Asianet Suvarna News Asianet Suvarna News

ಕೊಡವ ಭಾಷೆ ನಮಗೂ ಕಲಿಸಿಕೊಡಿ, ಇಲ್ಲಾ ಕನ್ನಡದಲ್ಲೂ ಮಾತಾಡಿ ರಶ್ಮಿಕಾ ಮೇಡಂ ಅಂತಿದಾರೆ ಫ್ಯಾನ್ಸ್‌!

ಬಹುಭಾಷಾ ನಟಿ ಕರ್ನಾಟಕದ ಕೊಡಗು ಮೂಲದವರಾದ ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ಅವರು ಆಗಾಗ ಕೆಲವು ವಿಚಾರಗಳಿಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಕೊಡವ ಭಾಷೆಯಲ್ಲಿ ಮಾತನಾಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. 

actress rashmika mandanna shared a special video in kodava language fans react gvd
Author
First Published Jul 1, 2024, 8:01 PM IST

ಬಹುಭಾಷಾ ನಟಿ ಕರ್ನಾಟಕದ ಕೊಡಗು ಮೂಲದವರಾದ ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ಅವರು ಆಗಾಗ ಕೆಲವು ವಿಚಾರಗಳಿಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಕೊಡವ ಭಾಷೆಯಲ್ಲಿ ಮಾತನಾಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಹೌದು! ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಕೊಡವ ಭಾಷೆ ನಮಗೂ ಕಲಿಸಿಕೊಡಿ, ಇಲ್ಲಾ ಕನ್ನಡದಲ್ಲೂ ಮಾತಾಡಿ ರಶ್ಮಿಕಾ ಮೇಡಂ ಎಂದು ಕಮೆಂಟ್‌ ಹಾಕುತ್ತಿದ್ದಾರೆ.

ಕೊಡವ ಸ್ಟೈಲ್‌ನಲ್ಲಿ ಸೀರೆಯುಟ್ಟ ರಶ್ಮಿಕಾ ಮಂದಣ್ಣ, ಎಲ್ಲರಿಗೂ ನಮಸ್ಕಾರ, ನಾನೀಗ ಕೊಡಗಲಿದ್ದೇನೆ, ನನ್ನ ಫ್ರೆಂಡ್‌ನ ಮದುವೆಗೆ ಬಂದಿದ್ದೇನೆ. ಹೀಗಾಗಿ ಕೊಡವ ಭಾಷೆಯಲ್ಲಿ ನಾನು ಮಾತನಾಡುತ್ತಿದ್ದೇನೆ. ನಿಮ್ಮ ಆಶೀರ್ವಾದದಿಂದ ನಾನು ಇಲ್ಲಿವರೆಗೆ ಬಂದಿದ್ದೇನೆ. ಜೊತೆಗೆ ಕಾವೇರಮ್ಮ ಹಾಗೂ ಇಗ್ಗುತಪ್ಪ ಆಶೀರ್ವಾದ ನನ್ನ ಮೇಲಿದೆ. ಅಲ್ಲಿಗೆ ಹೋಗಬೇಕು ಎಂದುಕೊಂಡಿದ್ದೇನೆ. ನೀವು ಪ್ರತಿ ಬಾರಿ ನನಗೆ ಬೆಂಬಲ ನೀಡಿದ್ದೀರಿ, ಪ್ರೋತ್ಸಾಹಿಸಿದ್ದೀರಿ. ಮತ್ತಷ್ಟು ಹಾರ್ಡ್ ವರ್ಕ್, ಮತ್ತಷ್ಟು ಕಷ್ಟಪಟ್ಟು ಕೆಲಸ ಮಾಡಿ ಮತ್ತಷ್ಟು ಎತ್ತರಕ್ಕೆ ಏರುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ. ನಿಮ್ಮ ಬೆಂಬಲ ಹೀಗೆ ಇರಲಿ ಎಂದು ನಾನು ಬಯಸುತ್ತಿದ್ದೇನೆ.ನೀವು ಯಾವತ್ತು ನನ್ನ ಮನಸ್ಸಲ್ಲಿರುತ್ತೀರಿ ಎಂದು ಹೇಳಿದ್ದಾರೆ.
 


ಇನ್ನು ಈ ಹಿಂದೆ ರಶ್ಮಿಕಾ ಮಂದಣ್ಣ, ಗೆಳತಿಯ ವಿವಾಹ ಸಂಬಂಧ ತವರು ಕೊಡಗಿಗೆ ಹೋಗಿದ್ದರು. ತವರಿನಲ್ಲಿ ಸುಂದರ ಕ್ಷಣಗಳನ್ನು ಕಳೆದಿರುವ ರಶ್ಮಿಕಾ ಕೂರ್ಗಿ ಶೈಲಿಯಲ್ಲಿ ರಾಯಲ್ ಬ್ಲೂ ಸೀರೆ ಉಟ್ಟು ಕಂಗೊಳಿಸಿದ್ದರು. ಕೂರ್ಗಿ ಶೈಲಿಯಲ್ಲಿ ಸೀರೆ ಉಟ್ಟು ಫೋಟೋಗಳಿಗೆ ಪೋಸ್ ಕೊಟ್ಟಿದ್ದರಲ್ಲದೇ, ಅವುಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ 'ನಾನು ಹುಟ್ಟಿ ಬೆಳೆದ ಊರನ್ನು, ಪ್ರೀತಿ ಪಾತ್ರರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂಬುದನ್ನು ಅವರು ಪದಗಳಲ್ಲಿ ವಿವರಿಸಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಸ್ನೇಹಿತೆಯ ಮದುವೆಗೆ ಬಂದು ವಿಶೇಷವಾಗಿ ಶುಭಕೋರಿರುವ ರಶ್ಮಿಕಾ ತನ್ನೂರನ್ನು ಮಿಸ್ ಮಾಡಿಕೊಳ್ಳುತ್ತಿದ್ದು, 'ನಮ್ಮೂರೆ ನಮಗೆ ಚೆಂದ' ಎಂದು ಹೇಳಿದ್ದರು. ನಾನು ಮನೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿರುವ ರಶ್ಮಿಕಾ ಕೊಡಗಿನಲ್ಲಿ ಭಾವುಕ ಕ್ಷಣಗಳನ್ನು ಕಳೆದಿದ್ದರು.

ಕೊಡವ ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ: ಕೊಡಗಿನೊಳು ಬೆಡಗಿನೊಳು ನನ್ನೆಂಡ್ರು ನಂಜೀ ಎಂದು ಹಾಡಿದ ಪಡ್ಡೆಹೈಕ್ಳು!

ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನಿಮಲ್ ಸಿನಿಮಾ ತೆರೆಕಂಡಿತ್ತು. ಅದರಲ್ಲಿನ ನಟನೆಯಿಂದ ಭಾರಿ ಮೆಚ್ಚುಗೆ ಪಡೆದ ರಶ್ಮಿಕಾ ನಟನೆಯ ಪುಷ್ಪ-2 ಸಿನಿಮಾ ಇದೇ ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಇದರೊಂದಿಗೆ ನಟಿ ಗರ್ಲ್‌ಫ್ರೆಂಡ್, ಛಾಯಾ, ರೈನ್‌ಬೋ, ನಟ ಸಲ್ಮಾನ್ ಜೊತೆಗಿನ ಸಿಕಂದರ್, ಕುಬೇರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಬ್ಯೂಸಿಯಾಗಿದ್ದಾರೆ. ಅಲ್ಲದೇ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾದಲ್ಲಿ ನ್ಯಾಷನಲ್ ಸ್ಟಾರ್ ನಟಿ ರಶ್ಮಿಕಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಕನ್ನಡ ಮೂಲದ ನಟಿಯೊಬ್ಬರು ಸ್ಯಾಂಡಲ್‌ವುಡ್‌ನ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ತೆಲುಗು ನಂತರ ಹಿಂದಿಯ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಕರ್ನಾಟಕ ಕ್ರಷ್ ಆಗಿದ್ದಾರೆ. 

Latest Videos
Follow Us:
Download App:
  • android
  • ios