ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಜನವರಿಯಲ್ಲಿ ತಾವು ತಂದೆ, ತಾಯಿಯಾಗಲಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

"

2021ರ ಜನವರಿಯಲ್ಲಿ ಬರುವ ಕಂದನ ನಿರೀಕ್ಷೆಯಲ್ಲಿದ್ದೇವೆ ಎಂದು ಕಪಲ್ ಹೇಳಿಕೊಂಡಿದ್ದರು. ವಿರಾಟ್ ಸದ್ಯ ಐಪಿಎಲ್ ಮ್ಯಾಚ್‌ಗಾಗಿ ದುಬೈನಲ್ಲಿದ್ದು, ತಮ್ಮ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್ ಖಾತೆಯಲ್ಲಿ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

IPL ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದ ವಿರುಷ್ಕಾ ಜೋಡಿ

ತಾಯಿಯಾಗಲಿರುವ ಅನುಷ್ಕಾ ಇನ್ನಷ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ. ಬ್ಲಾಕ್ & ವೈಟ್‌ ಡ್ರೆಸ್‌ನಲ್ಲಿ ಅನುಷ್ಕಾ ಇನ್ನಷ್ಟು ಗ್ಲೋ ಕಾಣಿಸಿದ್ದಾರೆ. ಪೊಲ್ಕಾ ಡಾಟ್ ಡ್ರೆಸ್‌ನಲ್ಲಿ ಪ್ರೆಗ್ನೆಂಟ್ ಆಗಿರೋ ಅನುಷ್ಕಾ ಫೋಟೋ ಹಂಚಿಕೊಂಡಿದ್ದಾರೆ. LA ಬೇಸ್ಡ್ ಲೇಬಲ್ ನಿಖೋಲಾಸ್ ಡ್ರೆಸ್‌ನಲ್ಲಿ ಅನುಷ್ಕಾ ಸ್ಟೈಲಿಶ್ ಆಗಿ ಕಂಡಿದ್ದಾರೆ.

ಬ್ಲಾಕ್ ಡ್ರೆಸ್ ತುಂಬಾ ಬಿಳಿ ಬಣ್ಣದ ಚುಕ್ಕಿಗಳಿದ್ದು, ತುಂಬು ತೋಳಿದ್ದು ಎಟ್ರಾಕ್ಟಿವ್ ಆಗಿ ಕಾಣಿಸಿದೆ. ಡ್ರೆಸ್ ಮೇಲ್ಬಾಗದಲ್ಲಿ ಎಲಾಸ್ಟಿಕ್ ಇದ್ದು, ಪ್ರೆಗ್ನೆನ್ಸಿ ಸಮಯದಲ್ಲಿ ಧರಿಸಲು ಸೂಕ್ತವಾಗುವಂತಿದೆ. ಜ್ವೆಲ್ಸ್ ಏನೂ ಧರಿಸದೆ ಸಿಂಪಲ್ ಆಗಿ ಕಾಣಿಸಿದ್ದಾರೆ ಅನುಷ್ಕಾ. ಈ ಬಟ್ಟೆಗೆ ಸುಮಾರು 45 ಸಾವಿರ ಬೆಲೆ ಇದ್ದು, ಸದ್ಯ ಈ ಡ್ರೆಸ್ ಸ್ಟಾಕ್ ಇಲ್ಲ. 

"