ವಿವಾದದ ಬಳಿಕ ಈ ಹಿಂದೆ ಹೇಳಿದಂತೆ ರಾಮಾಯಣ ಕಥೆಯ ಆದಿಪುರುಷ ಚಿತ್ರದ ವಿವಾದಾತ್ಮಕ ಸಂಭಾಷಣೆಗಳನ್ನು ಚಿತ್ರತಂಡ ಬದಲಾಯಿಸಿದೆ.

ನವದೆಹಲಿ: ವಿವಾದದ ಬಳಿಕ ಈ ಹಿಂದೆ ಹೇಳಿದಂತೆ ರಾಮಾಯಣ ಕಥೆಯ ಆದಿಪುರುಷ ಚಿತ್ರದ ವಿವಾದಾತ್ಮಕ ಸಂಭಾಷಣೆಗಳನ್ನು ಚಿತ್ರತಂಡ ಬದಲಾಯಿಸಿದೆ. ಲಂಕಾ ದಹನ ದೃಶ್ಯದ ವೇಳೆ ಹನುಮಂತನನ್ನು ಉದ್ದೇಶಿಸಿ ‘ಕಪ್ಡಾ ತೇರಾ ಬಾಪ್‌ ಕಾ, ಟೆಲ್‌ ತೆರಾ ಬಾಪ್‌ ಕಾ, ಆಗ್‌ ಭಿ ತೇರೆ ಬಾಪ್‌ ಕಿ ಔರ್‌ ಜಲೇಗಿ ಭೀ ತೆರೆ ಬಾಪ್‌ ಕಿ’ ಎಂದು ಬರೆದಿದ್ದ ಸಂಭಾಷಣೆಯಲ್ಲಿ ‘ಬಾಪ್‌’ (ಅಪ್ಪ) ಎಂಬ ಪದ ಇದ್ದ​ಲ್ಲೆಲ್ಲ ‘ಲಂಕಾ’ ಎಂಬ ಪದದೊಂದಿಗೆ ಬದಲಾಯಿಸಲಾಗಿದೆ. ಇದೀಗ ನೂತನ ಸಂಭಾಷನೆಯೊಂದಿಗೆ ಚಿತ್ರ ಪ್ರದರ್ಶನಗೊಳ್ಳುತ್ತದೆ. ಚಿತ್ರದಲ್ಲಿ ಹನುಮಂತನಿಗೆ ಅವಮಾನ ಮಾಡಲಾಗಿದ್ದು, ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ. ಚಿತ್ರದಲ್ಲಿ ‘ಟಪೋರಿ’ ರೀತಿಯ ತೀರಾ ತಳಮಟ್ಟದ ಸಂಭಾಷಣೆ ಬಳಸಲಾಗಿದ ಎಂದು ದೇಶಾದ್ಯಂತ ಸಂಭಾಷಣೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಸಂಭಾಷಣೆ ಬದಲಾಯಿಸುವುದಾಗಿ ಚಿತ್ರತಂಡ ಹೇಳಿತ್ತು. ಓಂ ರಾವತ್‌ ನಿರ್ದೇಶಿಸಿರುವ ಚಿತ್ರದಲ್ಲಿ ನಟ ಪ್ರಭಾಸ್‌ ರಾಮ, ನಟಿ ಕೃತಿ ಸನೂನ್‌ ಸೀತಾ ಮಾತೆ ಮತ್ತು ನಟ ಸೈಫ್‌ ಅಲಿ ಖಾನ್‌ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ಶುಕ್ರವಾರ ಸಿನಿಮಾ ಬಿಡುಗಡೆಯಾಗಿದೆ.

ಇಳಿಕೆಯ ಹಾದಿ ಹಿಡಿದ ಗಳಿಕೆ 
ದಿನೇ ದಿನೇ ವಿವಾದಗಳಿಂದ ಸುದ್ದಿಯಾಗಿರುವ ಆದಿಪುರುಷ (Adipurush) ಚಿತ್ರದ ಬಾಕ್ಸ್‌ ಆಫೀಸ್‌ (Box Office) ಗಳಿಕೆಯು ಐದನೇ ದಿನವೂ ಇಳಿಕೆ ಹಾದಿ ಹಿಡಿದಿದೆ. ಮಂಗಳವಾರ ಚಿತ್ರ ಬರೋಬ್ಬರಿ ಶೇ.35ರಷ್ಟು ಗಳಿಕೆಯಲ್ಲಿ ಕುಸಿತ ಕಂಡು ಕೇವಲ 5 ಕೋಟಿ ರು. ಆದಾಯ ಗಳಿಸಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ. 4ನೇ ದಿನ​ವಾದ ಸೋಮ​ವಾರ, ಚಿತ್ರವು ಹಿಂದಿ​ಯಲ್ಲಿ 7 ಕೋಟಿ ರು. ಸೇರಿ ವಿವಿಧ ಭಾಷೆ​ಗ​ಳಲ್ಲಿ ಒಟ್ಟಾ​ರೆ 35 ಕೋಟಿ ರು. ಗಳಿ​ಸಿ​ತ್ತು. ಇದಲ್ಲದೇ ಕೆಲವೊಂದು ಪ್ರದೇಶಗಳಲ್ಲಿ ಚಿತ್ರಕ್ಕೆ ಯಾವುದೇ ಪ್ರೇಕ್ಷಕ ಬಾರದ ಕಾರಣ ಚಿತ್ರವನ್ನು ಸ್ಥಗಿತಗೊಳಿಸಿದ ಪ್ರಸಂಗಗಳು ವರದಿಯಾಗಿದೆ .ಚಿತ್ರವು ಈ ಬಾಕ್ಸ್‌ ಆಫೀ​ಸಿ​ನಲ್ಲಿ ಈವ​ರೆ​ಗೆ 395 ಕೋಟಿ ರು. ಗಳಿ​ಸಿದೆ ಎಂದು ಇನ್ನೊಂದು ವರದಿ ಹೇಳಿ​ದೆ.

Adipurush Contraversy: ಹನುಮಂತ ದೇವ್ರೇ ಅಲ್ಲ ಎಂದವರಿಗೆ ಕೊಲೆ ಬೆದರಿಕೆ- ಬಿಗಿ ಪೊಲೀಸ್​ ಬಂದೋಬಸ್ತ್​!

ಆದಿಪುರುಷ ವಿವಾದ ಬೆನ್ನಲ್ಲೇ ಸೀತೆ ವಸ್ತ್ರ ಧರಿಸಿದ ರಾಮಾ​ಯ​ಣದ ದೀಪಿ​ಕಾ

ಆದಿಪುರುಷ ಚಿತ್ರದ ವಿವಾದದ ನಡುವೆಯೇ ಹಿಂದಿನ ರಾಮಾಯಣ (Ramayan Serial) ಧಾರಾವಾಹಿಯಲ್ಲಿ ಸೀತಾ ಮಾತೆಯ (sita mata) ಪಾತ್ರದಲ್ಲಿ ನಟಿಸಿದ್ದ ನಟಿ ದೀಪಿಕಾ ಚಿಖ್ಲಿಯಾ, (Deepika Chiklia) ಧಾರಾವಾಹಿಯಲ್ಲಿ ತಾವು ಧರಿಸುತ್ತಿದ್ದ ಕೇಸರಿ ಉಡುಪನ್ನು ಧರಿಸಿ ಫೋಟೋ ಹಾಕಿ​ಕೊಂಡಿ​ದ್ದಾರೆ. ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತ​ವಾ​ಗಿ​ದೆ. ಈ ಫೋಟೊವನ್ನು ದೀ​ಪಿಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಾರ್ವಜನಿಕರ ಬೇಡಿಕೆಯ ಮೇರೆಗೆ. ಈ ಪಾತ್ರಕ್ಕಾಗಿ ಸದಾ ಸ್ವೀಕರಿಸುವ ಪ್ರೀತಿಗೆ ನಾನು ಕೃತಜ್ಞಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ‘ಆದಿಪುರುಷ’ ಚಿತ್ರದ ಸಂಗೀತ ನಿರ್ದೇಶಕ ಸಾಚೇತ್‌ ತಂಡನ್‌ ಹೃದಯದ ಎಮೋಜಿಯನ್ನು ಕಮೆಂಟ್‌ ಮಾಡಿದ್ದಾರೆ. ವ್ಯಕ್ತಿ​ಯೊ​ಬ್ಬರು ಸಾ​ಕ್ಷಾ​ತ್‌ ಸೀತಾ ಮಾತೆ​ಯನ್ನು ನೋಡಿ​ದಂತಾ​ಯಿ​ತು ಎಂದು ಹರ್ಷಿ​ಸಿ​ದ್ದಾ​ರೆ. ಆದಿಪುರುಷ ಚಿತ್ರದಲ್ಲಿ ಅತಿರೇ​ಕದ ಕಲ್ಪನೆಯನ್ನು ಚಿತ್ರಿಸಲಾಗಿದ್ದು, ನಿಜವಾದ ರಾಮಾಯಣ ಪಾತ್ರಗಳಿಗೆ ಅವಮಾನ ಮಾಡಲಾಗಿದೆ ಎಂಬ ಹಲವು ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಈ ಸಂಗತಿ ನಡೆದಿದೆ.

 ಹನುಮಂತನಿಗೆ ಅವಮಾನ : ಪ್ರತಿಭಟನೆ

ಲಖನೌ/ವಾರಣಾಸಿ: ಆದಿಪುರುಷ ಚಿತ್ರದ ಸಂಭಾಷಣೆಯಲ್ಲಿ ತೀರಾ ತಳಮಟ್ಟದ ಭಾಷೆ ಬಳಸಲಾಗಿದೆ. ಹನುಮಂತನಿಗೆ ಅವಮಾನ ಮಾಡಲಾಗಿದೆ ಎಂದು ದೇಶದ ಹಲ​ವೆ​ಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉತ್ತರಪ್ರದೇಶದ ವಾರಣಾಸಿ, ಅಯೋಧ್ಯೆ, ಲಖನೌ ಹಾಗೂ ಮಹಾ​ರಾ​ಷ್ಟ್ರದ ಪಾಲ್ಘ​ರ್‌​ನಲ್ಲಿ ಪ್ರತಿ​ಭ​ಟ​ನೆ​ಗಳು ನಡೆ​ದಿ​ವೆ. ವಾ​ರಾ​ಣ​ಸಿಯಲ್ಲಿ ಚಿತ್ರದ ಪೋಸ್ಟರ್‌ ಹರಿದು ಹಾಕಿ ಪ್ರತಿಭಟನೆ ನಡೆಸಲಾಗಿದೆ. ಇನ್ನು ರಾಜಧಾನಿ ಲಖನೌದಲ್ಲಿ ಚಿತ್ರ ನಿರ್ಮಾಪಕರ ವಿರುದ್ಧ ಹಿಂದೂ ಮಹಾಸಭಾ ಸೋಮವಾರ ದೂರು ದಾಖಲಿಸಿತ್ತು. ಇನ್ನು ಚಿತ್ರದಲ್ಲಿ ತೀರಾ ಕೆಳಮಟ್ಟವೆನಿಸುವ ಭಾಷೆ ಬಳಸಲಾಗಿದ್ದು ಈ ಚಿತ್ರ ಒಂದು ‘ಅಜೆಂಡಾ’ ಆಗಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಪಾಲ್ಘ​ರ್‌​ನಲ್ಲಿ ರಕ್ಷಾ ಪ್ರಥಮ್‌ ಎಂಬ ಸಂಘ​ಟನೆ ಪ್ರತಿ​ಭ​ಟನೆ ನಡೆ​ಸಿ​ದೆ.

ಹನುಮಂತನ ಸೀಟ್‌ನಲ್ಲಿ ಕುಳಿತು 'ಆದಿಪುರುಷ್' ವೀಕ್ಷಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ: ವಿಡಿಯೋ ವೈರಲ್