ಮರಾಠಿ ನಟಿ ಸಾಯಿ ತಮ್ಹಂಕರ್, ನಿರ್ಮಾಪಕ ಅಮೇ ಗೋಸಾವಿ ಜೊತೆಗಿನ ಎರಡು ವರ್ಷದ ದಾಂಪತ್ಯದ ಬಳಿಕ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ ಮಾಜಿ ಪತಿ ಮತ್ತು ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾಗಿ ಸಾಯಿ ತಿಳಿಸಿದ್ದಾರೆ. ವಿಚ್ಛೇದನದ ನಂತರವೂ ಇಬ್ಬರ ಮಧ್ಯೆ ಉತ್ತಮ ಬಾಂಧವ್ಯ ಉಳಿದಿದೆ ಎಂದಿದ್ದಾರೆ.
ಇಬ್ಬರ ಮಧ್ಯೆ ಹೊಂದಾಣಿಕೆ, ಪ್ರೀತಿ (Love) ಇದ್ದಾಗ ದಾಂಪತ್ಯ (marriage) ಹಿತವೆನ್ನಿಸುತ್ತೆ. ಪರಸ್ಪರ ಪ್ರೀತಿ ಕಳೆದುಹೋದಾಗ ದಾಂಪತ್ಯ ಉಸಿರುಗಟ್ಟಲು ಶುರುವಾಗುತ್ತೆ. ಅದ್ರಿಂದ ಹೊರಗೆ ಬಂದ್ರೆ ಸಾಕು ಎನ್ನುವವರು ಅನೇಕ ಮಂದಿ. ಬಾಲಿವುಡ್ ಸೇರಿದಂತೆ ಸಿನಿಮಾ ಕ್ಷೇತ್ರದಲ್ಲಿ ವಿಚ್ಛೇದಿತರ ಸಂಖ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚು ಅನ್ಬಹುದು. ಕೆಲವರು ಹತ್ತು, ಹದಿನೈದು ವರ್ಷ ದಾಂಪತ್ಯ ಜೀವನ ನಡೆಸಿ ಈಗ ಬೇರೆಯಾಗಿದ್ದಾರೆ. ಮತ್ತೆ ಕೆಲವರ ಸಂಬಂಧ ಮದುವೆಯಾದ ಒಂದೆರಡು ವರ್ಷ ಸರಿಯಾಗಿ ನಡೆದಿಲ್ಲ. ಅದ್ರಲ್ಲಿ ಮರಾಠಿ ನಟಿ ಸಾಯಿ ತಮ್ಹಂಕರ್ (Marathi Actress Sai Tamhankar) ಕೂಡ ಸೇರಿದ್ದಾರೆ.
38 ವರ್ಷದ ನಟಿ ಸಾಯಿ ತಮ್ಹಂಕರ್, ಮದುವೆಯಾಗಿ ಎರಡೇ ವರ್ಷಕ್ಕೆ ವಿಚ್ಛೇದನ ಪಡೆದ್ರು. 2013ರಲ್ಲಿ ಸಾಯಿ ತಮ್ಹಂಕರ್, ನಿರ್ಮಾಪಕ ಅಮೇ ಗೋಸಾವಿ (AMEY GOSAVI) ಅವರನ್ನು ವಿವಾಹವಾಗಿದ್ರು. ಆದ್ರೆ ಇಬ್ಬರ ಸಂಬಂಧ ಹೆಚ್ಚು ದಿನ ಬಾಳಲಿಲ್ಲ. ಎರಡು ವರ್ಷದ ನಂತ್ರ ಸಾಯಿ ತಮ್ಹಂಕರ್ ಹಾಗೂ ಅಮೇ ಗೋಸಾವಿ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಡಿವೋರ್ಸ್ ಆಗಿ ಇಷ್ಟು ವರ್ಷದ ನಂತ್ರ ನಟಿ ಸಾಯಿ ತಮ್ಹಂಕರ್, ತಮ್ಮ ವಿಚ್ಛೇದನ ಬಗ್ಗೆ ಮಾತನಾಡಿದ್ದಾರೆ. ಹಾಟರ್ ಫ್ಲೈ ಜೊತೆ ಮಾತನಾಡಿದ ಸಾಯಿ ತಮ್ಹಂಕರ್, ಕೋರ್ಟ್ ನಲ್ಲಿ ಡಿವೋರ್ಸ್ ಸಿಗ್ತಿದ್ದಂತೆ ಮಾಜಿ ಪತಿ ಅಮೇ ಹಾಗೂ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದೆ ಎಂದಿದ್ದಾರೆ.
ಅಭಿಷೇಕ್-ಕರೀಷ್ಮಾ ಕಪೂರ್ ನಡುವೆ ಬ್ರೇಕ್‌ಅಪ್ ಆಗಿದ್ದೇಕೆ? ಇದಕ್ಕೂ ಆಕೆಯೇ ಕಾರಣ?
ಡಿವೋರ್ಸ್ ಸಿಗ್ತಿದ್ದಂತೆ ಪಾರ್ಟಿ : ವಿಚ್ಛೇದನ ಸಿಕ್ಕ ಸಮಯದಲ್ಲಿ ನಾವಿಬ್ಬರು ವಿಚಿತ್ರ ಸ್ಥಾನದಲ್ಲಿದ್ವಿ. ನಾವಿಬ್ಬರೂ ರಿಲ್ಯಾಕ್ಸ್ ಆಗೋಕೆ ಬಯಸಿದ್ವಿ. ಹಾಗಾಗಿ ನಾವು ಹೊರಗೆ ಪಾರ್ಟಿ ಮಾಡಲು ಮುಂದಾದ್ವಿ ಎಂದು ಸಾಯಿ ತಮ್ಹಂಕರ್ ಹೇಳಿದ್ದಾರೆ. ಪಾರ್ಟಿಯಲ್ಲಿ ನಾನು ಮತ್ತು ಅಮೇ ಪ್ರೀತಿ ವಿಷ್ಯವನ್ನು ನೆನಪಿಸಿಕೊಂಡಿದ್ವಿ, ಪರಸ್ಪರ ಜೀವನದ ಬಗ್ಗೆ ಸಲಹೆಯನ್ನು ನೀಡಿದ್ವಿ ಎಂದು ಸಾಯಿ ತಮ್ಹಂಕರ್ ಹೇಳಿದ್ದಾರೆ. ನಮಗೆ ಡಿವೋರ್ಸ್ ಸಿಕ್ಕಿದೆ ಎಂಬುದು ಕೆಲವರಿಗೆ ಮಾತ್ರ ತಿಳಿದಿತ್ತು. ಆ ಟೈಂನಲ್ಲಿ ನನಗೆ ಫೋನ್ ಮಾಡಿ ಅನೇಕರು ವಿಚಾರಿಸಿದ್ದರು. ಡಿವೋರ್ಸ್ ಪಡೆದಿದ್ದಕ್ಕೆ ಅತ್ತಿದ್ದರು. ಕರೆ ಮಾಡಿ ನಾವೆಲ್ಲಿದ್ದೇವೆ ಎಂಬುದನ್ನು ತಿಳಿದುಕೊಂಡ ಕೆಲ 8 -10 ಸ್ನೇಹಿತರು ನಮ್ಮ ಜೊತೆ ಪಾರ್ಟಿಗೆ ಸೇರಿಕೊಂಡಿದ್ದರು ಎಂದು ಸಾಯಿ ತಮ್ಹಂಕರ್ ಹೇಳಿದ್ದಾರೆ. ನಾವೆಲ್ಲ ಅಲ್ಲಿ ಮದ್ಯಪಾನ ಮಾಡಿ, ಪಾರ್ಟಿ ಎಂಜಾಯ್ ಮಾಡಿದ್ವಿ ಎಂದು ಸಾಯಿ ತಮ್ಹಂಕರ್ ಹೇಳಿದ್ದಾರೆ.
ವಿಚ್ಛೇದನ ಹಾಗೂ ಕೋರ್ಟ್ ಬಗ್ಗೆಯೂ ಸಾಯಿ ತಮ್ಹಂಕರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೋರ್ಟ್ ಒಂದು ರೀತಿ ಮಾರುಕಟ್ಟೆಯಂತೆ ನನಗೆ ಕಾಣುತ್ತೆ. ಅಲ್ಲಿ ನಮ್ಮ ಹೆಸರನ್ನು ದೊಡ್ಡದಾಗಿ ಕೂಗ್ತಾರೆ. ನನ್ನ ಹೆಸರನ್ನು ಅವರು ಕೂಗಿದ್ರು. ನನ್ನನ್ನು ಸಾಯಿ ತಮ್ಹಂಕರ್ ಗೋಸಾವಿ ಹೆಸರಿನಿಂದ ಕೂಗಿದ್ದರು. ನನ್ನ ಡಿವೋರ್ಸ್ ದಾಖಲೆಯಲ್ಲಿ ಅದೇ ಹೆಸರು ಇತ್ತು ಎಂದು ಸಾಯಿ ತಮ್ಹಂಕರ್ ಹೇಳಿದ್ದಾರೆ. ಆ ನಂತ್ರ ಹೆಸರನ್ನು ಬದಲಿಸಿಕೊಂಡಿದ್ದೇನೆ ಎಂದು ಸಾಯಿ ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಸಂಗಾತಿ ಮೋಸ ಮಾಡುತ್ತಿದ್ದಾರೆಯೇ? ಹಾಗಿದ್ರೆ ಹೀಗೆ ಪತ್ತೆ ಹಚ್ಚಿ! ಇಲ್ಲಿದೆ ಸಿಂಪಲ್ ಟಿಪ್ಸ್
ಸಾಯಿ ತಮ್ಹೆಂಕರ್, ನಿರ್ಮಾಪಕ ಅಮೇ ಗೋಸಾವಿಗೆ ವಿಚ್ಛೇದನ ನೀಡಿ ಅವರಿಂದ ದೂರವಾದ್ರೂ ಅವರ ಮಧ್ಯೆ ಸ್ನೇಹ ಸಂಬಂಧ ಹಾಳಾಗಿಲ್ಲ. ಇಬ್ಬರೂ ಆಗಾಗ ಭೇಟಿಯಾಗ್ತಿರುತ್ತಾರೆ. ಇಬ್ಬರ ಮಧ್ಯೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ. ಸಾಯಿ ತಮ್ಹೆಂಕರ್, ಮರಾಠಿ ಸಿನಿಮಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.
