ಕೊರೋನಾ ವಾರಿಯರ್ಸ್ ಗೆ ಅಕ್ಷಯ್ ಕುಮಾರ್ ವಂದನೆ/  ಕೇಸರಿ ಸಿನಿಮಾದ ಹಾಡಿನ ಮೂಲಕ ವೈದ್ಯರಿಗೆ ನಮನ/ ಸೋಶಿಯಲ್ ಮೀಡಿಯಾ ಮೂಲಕ ಸಂದೇಶ ಸಾರಿದ ಅಕ್ಷಯ್ ಕುಮಾರ್

ಮುಂಬೈ(ಏ. 24) ಒಂದರ್ಥದಲ್ಲಿ ಕೊರೋನಾ ವಾರಿಯರ್ಸ್ ಆಗಿ ನಿಂತಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಈಗ ತೇರಿ ಮಿಟ್ಟಿ ಸಾಂಗ್ ಅನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ಕೇಸರಿ ಸಿನಿಮಾದ ಹಾಡನ್ನು ಶೇರ್ ಮಾಡಿಕೊಂಡಿರುವ ಅಕ್ಷಯ್ ಕುಮಾರ್ ವೈದ್ಯರಿಗೆ ವಂದನೆ ಸಲ್ಲಿಸುತ್ತಾರೆ. ಸಲ್ಮಾನ್ ಖಾನ್ ಸಹ ತಮ್ಮದೇ ದನಿಯಲ್ಲಿ ತಾವೇ ಸಾಹಿತ್ಯ ಬರೆದು ಹಾಡೊಂದನ್ನು ಹಾಡಿದ್ದರು. ಬಾಲಿವುಡ್ ನ ಅನೇಕ ನಾಯಕ ನಾಯಕಿಯರೂ ಸಹ ಕೊರೋನಾ ಜಾಗೃತಿ ಮೂಡಿಸುತ್ತಲೇ ಇದ್ದಾರೆ.

25 ಕೋಟಿ ಬಳಿಕ ಮತ್ತೆ ಮೂರು ಕೋಟಿ ಕೊಟ್ಟ ಕುಮಾರ್

ವೈದ್ಯರು, ಮೆಡಿಕಲ್ ಸಿಬ್ಬಂದಿ, ನರ್ಸ್ ಗಳಿಗೆ ವಂದನೆ ಸಲ್ಲಿಸುತ್ತಾರೆ, ವೂದ್ಯರ ಕೆಲಸ, ಕೋರೋನಾ ವೂರಸ್ ಸೋಂಕಿತರ ಸ್ಯಾಂಪಲ್ ಕಲೆಕ್ಟ್ ಮಾಡುವುದು ಸೇರಿದಣತೆ ಅನೇಕ ಚಿತ್ರಗಳನ್ನು ಇದು ಒಳಗೊಂಡಿದ್ದು ವೈದ್ಯರ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಿ ಎಂದು ಕೇಳಿಕೊಳ್ಳುತ್ತಾರೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಅಕ್ಷಯ್ ಕುಮಾರ್ 25 ಕೋಟಿ ರೂ. ದೇಣಿಗೆಯನ್ನು ನೀಡಿದ್ದರು.

Scroll to load tweet…