ಬಾಲಿವುಡ್ ನಟಿ ಆಲಿಯಾ ಭಟ್ ಕಣ್ಣಿಗೇನಾಯ್ತು..? ಹೌದು. ರಣಬೀರ್ ಕಪೂರ್ನ ಪತ್ನಿಯಾಗಲಿರೋ ನಟಿ ಆಲಿಯಾ ಭಟ್ ಕಣ್ಣಿನ ಆಸ್ಪತ್ರೆಗೆ ಹೋಗಿದ್ದಾರೆ.

ರಣಬೀರ್ ಕಪೂರ್ನ ಪರ್ಸನಲ್ ಬಾಡಿಗಾರ್ಡ್ ಜೊತೆ ಆಲಿಯಾ ಆಸ್ಪತ್ರೆಗೆ ಹೋಗಿದ್ದಾರೆ. ಆಲಿಯಾ ಡೆನಿಮ್ ಶಾರ್ಟ್ ಮತ್ತು ಪ್ರಿಂಟೆಡ್ ಟಾಪ್ ಧರಿಸಿದ್ದಾರೆ. ಫೇಸ್ಮಾಸ್ಕ್ ಧರಿಸಿ ದೊಡ್ಡ ಬ್ಯಾಗ್ ತೆಗೆದುಕೊಂಡಿದ್ದರು.

ಆಲಿಯಾ ಭಟ್ ಧರಿಸಿದ ಸಿಂಪಲ್ ವೈಟ್ ಶೂ ಬೆಲೆ ಕೇಳಿದ್ರಾ..?

ಮಾಲ್ಡೀವ್ಸ್ನಲ್ಲಿ ವೆಕೇಷನ್ನಲ್ಲಿದ್ದ ಆಲಿಯಾ ಭಟ್ ರಾಜೀವ್ ಕಪೂರ್ ನಿಧನರಾದಾಗ ಮರಳಿ ಬಂದಿದ್ದರು. ಈ ಸಂದರ್ಭ ರಣಬೀರ್ ಅವರೂ ಸ್ಥಳದಲ್ಲಿದ್ದರು.

ರಣಧೀರ್ ಕಪೂರ್ ಅವರ 74ನೇ ವರ್ಷದ ಬರ್ತ್ಡೇ ಡಿನ್ನರ್ನಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್ ಜೊತೆಯಾಗಿ ಭಾಗಿಯಾಗಿದ್ದರು. ಕರೀನಾ ಕಪೂರ್, ಕರಿಷ್ಮಾ ಅವರು ಬಂದಿದ್ದರು.