ಘಟನೆ ನಡೆದು 10 ವರ್ಷಗಳಾದ ಮೇಲೆ ಸತ್ಯ ಬಿಚ್ಚಿಟ್ಟ ನಟಿ ತೇಜಸ್ವಿನಿ ಪಂಡಿತ್. ಮತ್ತೆ ಮೀಟೂ ಕಿಚ್ಚ ಹೆಚ್ಚಾಗುತ್ತಾ?

ಸಿನಿಮಾ ರಂಗ ಯಾವುದೇ ಇರಲಿ ನಟಿಯರ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವಾಗ ಸಾಕಷ್ಟು ಅವಮಾನಗಳನ್ನು ಎದುರಿಸುತ್ತಿರುತ್ತಾರೆ. ಕೆಲವರು ಕಾಸ್ಟಿಂಗ್ ಕೌಚ್ ಅನುಭವಿಸಿದ್ದರೂ ಮೌನವಾಗಿರುತ್ತಾರೆ ಇನ್ನೂ ಕೆಲವರು ಮೀಟೂ ಚಳುವಳಿ ಹೆಚ್ಚಾದಗ ಬಾಯಿ ಬಿಟ್ಟರು. ಈಗ ಮರಾಠಿ ಚಿತ್ರರಂಗ ಖ್ಯಾತ ನಟಿ ತೇಜಸ್ವಿನಿ ಪಂಡಿತ್ ಕೂಡ ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. 10 ವರ್ಷಗಳ ಹಿಂದೆ ನಡೆದ ಘಟನೆ ಬಗ್ಗೆ ಸಂದರ್ಶವೊಂದರಲ್ಲಿ ರಿವೀಲ್ ಮಾಡಿದ್ದಾರೆ. ತೇಜಸ್ವಿನಿ ಹೇಳಿಕೆಯಿಂದ ಮತ್ತೊಮ್ಮೆ ಮೀಟೂ ಚಳುವಳಿ ಶುರುವಾಗುತ್ತದೆ ಎನ್ನುತ್ತಿದ್ದಾರೆ ನೆಟ್ಟಿಗರು.

'2009 ಅಥವಾ 2010ರ ಸಮಯದಲ್ಲಿ ಪುಣೆಯ ಸಿಂಹಗಡ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದಲ್ಲಿ ವಾಸಿಸುತ್ತಿದ್ದೆ. ಆ ಸಮಯದಲ್ಲಿ ಒಂದೆರಡು ಸಿನಿಮಾ ಮಾತ್ರ ರಿಲೀಸ್ ಆಗಿತ್ತು. ಆ ಅಪಾರ್ಟ್‌ಮೆಂಟ್‌ ಓನರ್‌ ಬಂದು ಆ ಸ್ಥಳದ ಕಾರ್ಪೋರೆಟರ್ ಆಗಿದ್ದರು. ಮನೆ ಬಾಡಿಗೆ ಕಟ್ಟಲು ಅವರ ಆಫೀಸ್‌ಗೆ ಹೋದಾಗ ನನಗೆ ಡೈರೆಕ್ಟ್‌ ಆಫರ್‌ ಮಾಡಿದ್ದರು. ಟೇಬಲ್‌ ಮೇಲೆ ಒಂದು ಗಾಜಿನ ಲೋಟದಲ್ಲಿ ನೀರಿಟ್ಟಿದ್ದರು ಅದನ್ನು ಎತ್ತಿಕೊಂಡು ಅವರ ಮುಖಕ್ಕೆ ಎರಚಿದೆ. ಈ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದು ಇಂತ ಕೆಲಸ ಮಾಡುವುದಕ್ಕೆ ಅಲ್ಲ ಇಲ್ಲದಿದ್ದರೆ ಒಂಥ ಕೆಲಸ ಮಾಡಿಕೊಂಡು ಯಾರಿಗೂ ಕೇರ್ ಮಾಡದೆ ಬದುಕುತ್ತಿದ್ದೆ. ಮನೆ ಮತ್ತು ಕಾರು ಖರೀದಿಸುತ್ತಿದ್ದೆ..ಏನು ಕೇಳಿದ್ದರು ಆ ಲಿಸ್ಟ್‌ ರೆಡಿ ಮಾಡಿಕೊಳ್ಳುತ್ತಿದ್ದೆ' ಎಂದು ತೇಜಸ್ವಿನಿ ಮಾತನಾಡಿದ್ದಾರೆ. 

ತೇಜಸ್ವಿನಿ ಪಂಡಿತ್ ಅಭಿನಯಿಸಿರುವ ವೆಬ್‌ ಸೀರಿಸ್‌ Athang ಬಿಡುಗಡೆಯಾಗುತ್ತಿದೆ. 'ಇದು ಎರಡು ವಿಚಾರಗಳ ಕಾಂಬಿನೇಷನ್‌ ಆಗಿರಲಿದೆ. ನನ್ನ ವೃತ್ತಿ ಜೀವನದಿಂದ ನನ್ನನ್ನು ಜಡ್ಜ್‌ ಮಾಡುವುದು ಮತ್ತೊಂದು ನಾನು ಆರ್ಥಿಕವಾಗಿ ವೀಕ್ ಆಗಿರುವೆ ಎಂದು ನನ್ನ ಜೊತೆ ಹೀಗೆ ವರ್ತಿಸುವುದು. ಇದರಿಂದ ನಾನು ಜೀವನ ಪಾಠ ಕಲಿತಿರುವೆ' ಎಂದು ತೇಜಸ್ವಿನಿ ಹೇಳಿದ್ದಾರೆ. 

ಮರಾಠಿ ನಟಿ ಜ್ಯೋತಿ ಚಾಂಡೇಕರ್ ಪುತ್ರಿಯಾಗಿರುವ ತೇಜಸ್ವಿನಿ 2004ರಲ್ಲಿ ಕೇದಾರ್ ಶಿಂಧೆ ಅವರ ಅಗಾ ಬಾಯಿ ಅರೇಚಾ ಸಿನಿಮಾ ಮೂಲಕ ಬಣ್ಣದ ಜರ್ನಿ ಆರಂಭಿಸಿದ್ದರು. ಸಿನಿಮಾ ರಂಗದ ಬಗ್ಗೆ ತಿಳಿದುಕೊಂಡು ಕ್ರಿಯೇಟಿವ್ ವೈಬ್ಸ್‌ ಎನ್ನು ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ವಿಶಾ ದೇವರುಖ್ಕರ್ ನಿರ್ದೇಶನ ಮಾಡಿರುವ Bamboo ಸಿನಿಮಾವನ್ನು ನಿರ್ಮಾಣ ಮಾಡಿದ್ದರು, ಈ ಕಥೆಯನ್ನು ಅಂಬರ್ ಹಡಪ್‌ ಬರೆದಿದ್ದಾರೆ.

Me Too ಆರೋಪ ಮಾಡಿದ ನಟಿ ಆಶಿತಾ:

ಮೈ ಗ್ರೀಟಿಂಗ್ಸ್‌, ತವರಿನ ಸಿರಿ, ರೋಡ್ ರೋಮಿಯೋ, ಗ್ರೀನ್ ಸಿಗ್ನಲ್ ಮತ್ತು ಬಾ ಬಾರೋ ರಸಿಕ ಸಿನಿಮಾಗಳಲ್ಲಿ ಆಶಿತಾ ಅಭಿನಯಿಸಿದ್ದಾರೆ. ವೃತ್ತಿ ಜೀವನದಲ್ಲಿ ಪೀಕ್‌ನಲ್ಲಿರುವಾಗ ಸಿನಿಮಾ ಲೋಕಕ್ಕೆ ಗುಡ್ ಬೈ ಹೇಳುತ್ತಾರೆ.ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೇನೂ ಬೇಸರವಿಲ್ಲ ಎಂದಿರುವ ನಟಿ ಆಶಿತಾ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಮೇಲೂ ಕೆಟ್ಟ ಅನುಭವಗಳು ಆದವು ಎಂದಿದ್ದಾರೆ. ಸಿನಿಮಾ ಪಯಣ ಪ್ರಾರಂಭ ಆದಾಗ ಅಂತ ಕೆಟ್ಟ ಸಮಸ್ಯೆ ಆಗಿಲ್ಲ. ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಬಳಿಕ ತನಗೆ ಕೆಟ್ಟ ಅನುಭವವಾಯಿತು ಎಂದು ಹೇಳಿದರು.

ಆ ನಿರ್ದೇಶಕರ ಹೆಸರು ಹೇಳುವುದು ಬೇಡ, ಅವರು ತನ್ನೊಂದಿಗೆ ನನ್ನನ್ನು ಸಲುಗೆಯಿಂದ ಇರಲು ಹೇಳಿದರು. ಅದಕ್ಕೆ ಒಪ್ಪದಾಗ ಏನಲ್ಲ ಅವಮಾನಗಳನ್ನು ಮಾಡಿದ್ದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ.ಸರ್, ಸರ್, ಸರ್ ಅನ್ನಬೇಕು, ಮೆಸೇಜ್ ಮಾಡಬೇಕು, ಹಾಯ್ ಅಂತ ಹೇಳ್ತಾ ಇರಬೇಕು ಇದನ್ನೆಲ್ಲ ನಾನು ಮಾಡ್ತಾ ಇರ್ಲಿಲ್ಲ ಅಂತ ಎಷ್ಟು ಕಷ್ಟ ಕೊಟ್ಟಿದ್ದಾರೆ ಎಂದರೆ ಅಷ್ಟು ಕೊಟ್ಟಿದ್ದಾರೆ.ಇದು ನನ್ನ ಜೀವನದಲ್ಲಿ ಪೀಕ್ ನಲ್ಲಿ ಇದ್ದಾಗ ಆಗಿದ್ದು. ದೊಡ್ಡ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದಾಗ ನನಗೆ ಏನು ಆಗಿರ್ಲಿಲ್ಲ. ಹೊಸಬರು ಜೊತೆ ಕೆಲಸ ಮಾಡುವಾಗ ಇಂಥ ಕೆಟ್ಟ ಅನುಭವವಾಗಿದೆ' ಎಂದು ಆಶಿತಾ ಅನೇಕ ವರ್ಷಗಳ ಬಳಿಕ ಬಹಿರಂಗ ಪಡಿಸಿದ್ದಾರೆ.