ಬಾಲಿವುಡ್‌ನ ನಟಿ ಆಲಿಯಾ ಭಟ್ ಇತ್ತೀಚೆಗೆ ತನ್ನ ಸಹೋದರಿ ಶಾಹೀನ್ ಮತ್ತು ಬಿಎಫ್‌ಎಫ್‌ಎಸ್ ಅನುಷ್ಕಾ ರಂಜನ್ ಅವರೊಂದಿಗೆ ಮಾಲ್ಡೀವ್ಸ್‌ಗೆ ವೆಕೇಷನ್‌ಗೆ ಹೋಗಿದ್ದರು. ಈಗ ನಟಿ ಅರ್ಧದಲ್ಲಿ ಮರಳಿದ್ದಾರೆ. 

ಗೆಳೆಯ ರಣಬೀರ್ ಕಪೂರ್ ಅವರ ಚಿಕ್ಕಪ್ಪ ರಾಜೀವ್ ಕಪೂರ್ ಅವರ ಹಠಾತ್ ಸಾವಿನ ಕಾರಣ ಪ್ರತಿಭಾವಂತ ನಟಿ ಮರಳಿ ಬರಬೇಕಾಯಿತು. ರಜಾದಿನವನ್ನು ಕಡಿತಗೊಳಿಸಿ ಕಪೂರ್ ಕುಟುಂಬವನ್ನು ಅವರ ಅಗತ್ಯದ ಸಮಯದಲ್ಲಿ ಆಲಿಯಾಸೇರಿಕೊಂಡಿದ್ದಾರೆ.

ರಾಜೀವ್ ಕಪೂರ್ ಸಾವು: ಚಿಕ್ಕಪ್ಪನ ನೋಡಲು ಬಂದ ತುಂಬು ಗರ್ಭಿಣಿ ಕರೀನಾ

ಇತ್ತೀಚೆಗೆ, ಟೈ-ಡೈ ಬ್ಲೂ ಟೀ ಮತ್ತು ಡೆನಿಮ್ ಶಾರ್ಟ್ಸ್ ಧರಿಸಿದ್ದ ಆಲಿಯಾ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು. 5000 ರೂ.ಗಳ ಬೆಲೆಯ ಬಿಳಿ ಮೆಲಿಸ್ಸಾ ಕಿಕ್-ಆಫ್  ಸ್ನೀಕರ್‌ಗಳೊಂದಿಗೆ ಆಲಿಯಾ ಭಟ್ ಸ್ಟೈಲಿಷ್ ಕಾಣುತ್ತಿದ್ದರು.

ಬಾಲಿವುಡ್ ಹಿರಿಯ ನಟ, ನಿರ್ಮಾಪಕ ರಾಜೀವ್ ಕಪೂರ್ ಅವರು ನಿಧನರಾದ ಹಿನ್ನೆಲೆ ನಟಿ ತಮ್ಮ ಟ್ರಿಪ್ ಮಧ್ಯೆಯೇ ಮರಳಿ ಬಂದಿದ್ದಾರೆ. ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದರು ಆಲಿಯಾ.