ವಿಶ್ವವಿಖ್ಯಾತ ಕಾನ್‌ ಚಲನಚಿತ್ರೋತ್ಸವ ಸ್ಪರ್ಧಾ ವಿಭಾಗದಲ್ಲಿ ಈ ಬಾರಿ ಭಾರತೀಯ ಚಿತ್ರವೊಂದು ಆಯ್ಕೆಯಾಗಿದೆ. ಪಾಯಲ್‌ ಕಪಾಡಿಯಾ ನಿರ್ದೇಶನ ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್‌ ಲೈಟ್‌’ ಚಿತ್ರ ಈ ಬಾರಿ ಆಯ್ಕೆಯಾಗಿದೆ. ಕಳೆದ 40 ವರ್ಷಗಳಲ್ಲೇ ಭಾರತೀಯ ಚಿತ್ರವೊಂದು ಆಯ್ಕೆಯಾಗಿದ್ದು ಇದೇ ಮೊದಲು ಎಂಬುದು ವಿಶೇಷ.

ನವದೆಹಲಿ (ಏ.12): ವಿಶ್ವವಿಖ್ಯಾತ ಕಾನ್‌ ಚಲನಚಿತ್ರೋತ್ಸವ ಸ್ಪರ್ಧಾ ವಿಭಾಗದಲ್ಲಿ ಈ ಬಾರಿ ಭಾರತೀಯ ಚಿತ್ರವೊಂದು ಆಯ್ಕೆಯಾಗಿದೆ. ಪಾಯಲ್‌ ಕಪಾಡಿಯಾ ನಿರ್ದೇಶನ ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್‌ ಲೈಟ್‌’ ಚಿತ್ರ ಈ ಬಾರಿ ಆಯ್ಕೆಯಾಗಿದೆ. ಕಳೆದ 40 ವರ್ಷಗಳಲ್ಲೇ ಭಾರತೀಯ ಚಿತ್ರವೊಂದು ಆಯ್ಕೆಯಾಗಿದ್ದು ಇದೇ ಮೊದಲು ಎಂಬುದು ವಿಶೇಷ.

ಜೊತೆಗೆ ಭಾರತೀಯ ಮೂಲದ ಬ್ರಿಟನ್‌ ಸಂಜಾತೆ ಸಂಧ್ಯಾ ಸೂರಿ ಅವರ ‘ಸಂತೋಷ್‌’ ಚಿತ್ರವು ವಿಭಿನ್ನ ಶೈಲಿಯ ಚಿತ್ರಗಳ ವಿಭಾಗಕ್ಕೆ ಆಯ್ಕೆಯಾಗಿದೆ.

1983ರಲ್ಲಿ ಮೃಣಾಲ್‌ ಸೇನ್‌ ಅವರ ‘ಖಾರಿಜ್‌’ ಚಿತ್ರ ಕಡೆಯ ಬಾರಿಗೆ ಚಿತ್ರೋತ್ಸವಕ್ಕೆ ಆಯ್ಕೆಯಾದ ಭಾರತೀಯ ಚಿತ್ರವಾಗಿತ್ತು. ಈ ಚಿತ್ರೋತ್ಸವದ ಅತ್ಯುನ್ನತ ಪುರಸ್ಕಾರವಾದ ಗೋಲ್ಡನ್‌ ಪಾಲ್ಮ್‌ ಪ್ರಶಸ್ತಿಗೆ 1946ರಲ್ಲಿ ಚೇತನ್‌ ಆನಂದ್‌ ಅವರ ‘ನೀಚ ನಗರ್‌’ ಚಿತ್ರ ಆಯ್ಕೆಯಾಗಿತ್ತು. ಇದು ಈ ಪ್ರಶಸ್ತಿ ಪಡೆದ ಮೊದಲ ಚಿತ್ರ ಎಂಬ ಖ್ಯಾತಿ ಗಳಿಸಿದೆ. 

ಅಲ್ಲು ಅರ್ಜುನ್ ಡಾನ್ಸಿಂಗ್ ಸ್ಕಿಲ್ಸ್‌ ಕದಿಯುತ್ತೇನೆ; ರಶ್ಮಿಕಾ ಮಂದಣ್ಣ ಮಾತಿಗೆ ಆ್ಯಂಕರ್ ಕಕ್ಕಾಬಿಕ್ಕಿ!