ನನ್ನನ್ನು ಕ್ಷಮಿಸಿ' ಸ್ಯಾಂಡಲ್‌ವುಡ್ ನಿರ್ಮಾಪಕ ನೇಣಿಗೆ ಶರಣು

ಕೆಲ ಮೂಲಗಳ ಪ್ರಕಾರ ಬೆಂಜಮಿನ್ ಕೀಫ್ ಭಾನುವಾರ ಕ್ಯಾಲಿಪೋರ್ನಿಯಾದ ನಿವಾಸದಲ್ಲಿ self-inflicted (ಸ್ವಯಂ ಪ್ರೇರಿತನಾಗಿ) ಗುಂಡೇಟಿನಿಂದ ಗಾಯ ಮಾಡಿಕೊಂಡಿದ್ದಾರೆ. ಆದರೆ ಕೆಲ ಖಾಸಗಿ ವೆಬ್‌ಸೈಟ್‌ಗಳ ಪ್ರಕಾರ ಬೆಂಜಮಿನ್‌ ತನ್ನ ಕೋಣೆಯಲ್ಲಿ ಫ್ಯಾನ್‌ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಮಾಧ್ಯಮಗಳ ಎದುರು ಹೆಚ್ಚಾಗಿ ಕಾಣಿಸಿಕೊಳ್ಳಲು ನಿರಾಕರಿಸುತ್ತಿದ್ದ ಬೆಂಜಮಿನ್ ಕೀಫ್ 2019ರಲ್ಲಿ ಲಿಸಾ ಮೇರಿ ಶೇರ್ ಮಾಡಿದ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡಿದ್ದರು. ಥೇಟ್ ತಾಯಿಯಂತೆ ಕಾಣುತ್ತಿರುವುದಕ್ಕೆ ನೆಟ್ಟಿಗರಿಂದ ಮೆಚ್ಚುಗೆ ಪಡೆದುಕೊಂಡಿದ್ದರು. 

 

ಮಗನ ಅಗಲಿಕೆಯಿಂದ ಮನನೊಂದಿರುವ ಲಿಸಾ ಕಾರಣವೇನೆಂದು ಪತ್ತೆ ಹಚ್ಚಲು ಪೊಲೀಸರ ಮೊರೆ ಹೋಗಿದ್ದಾರೆ. ' ಲಿಸಾ ಶಾಕ್‌ನಲ್ಲಿ ಇದ್ದಾಳೆ ಆಕೆಯ ಎದೆಯೊಡೆದಿದೆ. ತನ್ನ 11ವರ್ಷ ಪುಟ್ಟ ಅವಳಿ ಮಕ್ಕಳು ಮತ್ತು ಹಿರಿಯ ಪುತ್ರಿಗೋಸ್ಕರ ಧೈರ್ಯವಾಗಿದ್ದಾಳೆ. ಒಬ್ಬನೇ ಮಗನಿದ್ದ ಕಾರಣ ಆತನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಳು' ಎಂದು ಕುಟುಂಬಸ್ಥರು ಮಾತನಾಡಿದ್ದಾರೆ. 

'ಲಿಸಾ ನೀನು ತಾಯಿಯ ಗರ್ಭದಲ್ಲಿದ್ದಾಗಿನಿಂದಲೂ ನಿನ್ನನ್ನು ನೋಡಿರುವೆ. ನೀನು ಎಂಥಾ ಧೈರ್ಯವಂತೆ ಎಂದು ನನಗೆ ಗೊತ್ತು ಆದರೆ ಈ ಘಟನೆ ನಿನ್ನ ಜೀವನದಲ್ಲಿ ಎದುರಾಗುತ್ತದೆ ಎಂದು ಎಂದಿಗೂ ಕಲ್ಪಿಸಿಕೊಂಡಿರಲಿಲ್ಲ' ಎಂದು  ಗಾಯಕಿ ನ್ಯಾನ್ಸಿ ಸಿನಾತ್ರಾ ಟ್ಟೀಟ್‌ ಮಾಡಿದ್ದಾರೆ.