"ಅದು ಚಿನ್ನದ ಶೌಚಾಲಯ, ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ವಿಜಯ್ ಮೊದಲ ಬಾರಿಗೆ ಐಷಾರಾಮಿ ಶೌಚಾಲಯವನ್ನು ನೋಡಿದರು ಮತ್ತು ಅದರೊಂದಿಗೆ ಸೆಲ್ಪಿ ತೆಗೆದುಕೊಂಡರು' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, ನಟ ವಿಜಯ್ ವರ್ಮಾ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ.
ಅಮಿತಾಭ್ ಮನೆಗೆ ಹೋಗಿದ್ದ ವಿಜಯ್ ವರ್ಮಾ
ಸುಪ್ರಸಿದ್ದ ನಟ ವಿಜಯ್ ವರ್ಮಾ(Vijay Varma) ಅವರೀಗ ಸಖತ್ ಸುದ್ದಿಯಲ್ಲಿದ್ದಾರೆ. ಕಾರಣ, ತಾವು ಅಮಿತಾಭ್ ಬಚ್ಚನ್ ಮನೆಯಲ್ಲಿ 2016ರಲ್ಲಿ ತೆಗೆದುಕೊಂಡ ಕೆಲವು ಫೋಟೋಗಳನ್ನು ಅವರೀಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಹಿರಿಯ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ (Amitabh Bachchan) ಅವರ ಮನೆ ಜಲ್ಸಾದಲ್ಲಿ ತೆಗೆದ ಸೆಲ್ಪಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆ ಫೋಟೋಗಳಲ್ಲಿ ಅದೊಂದು ಫೋಟೋ ಭಾರೀ ವೈರಲ್ ಆಗುತ್ತಿದೆ. ಕಾರಣ, ಆ ಫೋಟೋದಲ್ಲಿರುವಂತೆ ಅಮಿತಾಭ್ ಬಚ್ಚನ್ ಮನೆಯಲ್ಲಿರುವ ಆ 'ಗೋಲ್ಡನ್ ಟಾಯ್ಕೆಟ್' (golden toilet). ನಟ ವಿಜಯ್ ವರ್ಮಾ ಅವರು ಆ ಗೋಲ್ಡನ್ ಟಾಯ್ಲೆಟ್ ಮುಂದೆ ನಿಂತು ಸೆಲ್ಸಿ ತೆಗೆದುಕೊಂಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವಿಜಯ್ ವರ್ಮಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ವಿಜಯ್ 2016 ಅನ್ನು ತಮ್ಮ ಪ್ರಯಾಣದ ಒಂದು ಮೈಲಿಗಲ್ಲು ಎಂದು ಕರೆದಿದ್ದಾರೆ. ಪೋಸ್ಟ್ ಜೊತೆಗೆ, ಅವರು ಪ್ರತಿ ಚಿತ್ರಕ್ಕೂ ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಿದ್ದಾರೆ. 2016ರ ವರ್ಷ ನನಗೆ ಒಂದು ಮೈಲಿಗಲ್ಲಾಗಿತ್ತು.. ನಾನು ಬಿಗ್ ಬಿ ಮತ್ತು ಶೂಜಿತ್ ಡಾ ಅವರೊಂದಿಗೆ 'ಪಿಂಕ್' ಚಿತ್ರದಲ್ಲಿ ಉತ್ತಮ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಸಾಧ್ಯವಾಯಿತು.
ಚಿನ್ನದ ಶೌಚಾಲಯ
ನಾನು ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಚಿನ್ನದ ಶೌಚಾಲಯದೊಂದಿಗೆ ಸೆಲ್ಸಿ ತೆಗೆದುಕೊಂಡೆ. ನಾನು ನನ್ನ ಜಿಮ್ ಸ್ನೇಹಿತರಾದ ಸಂಜಯ್ ಮಲ್ಲೊತ್ರಾ ಮತ್ತು ಫಾತಿಮಾ ಸನಾ ಶೇಖ್ ಅವರನ್ನು ಮಾಡಿದೆ. ನಾನು ನನ್ನ ನಾಯಕ ಇರ್ಫಾನ್ ಖಾನ್ ಅವರನ್ನು ಭೇಟಿಯಾದೆ" ಎಂದು ತಮ್ಮ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಸಚಿನ್ ತೆಂಡೂಲ್ಕರ್ ಭೇಟಿ!
ಆ ಪೋಸ್ಟ್‌ನಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ನಟ ಅಮಿತಾಭ್ ಬಚ್ಚನ್ ಸೇರಿದಂತೆ ಆ ವರ್ಷದ ಜನರೊಂದಿಗಿನ ಅವರ ವಿಶೇಷ ಭೇಟಿಗಳನ್ನು ಬಹಿರಂಗಪಡಿಸಲಾಗಿದೆ. ಸನ್ಯಾ ಮಲ್ಲೊತ್ರಾ ಮತ್ತು ಫಾತಿಮಾ ಸನಾ ಶೇಖ್ ಅವರೊಂದಿಗಿನ ಬಾಂಧವ್ಯದ ಕ್ಷಣಗಳನ್ನು ಹಂಚಿಕೊಂಡರು.
ಇನ್ನೊಂದು ಫೋಟೋದಲ್ಲಿ ಅವರು ದಿವಂಗತ ನಟ ಇರ್ಫಾನ್ ಅವರೊಂದಿಗೆ ಪೋಸ್ ಕೊಡುತ್ತಿರುವುದನ್ನು ಕೂಡ ತೋರಿಸಲಾಗಿದೆ. ಅದರಲ್ಲಿ, ಒಂದು ಸೆಲ್ಸಿಯ ಬ್ಯಾಕ್‌ಗ್ರೌಂಡ್‌ನಲ್ಲಿ ಚಿನ್ನದ ಶೌಚಾಲಯ ಇತ್ತು. ಅದನ್ನು ವಾಸ್ತವವಾಗಿ ಬಚ್ಚನ್ ಅವರ ಮುಂಬೈ ಮನೆಯ ವಾಶ್‌ರೂಮ್‌ನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದ್ದರು.
"ಅದು ಚಿನ್ನದ ಶೌಚಾಲಯ, ಎಂದು ಅವರ ಪೋಸ್ಟ್‌ಗೆ ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ವಿಜಯ್ ಮೊದಲ ಬಾರಿಗೆ ಐಷಾರಾಮಿ ಶೌಚಾಲಯವನ್ನು ನೋಡಿದರು ಮತ್ತು ಅದರೊಂದಿಗೆ ಸೆಲ್ಪಿ ತೆಗೆದುಕೊಂಡರು' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, ನಟ ವಿಜಯ್ ವರ್ಮಾ ಅವರ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ.


