ಬಚ್ಚಲುಮನೆಯಲ್ಲಿ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾದ ಹಿರಿಯ ಹಾಸ್ಯ ನಟ ಉಮೇಶ್ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ, ಆಸ್ಪತ್ರೆಯ ಹಾಸಿಗೆಯಲ್ಲೂ ತಮ್ಮ ಹಾಸ್ಯ ಪ್ರವೃತ್ತಿಯನ್ನು ಬಿಡದೆ ಎಲ್ಲರನ್ನೂ ನಗಿಸುತ್ತಿದ್ದಾರೆ.
ಹಾಸ್ಯದ ಮೂಲಕ ಎಲ್ಲರನ್ನೂ ದಶಕಗಳವರೆಗೆ ರಂಜಿಸುತ್ತಿದ್ದ ಸ್ಯಾಂಡಲ್ವುಡ್ನ ಹಿರಿಯ ನಟ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದ ಕಾರಣ, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಈ ಸಂದರ್ಭದಲ್ಲಿಯೇ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ತಿಳಿದು ಬಂದಿದೆ. ಸದ್ಯ ನಟನಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಜಾರಿ ಬಿದ್ದ ಇನ್ನೆಲೆಯಲ್ಲಿ ಅವರ ಮೂಳೆಗೆ ಏಟಾಗಿದೆ. ನಿನ್ನೆ ಸರ್ಜರಿ ಮಾಡಲು ವೈದ್ಯರು ತಯಾರಿ ನಡೆಸಿದ್ದರು. ಆದರೆ, ಆದರೆ ಇದೇ ವೇಳೆ ಯಕೃತ್ತು (Liver) ನಲ್ಲಿ ಕ್ಯಾನ್ಸರ್ ಗಡ್ಡೆ ಇರುವ ವಿಚಾರ ಗೊತ್ತಾಗಿದ್ದರಿಂದ ಸದ್ಯ ಸರ್ಜರಿಯನ್ನು ಮುಂದೂಡಲಾಗಿದೆ.
ಆಸ್ಪತ್ರೆಯಲ್ಲಿ ಮಲಗಿದ್ದರೂ ತಮಾಷೆ
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ನಟ ತಮ್ಮ ಹಾಸ್ಯವನ್ನು ಮಾತ್ರ ಬಿಟ್ಟಿಲ್ಲ. ಹಲವು ದಶಕಗಳವರೆಗೆ ಹಾಸ್ಯದಿಂದಲೇ ಎಲ್ಲರನ್ನೂ ರಂಜಿಸುತ್ತಿರುವ ಉಮೇಶ್ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆಯೇ ಮಲಗಿದ್ದರೂ, ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಅವರನ್ನು ನೋಡಿ ಹಾಸ್ಯ ಮಾಡಿದ್ದಾರೆ. ನಟಿ ಗಿರಿಜಾ ಲೋಕೇಶ್ ಅವರು ಸಾಮಾನ್ಯವಾಗಿ ಯಾವುದೇ ಹಿರಿಯ ನಟ-ನಟಿ ಆಸ್ಪತ್ರೆಗೆ ದಾಖಲಾದರೂ ಹೋಗಿ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ಅದರಂತೆಯೇ ಉಮೇಶ್ ಅವರ ಆರೋಗ್ಯವನ್ನು ವಿಚಾರಿಸಲು ಹೋಗಿದ್ದಾರೆ.
ಗಿರಿಜಾ ಲೋಕೇಶ್ ಭೇಟಿ
ಈ ಸಂದರ್ಭದಲ್ಲಿ ಗಿರಿಜಾ ಲೋಕೇಶ್ ಅವರು ಹಾಡನ್ನು ಹೇಳಿದಾಗ, ಉಮೇಶ್ ಅವರು ಅದಕ್ಕೆ ದನಿಗೊಟ್ಟು ಹಾಸ್ಯ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಇಂಥ ನೋವಿನಲ್ಲಿಯೂ ತಮ್ಮ ಹಾಸ್ಯ ಪ್ರವೃತ್ತಿಯನ್ನು ಬಿಡದೇ ಇರುವುದು ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಅದೇ ವೇಳೆ ಗಿರಿಜಾ ಅವರನ್ನು ಕೂಡ ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.
ವೈದ್ಯರಿಂದ ಮಾಹಿತಿ
ಇನ್ನು, ಉಮೇಶ್ ಅವರ ಕುರಿತು ಇದಾಗಲೇ ವೈದ್ಯರು ಮಾಹಿತಿಯನ್ನು ಕೂಡ ನೀಡಿದ್ದಾರೆ. ಪರೀಕ್ಷೆ ಪ್ರಕಾರ ಲಿವರ್ನಲ್ಲಿ ಕ್ಯಾನ್ಸರ್ ಉಂಟಾಗಿದ್ದು, ಅದು ಬೇರೆ ಅಂಗಗಳಿಗೆ ಹರಡಿರುವುದಾಗಿ ಹೇಳಿದ್ದಾರೆ. ‘ಉಮೇಶ್ ಅವರು ನೋಡಲು ಆರೋಗ್ಯವಾಗಿಯೇ ಕಾಣಿಸಿದ್ದಾರೆ. ಆದರೆ, ಕ್ಯಾನ್ಸರ್ ಇದೆ. ಇದನ್ನು ಖಚಿತಪಡಿಸಲು ಕೆಲವು ಪರೀಕ್ಷೆಗಳನ್ನು ಮಾಡಬೇಕಿದೆ. ಯಕೃತ್ತಿನಲ್ಲಿ ಇರುವ ಗಡ್ಡೆಯನ್ನು ತೆಗೆದು ಪರೀಕ್ಷೆಗೆ ಕಳುಹಿಸಬೇಕಿದೆ. ಕಿಮೋಥೆರಪಿ, ಇಮಿನೋಥೆರಪಿ ಮಾಡಬೇಕಾಗಿದೆ ಎಂದಿದ್ದಾರೆ.
ಇದಾಗಲೇ ಕ್ಯಾನ್ಸರ್ ಸ್ಪೆಶಲಿಸ್ಟ್ ಆಸ್ಪತ್ರೆಗೆ ಬಂದಿದ್ದು, ಇಂಜೆಕ್ಷನ್ ಅಲ್ಲಿ ಗಡ್ಡೆ ಕರಗಿಸೋ ಪ್ರಯತ್ನ ನಡೆಯುತ್ತಿದೆ. ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ. ಇದರ ಹೊರತಾಗಿಯೂ ಆರೋಗ್ಯವಾಗುವ ಸಾಧ್ಯತೆ ಇದೆ ಎಂದು ಕೂಡ ವೈದ್ಯರು ಹೇಳಿದ್ದಾರೆ. ಆದರೆ ಇಷ್ಟೆಲ್ಲಾ ನೋವು ಇಟ್ಟುಕೊಂಡು ಎಲ್ಲರನ್ನೂ ನಗಿಸುವ ಪ್ರವೃತ್ತಿಯನ್ನು ನಟ ಮುಂದುವರೆಸಿರುವುದು ಮಾತ್ರ ಗ್ರೇಟ್ ಎನ್ನುತ್ತಿದ್ದಾರೆ ಅಭಿಮಾನಿಗಳು
