Asianet Suvarna News

ಮುಸ್ತಫಾ-ಪ್ರಿಯಾಮಣಿ  ಮದುವೆ ಅಸಿಂಧು? ಅಖಾಡಕ್ಕೆ ಇಳಿದ ಮೊದಲ ಪತ್ನಿ

* ಪ್ರಿಯಾ ಮಣಿ ದಾಂಪತ್ಯಕ್ಕೆ ಕಂಟಕ?
* ಅಸಿಂಧುವಾಯ್ತಾ ನಟಿ ಪ್ರಿಯಾಮಣಿ ಮದುವೆ 
* ಮದುವೆ ಆಗಿ ಐದು ವರ್ಷದ ನಂತ್ರ ಪ್ರತ್ಯಕ್ಷಳಾದ ಮುಸ್ತಫಾ ರಾಜ್ ಮೊದಲ ಪತ್ನಿ‌
* ಮುಸ್ತಾಫಾ ರಾಜ್ ಮೊದಲ ಪತ್ನಿ   ಆಯೇಷಾರಿಂದ  ಗಂಡನ ಮೇಲೆ ಆರೋಪ

Actress Priyamani s marriage to Mustafa Raj is invalid his first wife alleges  mah
Author
Bengaluru, First Published Jul 22, 2021, 6:13 PM IST
  • Facebook
  • Twitter
  • Whatsapp

ಬೆಂಗಳೂರು(ಜು. 22) ಬಹುಭಾಷಾ ತಾರೆ ನಟಿ ಪ್ರಿಯಾಮಣಿ ಮತ್ತು ಮುಸ್ತಾಫಾ ರಾಜ್ ಮದುವೆ ಅಸಿಂಧುವಾಗುವ ಸಂದರ್ಭ ಎದುತಾರಾಗಿದೆ.  ಮುಸ್ತಫಾ ರಾಜ್ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣವನ್ನೂ ಮುಸ್ತಫಾ ಮೊದಲ ಪತ್ನಿ ಆಯೆಷಾ ದಾಖಲಿಸಿದ್ದಾರೆ.

ಪ್ರಿಯಾಮಣಿ ಮದುವೆ ಆಗಿ ಐದು ವರ್ಷದ ನಂತ್ರ ಪ್ರತ್ಯಕ್ಷಳಾದ ಮುಸ್ತಫಾ ರಾಜ್ ಮೊದಲ ಪತ್ನಿ‌ ಪ್ರತ್ಯಕ್ಷವಾಗಿದ್ದಾರೆ.  ತಾನಿನ್ನೂ ಮುಸ್ತಾಫಾ ಪತ್ನಿ ಎನ್ನುತ್ತಿರೋ ಆಯೇಷಾ  ಮುಸ್ತಾಫಾ ತಮಗೆ ವಿಚ್ಛೇದನ ನೀಡದೇ ಪ್ರಿಯಾಮಣಿಯನ್ನು ಮದುವೆ ಆಗಿದ್ದಾರೆ ಮುಸ್ತಫಾ ರಾಜ್ ನನಗೆ ಈವರೆಗೂ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಮುಕೇಶ್ ಅಂಬಾನಿ ಲವ್ ಸ್ಟೋರಿ

2013ರಲ್ಲಿ ಮುಸ್ತಾಫಾ ಮತ್ತು ಆಯೇಷಾ ಪ್ರತ್ಯೇಕವಾಗಿದ್ದರು. ದಂಪತಿ ಎರಡು ಮಕ್ಕಳಿದ್ದಾರೆ. 2017ರಲ್ಲಿ ಪ್ರಿಯಾಮಣಿಯನ್ನ ಮದುವೆಯಾಗಿದ್ದ ಮುಸ್ತಾಫಾ ಬೆಂಗಳೂರಿನಲ್ಲಿಯೇ ಸರಳವಾಗಿ ನೋಂದಣಿ  ಮಾಡಿಸಿಕೊಂಡಿದ್ದರು.

ಪ್ರಿಯಾಮಣಿಯನ್ನ ಮದುವೆಯಾಗುವ ವೇಳೆ ಮುಸ್ತಾಫಾ ತಾವಿನ್ನೂ ಸಿಂಗಲ್ ಎಂದು ದಾಖಲೆ ನೀಡಿದ್ದರು ಎಂದು ಮುಸ್ತಫಾ ವಿರುದ್ದ  ಮೊದಲ ಪತ್ನಿ ಆಯೇಷಾ ಆರೋಪ. ಇದೇ ಕಾರಣಕ್ಕೆ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ಇಬ್ಬರು ಮಕ್ಕಳ ತಾಯಿಯಾಗಿ ನಾನೇನು ತಾನೆ ಮಾಡಲಿ? ಸೌಹಾರ್ದಯುತವಾಗಿ ಪರಿಹಾರ ಮಾಡಿಕೊಳ್ಳಲು ಪ್ರಯತ್ನ ಪಟ್ಟೆ. ಆದರೆ ಅದು ಕಾರ್ಯರೂಪಕ್ಕೆ ಬಾರದಿದ್ದಾಗ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ ಎಂದು ಹೇಳಿದ್ದು ಮುಂದೆ ಯಾವ್ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕಿದೆ.

Follow Us:
Download App:
  • android
  • ios