ಮಾರ್ಚ್ 15 ರಂದು ಆಲಿಯಾ ಭಟ್ 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಬರ್ತ್ ಡೇಗೂ ಮುನ್ನವೇ ಮುಂಬೈನಲ್ಲಿ ಪತಿ ರಣಬೀರ್ ಕಪೂರ್ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ರಣಬೀರ್, ಆಲಿಯಾ ಮೂಗಿಗೆ ಕೇಕ್ ಹಚ್ಚಿ ಹಣೆಗೆ ಮುತ್ತಿಟ್ಟರು. ಆಲಿಯಾ ಪೀಚ್ ಬಣ್ಣದ ಕುರ್ತಿ ಧರಿಸಿದ್ದರು. ರಣಬೀರ್ ಬಿಳಿ ಬಣ್ಣದ ಉಡುಪಿನಲ್ಲಿದ್ದರು. ಬ್ರಹ್ಮಾಸ್ತ್ರ 2 ಸಿನಿಮಾ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ರಣಬೀರ್ ತಿಳಿಸಿದರು.
ಬಾಲಿವುಡ್‌ನ ಪ್ರತಿಭಾನ್ವಿತ ಹಾಗೂ ಬ್ಯೂಟಿಫುಲ್ ನಟಿ ಆಲಿಯಾ ಭಟ್ (Actress Alia Bhatt) ಮಾರ್ಚ್ 15 ರಂದು 32 ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅವರ ಬರ್ತ್ ಡೇ ಪಾರ್ಟಿ (Birthday Party)ಗಳು ಈಗಿನಿಂದ್ಲೇ ಶುರುವಾಗಿದೆ. ಇಂದು ಮುಂಬೈನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಆಲಿಯಾ ಭಟ್, ಪಾಪರಾಜಿಗಳ ಜೊತೆ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಮಾಧ್ಯಮಗಳು ಮತ್ತು ಫ್ಯಾನ್ಸ್ ಮುಂದೆ ಕೇಕ್ ಕತ್ತರಿಸಿದ ಆಲಿಯಾಗೆ ನಟ ಹಾಗೂ ಆಲಿಯಾ ಪತಿ ರಣಬೀರ್ ಕಪೂರ್ (Ranbir Kapoor) ಜೊತೆಯಾಗಿದ್ದರು.
ಆಲಿಯಾ ಬರ್ತ್ ಡೇ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಜಾಲಿಯಾಗಿ ಎಂಜಾಯ್ ಮಾಡಿರೋದನ್ನು ನೀವು ಕಾಣ್ಬಹುದು. ಆಲಿಯಾ ಮೂಗಿಗೆ ಕೇಕ್ ಹಚ್ಚಿದ ರಣಬೀರ್ ಕಪೂರ್ ನಂತ್ರ ಪತ್ನಿ ಹಣೆಗೆ ಮುತ್ತಿಟ್ಟು, ವಿಶ್ ಮಾಡಿದ್ದಾರೆ. ಕೇಕ್ ತಿಂದು ಖುಷಿ ಹಂಚಿಕೊಂಡ ಆಲಿಯಾ, ಪಾಪರಾಜಿಗಳು ಮತ್ತು ಫ್ಯಾನ್ಸ್ ಜೊತೆ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಫೋಟೋ ತೆಗೆಯುವ ವೇಳೆ ರಣಬೀರ್ ಕಪೂರ್ ತೋಳಿನಲ್ಲಿ ಬಂದಿಯಾಗಿದ್ದ ಆಲಿಯಾ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಲಿಯಾ ಬರ್ತ್ ಡೇ ಸಂಭ್ರಮದ ಒಂದೊಂದೇ ವಿಡಿಯೋ ವೈರಲ್ ಆಗ್ತಿದ್ದು, ಆಲಿಯಾ ಹಾಗೂ ರಣಬೀರ್ ಪ್ರೀತಿ, ಅವರ ಬಾಂಡಿಂಗ್ ಹಾಗೂ ಆಲಿಯಾ ಸಿಂಪ್ಲಿಸಿಟಿ ಅಭಿಮಾನಿಗಳನ್ನು ಮತ್ತಷ್ಟು ಸೆಳೆದಿದೆ. ಕೇಕ್ ಕತ್ತರಿಸಿದ ನಂತ್ರ ಆಲಿಯಾ ಹಾಗೂ ರಣಬೀರ್ ಕಪೂರ್, ಬ್ರಹ್ಮಾಸ್ತ್ರ 2 ಸಿನಿಮಾ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ನಟಿ ಭಾಗ್ಯಶ್ರೀಗೆ ಗಂಭೀರ ಗಾಯ: ಆಸ್ಪತ್ರೆಯಲ್ಲಿನ ಫೋಟೋ ನೋಡಿ ಫ್ಯಾನ್ಸ್ ಶಾಕ್- ನಟಿಗೆ ಆಗಿದ್ದೇನು?
ಗಮನ ಸೆಳೆದ ಆಲಿಯಾ ಔಟ್ ಫಿಟ್ : ಎಲ್ಲರ ಫೆವರೆಟ್ ಆಕ್ಟರ್ ಹಾಗೂ ಕಪೂರ್ ಕಾಂದಾನ್ ಸೊಸೆ ಆಲಿಯಾ ಭಟ್, ತಮ್ಮ ಪ್ರೀ ಬರ್ತ್ಡೇ ಪಾರ್ಟಿಗೆ ತುಂಬಾ ಸಿಂಪಲ್ ಆಗಿ ಬಂದಿದ್ರು. ಆಲಿಯಾ ಔಟ್ ಫಿಟ್ ಗಮನ ಸೆಳೆದಿದೆ. ಪೀಚ್ ಕಲರ್ ಚಿಕನ್ಕರಿ ಕುರ್ತಿ ಹಾಗೂ ಪ್ಯಾಂಟ್ ಧರಿಸಿದ್ದ ಆಲಿಯಾ, ಅತ್ಯಂತ ಸುಂದರವಾಗಿ ಕಾಣ್ತಿದ್ದರು. ಹೈ ನೆಕ್ ಕಾಲರ್ ಹಾಗೂ ವಿಕಟ್ ನೆಕ್ ಲೈನ್ ಇರುವ ಕುರ್ತಾ ಮೇಲೆ ಬಿಳಿ ಬಣ್ಣದ್ದ ಡ್ರೆಸ್ ಹಾಕಿದ್ದ ಆಲಿಯಾ, ವೈಟ್ ಕಲರ್ ಪ್ಯಾಂಟ್ ಹಾಕಿದ್ದರು. ಇಲ್ಲಿ ಮತ್ತಷ್ಟು ಗಮನ ಸೆಳೆದಿದ್ದು ಆಲಿಯಾ ಡ್ರೆಸ್ ಬೆಲೆ. ಆಲಿಯಾ 22,500 ರೂಪಾಯಿ ಬೆಲೆಯ ಡ್ರೆಸ್ ಧರಿಸಿದ್ದರು. ಸಿಂಪಲ್ ಡ್ರೆಸ್ ಗೆ ಅತ್ಯಂತ ಕಡಿಮೆ ಮೇಕಪ್ ಮಾಡಿದ್ದ ಆಲಿಯಾ, ಹಣೆ ಮೇಲೋಂದು ಸಣ್ಣ ಬಿಂದಿ ಇಟ್ಟಿದ್ದರು. ಕೂದಲನ್ನು ಹಾಗೆ ಬಿಟ್ಟಿದ್ದ ಆಲಿಯಾ, ಸಣ್ಣ ಕಿವಿಯೋಲೆ ಧರಿಸಿ, ಹೀಲ್ಡ್ ಧರಿಸಿ ತಮ್ಮ ಔಟ್ ಫಿಟ್ ಪೂರ್ಣಗೊಳಿಸಿದ್ದರು. ಇನ್ನು ರಣಬೀರ್ ಕಪೂರ್ ಸಂಪೂರ್ಣ ಬಿಳಿ ಬಣ್ಣದಲ್ಲಿ ಮಿಂಚಿದ್ದರು. ಬಿಳಿ ಶರ್ಟ್, ಬಿಳಿ ಪ್ಯಾಂಟ್ ಧರಿಸಿದ್ದ ರಣವೀರ್ ಶೂ ಹಾಕಿದ್ರು.
ಪಾಪ..! ಆ ವಿಷ್ಯ ಇಟ್ಕೊಂಡು ನಿತ್ಯ ನಟ ಶಾಹೀದ್ ಕಪೂರ್‌ಗೆ ಬೈಯ್ಯುವ ಪತ್ನಿ ಮೀರಾ ರಜಪೂತ್!
ಯಾವಾಗ ಬ್ರಹ್ಮಾಸ್ತ್ರ ಸಿನಿಮಾ ಶೂಟಿಂಗ್ ಶುರು? : ಬ್ರಹ್ಮಾಸ್ತ್ರ ಪಾರ್ಟ್ 2 – ದೇವ ಚಿತ್ರದ ಬಗ್ಗೆ ರಣಬೀರ್ ಕಪೂರ್ ಮಾಹಿತಿ ನೀಡಿದ್ದಾರೆ. ನಿರ್ದೇಶಕ ಅಯಾನ್ ಮುಖರ್ಜಿ ಸದ್ಯ ವಾರ್ – 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಾರ್ – 2 ಸಿನಿಮಾ ತೆರೆಗೆ ಬರ್ತಾ ಇದ್ದಂತೆ ಬ್ರಹ್ಮಾಸ್ತ್ರ – 2 ಸಿನಿಮಾದ ಪ್ರೀ ಪ್ರೊಡಕ್ಷನ್ ಶುರುವಾಗಲಿದೆ. ಅತಿ ಶೀಘ್ರದಲ್ಲಿ ಇದ್ರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಬಾಲಿವುಡ್ ಪ್ರಸಿದ್ಧ ಜೋಡಿಗಳಲ್ಲಿ ಒಂದು. ಪ್ರೀತಿಸಿ ಮದುವೆಯಾದ ಜೋಡಿಗೆ ಒಂದು ಮುದ್ದಾದ ಮಗುವಿದೆ. ಸಂದರ್ಶನವೊಂದರಲ್ಲಿ ಇನ್ನೊಂದು ಮಗು ಪಡೆಯುವ ಆಸೆಯನ್ನು ಆಲಿಯಾ ವ್ಯಕ್ತಪಡಿಸಿದ್ದಾರೆ.
