ಮದುವೆಯಾಗಿ ಮಕ್ಕಳಾದ ಮೇಲೆ ತೂಕವನ್ನುಹೆಚ್ಚಿಸಿಕೊಂಡಿದ್ದ ನಟಿ ಜ್ಯೋತಿಕಾ ಈಗ ಸ್ಲಿಮ್​  ಆಗಿದ್ದಾರೆ. ಅದರ ಸೀಕ್ರೇಟ್​ ಈಗ ರಿವೀಲ್​  ಆಗಿದೆ.   

ಖ್ಯಾತ ನಟಿ, ತಮಿಳಿನ ಸ್ಟಾರ್ ನಟ ಸೂರ್ಯ ಪತ್ನಿ ಜ್ಯೋತಿಕಾ (Jyotika) ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಎಂದರೆ ಜ್ಯೋತಿಕಾ 25 ವರ್ಷಗಳ ಬಳಿಕ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿಯ ಖ್ಯಾತ ನಟರ ಜೊತೆ ಜ್ಯೋತಿಕಾ ತೆರೆಹಂಚಿಕೊಳ್ಳುತ್ತಿದ್ದಾರೆ. ಥ್ರಿಲ್ಲರ್ ಸಿನಿಮಾಗಾಗಿ ಜ್ಯೋತಿಕಾ ಹಿಂದಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ವಿಕಾಶ್ ಬಾಹ್ಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಜ್ಯೋತಿಕಾ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ (Ajay Devagan) ಮತ್ತು ಆರ್ ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜ್ಯೋತಿಕಾ ಅವರು ಅಜಯ್ ದೇವಗನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಈ ಸಿನಿಮಾ ಜೂನ್ ತಿಂಗಳಿಂದ ಚಿತ್ರೀಕರಣ ಪ್ರಾರಂಭಿಸಿದ್ದು, ಮುಂಬೈ, ಮಸ್ಸೂರಿ, ಲಂಡನ್ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಈ ಸಿನಿಮಾ ಅಜಯ್ ದೇವಗನ್ ಅವರ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿದೆ. ಸದ್ಯದಲ್ಲೇ ಇನ್ನು ಹೆಚ್ಚಿನ ಮಾಹಿತಿಯನ್ನು ಸಿನಿಮಾತಂಡ ಬಹಿರಂಗ ಪಡಿಸಲಿದೆ. 

ಈ ನಡುವೆಯೇ ಜ್ಯೋತಿಕಾ ಅವರ ವಿಡಿಯೋ ಒಂದು ಸಕತ್​ ವೈರಲ್​ ಆಗಿದೆ. ಅದು ಅವರ ವರ್ಕ್​ಔಟ್​ ವಿಡಿಯೋ. ಸೂರ್ಯ ಮತ್ತು ಜ್ಯೋತಿಕಾ ದಂಪತಿಗೆ ಇಬ್ಬರು ಮಕ್ಕಳು. ಮಗಳು ದಿಯಾ (15 ವರ್ಷ) ಮಗ ದೇವ್ (12 ವರ್ಷ). ಜ್ಯೋತಿಕಾ ಅವರಿಗೆ 44 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ, ಇಬ್ಬರು ದೊಡ್ಡ ಮಕ್ಕಳ ಅಮ್ಮನಾದ ಮೇಲೂ ಜ್ಯೋತಿಕಾ ಫಿಟ್​ ಆಗಿದ್ದಾರೆ. ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಇದಕ್ಕೆ ಕಾರಣ, ಇವರ ವರ್ಕ್​ಔಟ್​. ಅಸಾಧ್ಯ ಎನ್ನಿಸುವ ವರ್ಕ್​ಔಟ್​ ಮಾಡಿರುವ ನಟಿಯ ವಿಡಿಯೋ ನೋಡಿ ಫ್ಯಾನ್ಸ್​ ಫಿದಾ (Fans Fida) ಆಗಿದ್ದಾರೆ. ಇದರ ವಿಡಿಯೋ ಅನ್ನು ಅವರು ತಮ್ಮ ಇನ್‍ಸ್ಟಾಗ್ರಾಮ್‍ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 2021ರಲ್ಲಿ ಇವರು ಇನ್​ಸ್ಟಾಗ್ರಾಮ್​ ಖಾತೆ ತೆರೆದಿದ್ದರು. ಖಾತೆ ತೆರೆದ 2 ಗಂಟೆಯಲ್ಲಿ ಮಿಲಿಯನ್ ಫಾಲೋವರ್ಸ್ ಪಡೆದುಕೊಳ್ಳುವ ಮೂಲಕವಾಗಿ ದಾಖಲೆ ಮಾಡಿದ್ದರು ನಟಿ.

ದೀಪಿಕಾ ಪಡುಕೋಣೆ ಇದ್ಯಾವ ಯೋಗದ ಪೋಸ್ ಅಂತ​ ಕೇಳಿದ್ರೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ?

ಈಗ ಅದರಲ್ಲಿಯೇ ತಮ್ಮ ವರ್ಕ್​ಔಟ್​ ಶೇರ್​ ಮಾಡಿದ್ದಾರೆ. ಅಸಾಧ್ಯ ಎನಿಸುವ ವರ್ಕ್​ಔಟ್​ ಮಾಡಿದ್ದಾರೆ. ಭಾರವಾಗಿರುವ ವರ್ಕ್​ಔಟ್​ ಸಲಕರಣೆಗಳನ್ನು ಎತ್ತುವ ಮೂಲಕ ತಮ್ಮ ಶೌರ್ಯ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಸಕತ್​ ವೇಟ್​ ಲಾಸ್​ ಮಾಡಿಕೊಂಡಿದ್ದಾರೆ. ಕೆಲ ವರ್ಷಗಳಿಂದ ವರ್ಕ್​ಔಟ್​ (workout) ನಡೆಸುತ್ತಿರುವ ನಟಿ, ಕಳೆದ ವರ್ಷ ಸುಮಾರು 16 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿಯೇ ಫ್ಯಾನ್ಸ್​ ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ಮತ್ತೊಂದು ಬಾರಿ ನಟಿ ತಮ್ಮ ವಿಡಿಯೋ ಶೇರ್​ ಮಾಡಿಕೊಳ್ಳುವ ಮೂಲಕ ತಮ್ಮ ಫಿಟ್​ನೆಸ್​ ಕುರಿತು ಮಾತನಾಡಿದ್ದಾರೆ. ಈ ಮೊದಲು ನಾನು ತೂಕವನ್ನು ಹೆಚ್ಚಿಸುವ ಬಗ್ಗೆ ಚಿಂತಿಸಲಿಲ್ಲ, ನಿಯಮಿತವಾಗಿ ವ್ಯಾಯಾಮ ಮಾಡಲು ಸೋಮಾರಿಯಾಗಿದ್ದೆ. ನಂತರ ನಾನು ಸಾಕಷ್ಟು ತೂಕವನ್ನು ಹೊಂದಿದ್ದೇನೆ ಎಂದು ಅರಿತುಕೊಂಡೆ. ಆದ್ದರಿಂದ ಕಳೆದ ಕೆಲವು ತಿಂಗಳುಗಳಿಂದ, ನಾನು ಆರೋಗ್ಯಕರ ಆದರೆ ಕಡಿಮೆ ಕ್ಯಾಲೋರಿ ಆಹಾರವನ್ನು ಅನುಸರಿಸುತ್ತಿದ್ದೇನೆ. ನಾನು ನಿಯಮಿತವಾಗಿ ವ್ಯಾಯಾಮ ಮಾಡುತ್ತೇನೆ ಮತ್ತು ಕೆಲವು ಕಿಲೋಗಳನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ನಟಿ ಹೇಳಿದ್ದಾರೆ. 

ಅಂದಹಾಗೆ ಜ್ಯೋತಿಕಾ ಕೊನೆಯದಾಗಿ ಹಿಂದಿಯಲ್ಲಿ ಲಿಟಲ್ ಜಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮತ್ತೆ ಹಿಂದಿ ಸಿನಿಮಾಗಳಲ್ಲಿ ನಟಿಸಿಲ್ಲ. ಅಂದಹಾಗೆ ಜ್ಯೋತಿಕಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದೆ ಹಿಂದಿ ಸಿನಿಮಾದ ಮೂಲಕ. 1998ರಲ್ಲಿ ಡೋಲಿ ಸಾಜಾ ಕೆ ರಖ್ನಾ ಸಿನಿಮಾ ಮೂಲಕ ಬಾಲಿವುಡ್‌ಗೆ (Bollywood) ಪದಾರ್ಪಣೆ ಮಾಡಿದರು. ಆದರೆ ತಮಿಳು ಸಿನಿಮಾರಂಗದ ಮೂಲಕ ಸ್ಟಾರ್ ಆಗಿ ಹೊರಹೊಮ್ಮಿದರು. ಬಳಿಕ ಜ್ಯೋತಿಕಾ ಸೌತ್ ಸ್ಟಾರ್ ಮೆರೆದರು. ಬಳಿಕ ನಟ ಸೂರ್ಯ ಅವರನ್ನು ಮದುವೆಯಾಗಿ ತಮಿಳು ಸೊಸೆಯಾದರು. ಮದುವೆ, ಮಕ್ಕಳು ಅಂತ ಸಂಸಾರದ ಕಡೆ ಗಮನ ಹರಿಸಿದ್ದ ಜ್ಯೋತಿಕಾ ಇದೀಗ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. 

ಆದಿಪುರುಷ್​ ಪಾರ್ಟ್​-2! ರಾಮ, ಸೀತೆಯಾಗಿ ಮಿಂಚುತಿರೋ ಯಶ್​- ರಾಧಿಕಾ ಜೋಡಿ

View post on Instagram