ಮುಂಬೈ(ಮೇ.03): ತಮ್ಮ ಪೌರತ್ವ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಇದು ತಮ್ಮ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ.

ತಮ್ಮ ಬಳಿ ಕೆನಡಿಯನ್ ಪಾಸ್ ಪೋರ್ಟ್ ಇರುವುದು ನಿಜವಾದರೂ, ಭಾರತವನ್ನು ಬಲಿಷ್ಟ ರಾಷ್ತ್ರವನ್ನಾಗಿ ಮಾಡುವುದು ತಮ್ಮ ಗುರಿ ಗುರಿ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅಕ್ಷಯ್, ತಮ್ಮ ಬಳಿ ಕೆನಡಾದ ಪಾಸ್ ಪೋರ್ಟ್ ಇರುವುದನ್ನು ತಾವೆಂದೂ ಮುಚ್ಚಿಟ್ಟಿಲ್ಲ ಎಂದು ಹೇಳಿದ್ದಾರೆ.

‘ನಾನು ಭಾರತದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ನನ್ನ ಎಲ್ಲ ತೆರಿಗೆಗಳನ್ನು ಭಾರತದಲ್ಲಿ ಪಾವತಿಸುತ್ತೇನೆ. ಈ ಎಲ್ಲಾ ವರ್ಷಗಳಲ್ಲಿ ಭಾರತದ ಮೇಲಿನ ನನ್ನ ಪ್ರೀತಿಯನ್ನು ನಾನು ತೋರಿಸಿದ್ದೇನೆ. ಈ ಕುರಿತು ನಾನೆಂದಿಗೂ ಯಾರಿಗೂ ಉತ್ತರಿಸಬೇಕಾದ ಅಗತ್ಯವಿಲ್ಲ..’ಎಂದು ಅಕ್ಷಯ್ ತಿರುಗೇಟು ನೀಡಿದ್ದಾರೆ. 

ಅಕ್ಷಯ್ ಕುಮಾರ್ ಕಳೆದ ಏ. 29 ರಂದು ನಡೆದ ನಾಲ್ಕನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಮುಂಬೈನಲ್ಲಿ ಮತ ಹಾಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಷಯ್ ಭಾರತೀಯ ಪೌರತ್ವ ಕುರಿತಂತೆ ಪ್ರಶ್ನೆಗಳೆದ್ದಿದ್ದವು.