ತುಮಕೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ ವಿರುದ್ಧ ಖಾಸಗಿ ದೂರು ದಾಖಲಾಗಿದೆ. ಕಂಗನಾ ಅವರು ರೈತರನ್ನು ನಿಂದಿಸಿದ್ದಾರೆಂದು ಆರೋಪಿಸಿ ಹೈಕೋರ್ಟ್‌ ವಕೀಲ ಹಾಗೂ ತುಮಕೂರು ನಿವಾಸಿ ರಮೇಶ್‌ ನಾಯಕ್‌ ಎಂಬುವರು ದೂರು ದಾಖಲಿಸಿದ್ದಾರೆ.

ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕಂಗನಾ ರಣಾವತ್‌ ಅವರು ಟ್ವೀಟ್‌ನಲ್ಲಿ ಭಯೋತ್ಪಾದಕರು ಎಂದು ದೂರಿದ್ದರು. ಈ ಹೇಳಿಕೆಯಿಂದ ಸ್ವತಃ ರೈತರು ಆಗಿರುವ ವಕೀಲ ರಮೇಶ್‌ ನಾಯಕ್‌ ನೇರವಾಗಿ ನ್ಯಾಯಾಲಯದಲ್ಲೇ ದೂರು ದಾಖಲಿಸಿದ್ದಾರೆ.

ತನ್ನ ಮಕ್ಕಳು ಮಲಯಾಳೀಸ್ ಆಗ್ತಾರಂತ ಹೆದರಿದ್ರು ಕರಣ್ ಜೋಹರ್..!

ಕಂಗನಾ ರಣಾವತ್ ರೈತರನ್ನು ನಿಂದಿಸಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್  44,108,153,153A, 504 ಅಡಿಯಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ.

ಇದಕ್ಕೂ ಮುನ್ನ ಅವರು ಈ ವಿಷಯಕ್ಕೆ ಸಂಬಂಧಿಸಿ ಡಿಜಿಪಿ ಮತ್ತು ಜಿಲ್ಲಾ ಪೊಲೀಸರಿಗೆ ಇ- ಮೇಲ್‌ನಲ್ಲಿ ದೂರು ನೀಡಿದ್ದರು. ಪೊಲೀಸರು ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಮೌನಿ ರಾಯ್: ಇಲ್ನೋಡಿ ಫೋಟೋಸ್

ದೂರುದಾರರು ಕ್ಯಾತ್ಸಂದ್ರ ಪೊಲೀಸ್‌ ಠಾಣೆ ವ್ಯಾಪ್ತಿ ಕದರನಹಳ್ಳಿ ತಾಂಡ್ಯ ನಿವಾಸಿಯಾಗಿರುವುದರಿಂದ ಕ್ಯಾತ್ಸಂದ್ರ ಪೊಲೀಸರಿಗೆ ಎಫ್‌ಐಆರ್‌ ದಾಖಲಿಸುವಂತೆ ನಿರ್ದೇಶನ ನೀಡಲು ಕೋರಿದ್ದಾರೆ.