ಜಾಜಿ ಮಲ್ಲಿಗೆ ಮುಡಿಗು ವಿಮಾನ ಹತ್ತಿದ ನಟಿ ನವ್ಯಾ ನಾಯರ್‌ಗೆ ಆಸ್ಟ್ರೇಲಿಯಾದಲ್ಲಿ ಪೊಲೀಸರು ಬರೋಬ್ಬರಿ 1.14 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಒಂದು ಸಣ್ಣ ಜಾಜಿ ಮಲ್ಲಿಗೆ ಇಷ್ಟೊಂದು ದಂಡವೇಕೆ?

ನವದೆಹಲಿ (ಸೆ.07) ನಟಿ ನವ್ಯಾ ನಾಯರ್ ಜಾಜಿ ಮಲ್ಲಿಗೆಯಿಂದ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಕೇವಲ 15 ಸೆಂಟಿಮೀಟರ್ ಉದ್ದದ ಜಾಜಿ ಮಲ್ಲಿಗೆಯಿಂದ ನಟಿ ನವ್ಯಾ ನಾಯರ್ ಆಸ್ಟ್ರೇಲಿಯಾದಲ್ಲಿ ಬರೋಬ್ಬರಿ 1.14 ಲಕ್ಷ ರೂಪಾಯಿ ದಂಡ ಪಾವತಿಸಿದ್ದಾರೆ. ಇಲ್ಲದಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಿತ್ತು. ಇದು ವಿಚಿತ್ರವಾದರೂ ಸತ್ಯ. ಓಣಂ ಹಬ್ಬದ ಆಚರಣೆಗಾಗಿ ಆಸ್ಟ್ರೇಲಿಯಾಗೆ ತೆರಳಿದ ನಟಿ ನವ್ಯಾ ನಾಯರ್ ದುಬಾರಿ ದಂಡ ಪಾವತಿಸಿದ ಘಟನೆ ನಡೆದಿದೆ. ಈ ಕುರಿತು ನಟಿ ನವ್ಯಾ ನಾಯರ್ ಹೇಳಿಕೊಂಡಿದ್ದಾರೆ.

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತಂದೆ ನೀಡಿದ ಜಾಜಿ ಮಲ್ಲಿಗೆ ಹೂವು

ಇತ್ತೀಚೆಗೆ ನಟಿ ನವ್ಯಾ ನಾಯರ್ ಓಣಂ ಹಬ್ಬದ ಸಂಭ್ರಮಾಚರಣೆಗೆ ಆಸ್ಟ್ರೇಲಿಯಾದ ಮೇಲ್ಬೋರ್ನ್‌ಗೆ ತೆರಳಿದ್ದರು. ವಿಕ್ಟೋರಿಯಾದ ಮಲೆಯಾಳಿ ಅಸೋಸಿಯೇಶನ್ ಓಣಂ ಹಬ್ಬ ಆಚರಣೆಗೆ ನಟಿ ನವ್ಯಾ ನಾಯರ್ ಅತಿಥಿಯಾಗಿ ಆಹ್ವಾನ ನೀಡಿತ್ತು. ಇದರಂತೆ ನವ್ಯಾ ನಾಯರ್ ಕೊಚ್ಚಿಯಿಂದ ಆಸ್ಟ್ರೇಲಿಯಾಗೆ ವಿಮಾನ ಪ್ರಯಾಣ ಆರಂಭಿಸಿದ್ದರು. ವಿಮಾನ ಬೋರ್ಡಿಂಗ್ ಮೊದಲು ನವ್ಯಾ ನಾಯರ್ ತಂದೆ ಓಣಂ ಹಬ್ಬದ ಆಚರಣೆಗೆ ತೆರಳುತ್ತಿರುವ ಕಾರಣ ಮಲ್ಲಿಗೆ ಮುಡಿದು ತೆರಳುವುದು ಅತ್ಯವಶ್ಯಕ ಎಂದಿದ್ದಾರೆ. ಹೀಗಾಗಿ ಜಾಜಿ ಮಲ್ಲಿಗೆಯನ್ನು ನವ್ಯಾ ನಾಯರ್‌ಗೆ ನೀಡಿದ್ದಾರೆ.

ಎರಡು ತುಂಡು ಮಾಡಿ ಮಲ್ಲಿಗೆ ಮುಡಿದ ನವ್ಯಾ ನಾಯರ್

ಆಸೋಸಿಯೇಶನ್ ಆಯೋಜಿಸಿದ ಓಣಂ ಹಬ್ಬದ ಆಚರಣೆಯಲ್ಲಿ ಜಾಜಿ ಮಲ್ಲಿಗೆ ಮುಡಿದು ಪಾಲ್ಗೊಂಡರೆ ಉತ್ತಮ ಎಂಬ ತಂದೆಯ ಸಲಹೆಯಂತೆ ತಂದೆ ನೀಡಿದ ಜಾಜಿ ಮಲ್ಲಿಗೆಯನ್ನು ಎರಡು ತುಂಡು ಮಾಡಿದ್ದಾರೆ. ಕಾರಣ ಕೊಚ್ಚಿಯಿಂದ ಆಸ್ಟ್ರೇಲಿಯಾಗೆ ನೇರ ವಿಮಾನವಿಲ್ಲ. ಹೀಗಾಗಿ ಸಿಂಗಾಪೂರಕ್ಕೆ ತೆರಳಿ ಅಲ್ಲಿಂದ ವಿಮಾನ ಬದಲಾಯಿಸಬೇಕು. ಹೀಗಾಗಿ ನಟಿ ನವ್ಯಾ ನಾಯರ್ ಜಾಜಿ ಮಲ್ಲಿಗೆ ಮೊಳವನ್ನು ಎರಡು ತುಂಡು ಮಾಡಿ ಒಂದನ್ನು ಮುಡಿದುಕೊಂಡರೆ ಮತ್ತೊಂದನ್ನು ಹ್ಯಾಂಡ್ ಬ್ಯಾಗ್‌ನಲ್ಲಿ ಇಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತೆರಳುವಾಗ ಮತ್ತೊಂದು ಜಾಜಿ ಮಲ್ಲಿಗೆ ತುಂಡು ಮುಡಿಯಲು ಬ್ಯಾಗ್‌ನಲ್ಲಿ ಇಟ್ಟಿದ್ದಾರೆ.

Bhavana Ramannaಗೆ ಮೊದಲೇ ವಿಷ್ಯ ಗೊತ್ತಿತ್ತಾ? ಒಂದೇ ಹೆಣ್ಣು ಮಗುವಿನ ಹೆಸರು ರಿವೀಲ್​ ಮಾಡಿದ್ದ ನಟಿ

ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ವಾರ್ನಿಂಗ್

ಸಿಂಗಾಪುರದಲ್ಲಿ ವಿಮಾನ ಬದಲಾಯಿಸಿ ಮೆಲ್ಬೋರ್ನ್ ಏರ್‌ಪೋರ್ಟ್ ಬಂದಿಳಿದ ನವ್ಯಾ ನಾಯರ್‌ಗೆ ಕಸ್ಟಮ್ಸ್ ಅಧಿಕಾರಿಗಳು, ಪೊಲೀಸರು ಶಾಕ್ ನೀಡಿದ್ದಾರೆ. ನವ್ಯಾ ನಾಯರ್ ಹ್ಯಾಂಡ್ ಬ್ಯಾಗ್‌ನಲ್ಲಿ 15 ಸೆಂಟಿ ಮೀಟರ್ ಜಾಜಿ ಮಲ್ಲಿಗೆ ಪತ್ತೆಯಾಗಿದೆ. ಕಾರ್ಯಕ್ರಮದಲ್ಲಿ ಮುಡಿದುಕೊಳ್ಳಲು ಇಟ್ಟಿದ್ದ ಜಾಜಿ ಮಲ್ಲಿಗೆಯಿಂದ ನವ್ಯಾ ಸಂಕಷ್ಟ ಹೆಚ್ಚಾಗಿದೆ. ಆಸ್ಟ್ರೇಲಿಯಾದ ನಿಯಮದ ಪ್ರಕಾರ ವಿದೇಶದಿಂದ ಆಗಮಿಸುವ ವ್ಯಕ್ತಿಗಳು ಯಾವುದೇ ರೀತಿಯ ಹೂವು, ಸಸ್ಯಗಳು, ಗಿಡ, ಎಲೆಗಳನ್ನು ತರುವುದಿದ್ದರೇ ಮೊದಲೇ ಮಾಹಿತಿ ನೀಡಬೇಕು. ಈ ಕುರಿತು ಡಿಕ್ಲರೇಶನ್ ನೀಡಬೇಕು. ಹೀಗೆ ಮಾಡದಿದ್ದರೆ ನಿಯಮಕ್ಕೆ ವಿರುದ್ದವಾಗಿದೆ. ನಟಿ ನವ್ಯಾ ನಾಯರ್ ತಮ್ಮ ಬ್ಯಾಗ್‌ನಲ್ಲಿ ಜಾಜಿ ಮಲ್ಲಿಗೆ ಇರುವ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಪೊಲೀಸರು ದಂಡ ಕಟ್ಟಲು ವಾರ್ನಿಂಗ್ ನೀಡಿದ್ದಾರೆ.

ನಿಯಮ ಉಲ್ಲಂಘಿಸಿದರೆ ಗರಿಷ್ಠ AUD 6,600 ಅಂದರೆ ಭಾರತೀಯ ರೂಪಾಯಿಗಳಲ್ಲಿ 1.14 ಲಕ್ಷ ರೂಪಾಯಿ ದಂಡ ಪಾವತಿಸಲು ಸೂಚಿಸಿದ್ದಾರೆ. ದಂಡ ಪಾವತಿಸಲು 28 ದಿನದ ಕಾಲಾವಕಾಶ ನೀಡಿದ್ದಾರೆ. ದಂಡ ಪಾವತಿಸಲು ವಿಫಲರಾದರೆ ಜೈಲು ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ. ಇತ್ತ ನಿಯಮದ ಕುರಿತು ಅರಿವಿಲ್ಲದ ಕಾರಣ ತಾನು 1.14 ಲಕ್ಷ ರೂಪಾಯಿ ದಂಡ ಪಾವತಿಸಿದೆ. ಇದು ಒಂದು ಪಾಠ ಎಂದು ನಟಿ ನವ್ಯಾ ನಾಯರ್ ಹೇಳಿಕೊಂಡಿದ್ದಾರೆ.

View post on Instagram