ಸಮಂತಾ ನಟನೆ ಬಿಟ್ಟು ಆಧ್ಯಾತ್ಮದತ್ತ ಹೊರಳ್ತಿದ್ದಾರಾ..? ಸಿನಿಮಾ, ಬ್ಯುಸಿನೆಸ್ ಎಲ್ಲ ಬಿಟ್ಟು ಹೊಸ ಹೆಜ್ಜೆ ಇಡ್ತಿದ್ದಾರಾ..? ಇಂತಹದ್ದೊಂದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದ್ದು ನಟಿಯ ಪೋಸ್ಟ್.
 
ಹೌದು. ಸೌತ್ ನಟಿ ಸಮಂತಾ ಅಕ್ಕಿನೇನಿ ಸದ್ಗುರುಗಳನ್ನು ಭೇಟಿಯಾಗಿದ್ದಾರೆ. ಶಿಷ್ಯ ಸಿದ್ಧವಾದಾಗ ಗುರು ಕಾಣಿಸಿಕೊಳ್ಳುತ್ತಾನೆ ಎಂದೂ ಹೇಳಿದ್ದಾರೆ ನಟಿ. ಈ ಮೂಲಕ ತಾವು ಸದ್ಗುರುಗಳ ಶಿಷ್ಯೆ ಎಂದೂ ಹೇಳಿಕೊಂಡಿದ್ದಾರೆ.

ಉಸಿರಾಡೋದು ಹೇಗನ್ನೋದೇ ಮರೆತ್ರಂತೆ ಶಾರೂಖ್ ಮಗಳು..!

ಆಧ್ಯಾತ್ಮಿಕ ಪ್ರಕ್ರಿಯೆಯ ಸಂಪೂರ್ಣ ಪ್ರಯತ್ನವೆಂದರೆ ನಿಮಗಾಗಿ ನೀವು ಎಳೆದಿರುವ ಗಡಿಗಳನ್ನು ಮುರಿಯುವುದು ಮತ್ತು ಅಪಾರತೆಯನ್ನು ಅನುಭವಿಸುವುದು ಎಂದಿದ್ದಾರೆ ಸಮಂತಾ.

ನಿಮ್ಮ ಸ್ವಂತ ಅಜ್ಞಾನದ ಪರಿಣಾಮವಾಗಿ ನೀವು ನಕಲಿ ಮಾಡಿದ ಸೀಮಿತ ಗುರುತಿನಿಂದ ನಿಮ್ಮನ್ನು ಬಿಚ್ಚಿಡಬೇಕು. ಸೃಷ್ಟಿಕರ್ತನು ನಿಮ್ಮನ್ನು ಸಂಪೂರ್ಣವಾಗಿ ಮತ್ತು ಅನಂತ ಜವಾಬ್ದಾರಿಯುತ ರೀತಿಯಲ್ಲಿ ಸೃಷ್ಟಿ ಮಾಡಿದ ರೀತಿಯಲ್ಲಿ ಬದುಕುವುದು ಆಧ್ಯಾತ್ಮದ ಉದ್ದೇಶ ಎಂದಿದ್ದಾರೆ.

ಮಸಲ್ಸ್ ತೋರಿಸಿದ ನಟ: ಇದೇನು ಗೂಗಲ್ ಮ್ಯಾಪಾ ಎಂದ್ರು ಫ್ಯಾನ್ಸ್

ಜ್ಞಾನೋದಯವು ಸಾಧನೆಯಲ್ಲ. ಇದು ಮರಳುವಿಕೆ. ನಿಮ್ಮ ಇಂದ್ರಿಯಗಳು ನೀವು ಲೌಕಿಕವನ್ನು ಅನುಭವಿಸುತ್ತಿದ್ದೀರಿ ಎಂಬ ಅನಿಸಿಕೆ ನೀಡುತ್ತದೆ. ಆದರೆ ನೀವು ಎಂದಿಗೂ ಹೊರಗಿನ ಅನುಭವವನ್ನು ಅನುಭವಿಸಿಲ್ಲ. ನೀವು ಅನುಭವಿಸುವ ಎಲ್ಲವು ನಿಮ್ಮೊಳಗೇ ಇದೆ ಎಂದು ನೀವು ತಿಳಿದುಕೊಂಡಾಗ, ಆ ಮರಳುವಿಕೆಯೇ ಜ್ಞಾನೋದಯವಾಗಿದೆ ಎಂದಿದ್ದಾರೆ ಸಮಂತಾ.