ಕಣ್ಣಿಗೆ ಲೆನ್ಸ್ ಧರಿಸುವವರೇ ಎಚ್ಚರ, ಕಾರ್ನಿಯಾ ಗಾಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ!

ಕಣ್ಣಿಗೆ ಲೆನ್ಸ್ ಧರಿಸುವವರು ವೈದ್ಯರ ಸಲಹೆ ಸೂಚನೆ ಪಡೆಯುವುದು ಅತ್ಯವಶ್ಯಕ. ಇದೀಗ ನಟಿ ಜಾಸ್ಮಿನ್ ಲೆನ್ಸ್‌ನಿಂದ ದೃಷ್ಠಿ ಕಳೆದಕೊಳ್ಳುವ ಹಂತಕ್ಕೆ ತಲುಪಿದೆ. ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಟಿ ಆತಂಕಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
 

Actress Jasmine bhasin who underwent surgery after her corneas got damaged due to eye lenses ckm

ಮುಂಬೈ(ಜು.21) ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಜಾಸ್ಮಿನ್ ಭಾಸಿನ್ ಇದೀಗ ತೀವ್ರ ಕಣ್ಣಿನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ತಮ್ಮ ನೋವು ತೋಡಿಕೊಂಡಿದ್ದಾರೆ. ದೃಷ್ಠಿ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದು, ಚಿಕಿತ್ಸೆ ಮುಂದುವರಿದಿದೆ. ಲೆನ್ಸ್ ಧರಿಸುತ್ತಿದ್ದ ಜಾಸ್ಮಿನ್ ಭಾಸಿನ್ ಸರಿಯಾಗಿ ಧರಿಸದ ಕಾರಣ ನಟಿಯ ಕಾರ್ನಿಯಾ ಗಾಯಗೊಂಡು ಕಣ್ಣು ಊದಿಕೊಂಡಿತ್ತು. ಹೀಗಾಗಿ ದಿಢೀರ್ ಆಸ್ಪತ್ರೆ ದಾಖಲಾಗಿದೆ. 

ಜುಲೈ 17 ರಂದು ನಟಿಗೆ ತೀವ್ರ ಕಣ್ಣಿನ ನೋವು ಕಾಣಿಸಿಕೊಂಡಿದೆ. ದೆಹಲಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಾಸ್ಮಿನ್‌ಗೆ ಕಣ್ಣಿನ ನೋವು ತೀವ್ರಗೊಂಡಿದೆ. ಆದರೆ ಸತತ ಕಾರ್ಯಕ್ರಮಗಳ ಕಾರಣ ವೈದ್ಯರನ್ನು ಬೇಟಿಯಾಗಿಲ್ಲ. ಹೀಗಾಗಿ ನೋವು ಉಲ್ಬಣಿಸಿದೆ. ಹೀಗಾಗಿ ಮುಂಬೈಗೆ ಮರಳಿದ ನಟಿ ದಿಢೀರ್ ವೈದ್ಯರ ಭೇಟಿಯಾಗಿದ್ದಾರೆ.

ಅಂಬಾನಿ ಮದುವೆಯ ಬೆನ್ನಲ್ಲೇ ನಟಿ ಜಾಹ್ನವಿ ಕಪೂರ್​ಗೆ ಏನಾಯ್ತು? ತಂದೆ ಬೋನಿ ಕಪೂರ್​ ಮಾಹಿತಿ

ತಪಾಸಣೆ ವೈದ್ಯರು ಆಸ್ಪತ್ರೆ ದಾಖಲಾಗಲು ಸೂಚಿಸಿದ್ದಾರೆ. ಸರಿಯಾಗಿ ಲೆನ್ಸ್ ಧರಿಸಿದ ಕಾರಣ ನಟಿ ಕಾರ್ನಿಯಾಗೆ ಹಾನಿಯಾಗಿದೆ. ಇದರಿಂದ ಕಣ್ಣುಗಳು ಊದಿಕೊಂಡು ನೋವು ಕಾಣಿಸಿಕೊಂಡಿದೆ. ತಕ್ಷಣವೇ ನಟಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ಎರಡೂ ಕಣ್ಣುಗಳಿಗೆ ಬ್ಯಾಂಡೇಜ್ ಹಾಕಲಾಗಿದೆ.ಚೇತರಿಕೆಗೆ ಕನಿಷ್ಠ 5 ರಿಂದ 6 ದಿನಗಳ ಅವಶ್ಯಕತೆ ಇದೆ. ಸದ್ಯ ಕಣ್ಣುಗಳಿಗೆ ಬ್ಯಾಂಡೇಜ್ ಹಾಕಿರುವ ಕಾರಣ ಕಣ್ಣು ಕಾಣುತ್ತಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.

ಜಾಸ್ಮಿನ್ ಕನ್ನಡದಲ್ಲಿ ಕೋಮಲ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಜಾಸ್ಮಿನ್ ಭಾಸಿನ್ ಕಾಣಿಸಿಕೊಂಡಿದ್ದಾರೆ. 2011ರಲ್ಲಿ ತಮಿಳು ಚಿತ್ರ ವಾನಂ ಮೂಲಕ ಸಿನಿ ಕರಿಯರ್ ಆರಂಭಿಸಿದ ಜಾಸ್ಮಿನ್ ಟ್ವಿಂಕಲ್ ತನೇಜಾ, ತೆನೆ ಬನುಶಲಿ ದಿಲ್ ಸೆ ದಿಲ್ ತಕ್ ಸೇರಿದಂತೆ ಹಲವು ಜನಪ್ರಿಯ ಸಿನಿಮಾ ಹಾಗೂ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಖತ್ರೋ ಕಿ ಕಿಲಾಡಿ, ಹಿಂದಿ ಬಿಗ್ ಬಾಸ್ 14ರಲ್ಲೂ ಜಾಸ್ಮಿನ್ ಕಾಣಿಸಿಕೊಂಡು ಖ್ಯಾತಿ ಗಳಿಸಿದ್ದಾರೆ.

ಶರತ್ ಬಾಬುಗೆ ವಾರಸುದಾರರೇ ಇಲ್ಲ.. ಮನೆ, ಮಾಲ್‌, ಅಪಾರ್ಟ್‌ಮೆಂಟ್‌, ವಿಲ್ಲಾ, ಕಂಪನಿ ಯಾರ ಪಾಲಿಗೆ?

ಇದೀಗ ಲೆನ್ಸ್ ಸಮಸ್ಯೆಯಿಂದ ದೃಷ್ಟಿ ಕಳೆದುಕೊಳ್ಳುವ ಹಂತಕ್ಕೆ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಲೆನ್ಸ್ ಧರಿಸುವರಿಗೆ ಎಚ್ಚರಿಕೆ ಸಂದೇಶವನ್ನೂ ನೀಡಿದೆ. ವೈದ್ಯರ ಸಲಹೆ ಸೂಚನೆಗಳಿಲ್ಲದೆ ಲೆನ್ಸ್ ಧರಿಸುವುದು, ಮರು ಬಳಕೆ ಮಾಡುವುದು ಅತ್ಯಂತ ಅಪಾಯಕಾರಿ. ಹೀಗಾಗಿ ಎಚ್ಚರವಹಿಸಬೇಕು ಎಂದು ನಟಿಯ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. 
 

Latest Videos
Follow Us:
Download App:
  • android
  • ios