ತಾಯಿಯನ್ನೇ  ಸ್ಫೂರ್ತಿಯಾಗಿಟ್ಟುಕೊಂಡು ಬಣ್ಣದ ಲೋಕಕ್ಕೆ ಕಾಲಿಟ್ಟ ಅಮೆರಿಕಾದ ಸುಂದರ ಚೆಲುವೆ ಸೆಲೆನಾ ಗೊಮೇಝ್ ತನ್ನ ಜೀವನದಲ್ಲಿ ಇದುವರೆಗೂ ಎಲ್ಲಿಯೂ ಹೇಳಿಕೊಳ್ಳದ ಘಟನೆಯೊಂದನ್ನು 'ಕಿಸ್ ಎಫ್‌ ಎಂ'ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 

ಸೌತ್ ಇಂಡಿಯನ್ ಚಿತ್ರಕ್ಕೆ ಜಾಹ್ನವಿ ಕಪೂರ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

ಕಿಚ್ಚ ವಯಸ್ಸಿನಲ್ಲಿ ತಂದೆ-ತಾಯಿ ದೂರ ಆಗಿದ್ದನ್ನು ಕಂಡ ಸೆಲೆನಾಗೆ ಜೀವನದಲ್ಲಿ ಒಂದೊಂದು ರೂಪಾಯಿಯೂ ಮುಖ್ಯವಾಗಿತ್ತು.  ತಾಯಿ ವೇದಿಕೆ ಮೇಲೆ ಬಣ್ಣ ಹಚ್ಚುತ್ತಿದ್ದುದ್ದನ್ನು ಕಂಡು ಆಕೆಯೂ ಬಣ್ಣ ಹಚ್ಚಲು ಶುರು ಮಾಡಿದ್ದರು. ಆ ನಂತರ ಆಕೆಯ ಪ್ರತಿಭೆ ಕಂಡು ವಾಹಿನಿಯೊಂದು 'Hannah Montana' ಟಿವಿ ಸೀರಿಸ್‌ನಲ್ಲಿ ನಟಿಸುವ ಅವಕಾಶ ನೀಡಿತ್ತು.  

'ಅಮ್ಮ'ನಾದ ಕಂಗನಾ ರಾಣಾವತ್; ಹೀಗಾಗಿದ್ದಾರೆ ನೋಡಿ 'ಕ್ವೀನ್'!

ಸೆಲೆನಾ ಹಾಲಿವುಡ್‌ ಬೌಲ್‌ನಲ್ಲಿ ಎಡ್‌ ಶೀರನ್ ಕಾನ್ಸರ್ಟ್‌ ನೋಡಲು ಹೋಗುವಾಗ ದಾರಿಯಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಕಾರಣ ಶೌಚಾಲಯಕ್ಕೆ ಹೋಗಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಪ್ಯಾಂಟ್‌ನಲ್ಲೇ ಮಲ ಮತ್ತು ಮೂತ್ರ ಮಾಡಿಕೊಂಡಿದ್ದರಂತೆ.  ಆದರೆ ಯಾರಿಗೂ ಗೊತ್ತಾಗಬಾರದೆಂದು ಸ್ವೆಟರ್‌ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರಂತೆ!