Asianet Suvarna News Asianet Suvarna News

ಬರೋಬ್ಬರಿ 11 ವರ್ಷಗಳ ಲವ್‌ ಬ್ರೇಕ್‌ ಅಪ್‌ ಮಾಡಿಕೊಂಡ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ

ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಅವರ ಪುತ್ರ, ನಟ ಅಹಾನ್ ಶೆಟ್ಟಿ ಅವರು ತಮ್ಮ ದೀರ್ಘಕಾಲದ ಗೆಳತಿ ತಾನಿಯಾ ಶ್ರಾಫ್ ಅವರೊಂದಿಗಿನ ಸಬಂಧವನ್ನು ತೊರೆದು ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಚರ್ಚೆಯಾಗುತ್ತಿದೆ.

actor Suniel Shetty son Ahan Shetty and Tania Shroff break up after 11 years of dating gow
Author
First Published Dec 23, 2023, 7:07 PM IST

ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಅವರ ಪುತ್ರ, ನಟ ಅಹಾನ್ ಶೆಟ್ಟಿ ಅವರು ತಮ್ಮ ದೀರ್ಘಕಾಲದ ಗೆಳತಿ ತಾನಿಯಾ ಶ್ರಾಫ್ ಅವರೊಂದಿಗಿನ ದೀರ್ಘಕಾಲದ ಸಂಬಂಧಕ್ಕೆ ಮುಕ್ತಾಯ ಹಾಡಿದ್ದಾರೆ ಎಂದು ವರದಿಯಾಗಿದೆ. ಅಹಾನ್ ಮತ್ತು ತಾನಿಯಾ ಬೇರ್ಪಟ್ಟು ಒಂದೂವರೆ ತಿಂಗಳಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ.

ತಾನಿಯಾ ಮಾಡೆಲ್, ಡಿಸೈನರ್ ಮತ್ತು ಕೈಗಾರಿಕೋದ್ಯಮಿ ಜೈದೇವ್ ಮತ್ತು ರೊಮಿಲಾ ಶ್ರಾಫ್ ಅವರ ಪುತ್ರಿ. ಅಹಾನ್ ಮತ್ತು ತಾನಿಯಾ ಶ್ರಾಫ್ ಬಾಲ್ಯದಿಂದಲೇ  ಪ್ರೇಮಿಗಳಾಗಿದ್ದರು, ಅವರು ಒಂದೇ ಶಾಲೆಯಲ್ಲಿ ಓದುತ್ತಿದ್ದರು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಅವರ ಸಂಬಂಧದ ಬಗ್ಗೆ ಸಾಕಷ್ಟು ಪ್ರಾಮಾಣಿಕರಾಗಿ ಪೋಸ್ಟ್ ಹಂಚಿಕೊಳ್ಳುತ್ತಿದ್ದರು.

ಸೋಲೋ ಹಿಟ್‌ ಕೊಡಲಾಗದ ಕರಾವಳಿಯ ಸ್ಟಾರ್‌ ಜತೆ ನಟಿಸಲು ನಟಿಯರ ನಿರಾಕರಣೆ, ಈಗ ವರ್ಷಕ್ಕೆ 100 ಕೋಟಿ ರೂ ದುಡಿಮೆ

 ಮಾಧ್ಯಮ ವರದಿಯಂತೆ ಇದೀಗ ಹನ್ನೊಂದು ವರ್ಷಗಳ ಸಂಬಂಧದ ಅಂತ್ಯವಾಗಿದೆ. ಅವರು ಕಳೆದ ತಿಂಗಳು ಅಥವಾ ಅದಕ್ಕಿಂತಲೂ ಮುಂಚೆಯೇ  ಬೇರ್ಪಟ್ಟಿದ್ದು, ಪ್ರಸ್ತುತ ಒಂಟಿಯಾಗಿದ್ದಾರೆ. ಅವರ ಸಂಬಂಧ ಕೊನೆಗೊಳ್ಳಲು ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾತ್ರವಲ್ಲ ಈ ಬಗ್ಗೆ ಅಹಾನ್ ಮತ್ತು ತಾನಿಯಾ ದೃಢಪಡಿಸಿಲ್ಲ ಅಥವಾ ಈ ಸುದ್ದಿಯನ್ನು ನಿರಾಕರಿಸಿಲ್ಲ.

ಇಬ್ಬರೂ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಆಗಾಗ್ಗೆ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು, ಕೆಲವು ಸಮಯದಿಂದ ಒಬ್ಬರಿಗೊಬ್ಬರು ತಮಗೆ ಸಂಬಂಧಿಸಿದ ಯಾವ ಪೋಸ್ಟ್‌ಗಳನ್ನು ಕೂಡ ಹಂಚಿಕೊಳ್ಳುತ್ತಿಲ್ಲ. ಇದು ಅವರ ಸಂಬಂಧದಲ್ಲಿ ಬಿರುಕು ಇದೆ ಎಂಬ ಬಗ್ಗೆ ಹೆಚ್ಚಿನ ಅನುಮಾನವನ್ನು ಹುಟ್ಟು ಹಾಕಿದೆ. ಆದರೂ  ಅವರು Instagram ನಲ್ಲಿ ಒಬ್ಬರನ್ನೊಬ್ಬರು ಅನುಸರಿಸುತ್ತಿದ್ದಾರೆ.

ಮೊಂಡುತನಕ್ಕೆ ಸಹೋದರಿ ಪಾತ್ರದ ಹಿಟ್‌ ಚಿತ್ರ ನಿರಾಕರಿಸಿ ಅವಕಾಶ ಸಿಗದೆ ತೆರೆಯಿಂದಲೇ ದೂರಾದ ಸ್ಟಾರ್‌ ನಟನ ಸಹೋದರಿ!

ಅಹಾನ್ ಅವರು ನಟ ಸುನೀಲ್ ಶೆಟ್ಟಿ ಮತ್ತು ಮನ ಶೆಟ್ಟಿ ಅವರ ಮಗ. ಬಾಲಿವುಡ್‌ ನಲ್ಲಿ ತಡಪ್‌ ಚಿತ್ರದ ಮೂಲಕ ಚೊಚ್ಚಲ ಪ್ರವೇಶ ಮಾಡಿದರು. ಇವರು ನಟಿ ಅಥಿಯಾ ಶೆಟ್ಟಿಯ ಸಹೋದರ.  ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ವಿಫಲವಾದಾಗ ಅಹಾನ್ ಅವರ ಮೊದಲ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಪಡೆಯಲಿಲ್ಲ.

ತಡಪ್ ನ ಪ್ರೀಮಿಯರ್ ನೈಟ್ ಸಮಯದಲ್ಲಿ, ಇಡೀ ಶೆಟ್ಟಿ ಕುಟುಂಬ, ತಾನಿಯಾ ಶ್ರಾಫ್ ಅವರೊಂದಿಗೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರು. ಇದರ ಜೊತೆಗೆ ಅವರಲ್ಲಿ  ಅಥಿಯಾ ಅವರ ಪತಿ ಕ್ರಿಕೆಟಿಗ ಕೆಎಲ್ ರಾಹುಲ್ ಕೂಡ  ಇದ್ದರು.

ಈ ವೇಳೆ ಕೆಎಲ್ ರಾಹುಲ್ ಮತ್ತು ತಾನಿಯಾ ಬಗ್ಗೆ ಮಾತನಾಡಿದ್ದ ಸುನೀಲ್‌ ಶೆಟ್ಟಿ,  ಅವರಿಬ್ಬರನ್ನು ತಮ್ಮ ಮಕ್ಕಳು ಎಂದು ಕರೆದಿದ್ದರು. ಸಂದರ್ಶನವೊಂದರಲ್ಲಿ ಇಬ್ಬರೂ ಬಚ್ಚಾಗಳು (ಮಕ್ಕಳು)? ನನ್ನ ಮಕ್ಕಳು, ನನ್ನ ಪ್ರೀತಿ, ನನ್ನ ಮೊದಲ ಪ್ರೀತಿ. ತಾನ್ಯಾ ನನ್ನ ಮೊದಲ ಪ್ರೀತಿ. ಅವರು ತುಂಬಾ ಸರಳ ಮತ್ತು ಅವರ ಕುಟುಂಬ ತುಂಬಾ ಸುಂದರವಾಗಿ ಅಳವಡಿಸಿಕೊಂಡಿದ್ದಾರೆ ಎಂದಿದ್ದರು.

ಸಂದರ್ಶನವೊಂದರಲ್ಲಿ ಪರಸ್ಪರ ನಂಬಿಕೆ, ಪ್ರೀತಿ , ನಮ್ಮದೇ ಆದ ಕಾಲಾವಕಾಶ, ಬೇರ್ಪಡಲು ಸಾಧ್ಯವಿಲ್ಲ. ನನಗೆ ಮನ ಹೀಗೆ ಬೇಕು ಎಂದು ಪತ್ನಿಯ ಕೈ ಹಿಡಿದು ಹೇಳಿದ್ದರು. ಅಥಿಯಾ ಕೆಲವೊಮ್ಮೆ ನನ್ನನ್ನು ಕೇಳುತ್ತಾಳೆ, ಎಲ್ಲಿ ನಿಮ್ಮವರೆಂದು ಏಕೆಂದರೆ ನಾನು ಎಲ್ಲೇ ಹೋದರು ಮನಳನ್ನು ನೆನಪಿಸಿಕೊಳ್ಳುತ್ತೇನೆ ನನಗೆ ತಿಳಿದಿಲ್ಲ. ನಮ್ಮಿಬ್ಬರ ಬಾಂಡಿಂಗ್ ಹಾಗಿದೆ. ಅದು ಒಬ್ಬರನ್ನೊಬ್ಬರು ನಂಬುವುದು.  ನಮ್ಮ ಮಕ್ಕಳಿಗೆ ತಮ್ಮ ಮದುವೆಯ ಸಲಹೆಯನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದರು.

Follow Us:
Download App:
  • android
  • ios