Asianet Suvarna News Asianet Suvarna News

ಸೈನ್ ಲಾಂಗ್ವೇಜ್ ನಿಘಂಟು ಸೇರಿದೆ ಶಾರೂಖ್ ಹೆಸರು..!

  • ಭಾರತೀಯ ಸೈನ್ ಲಾಂಗ್ವೇಜ್ ನಿಘಂಟಿನಲ್ಲಿ ಶಾರೂಖ್ ಹೆಸರು
  • ಬಾಲಿವುಡ್ ಕಿಂಗ್ ಖಾನ್‌ಗೆ ಹೊಸ ಗೌರವ
Actor Shah Rukh Khans name added in Indian Sign Language Dictionary dpl
Author
Bangalore, First Published Sep 25, 2021, 9:41 AM IST
  • Facebook
  • Twitter
  • Whatsapp

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಲಾಂಚ್ ಮಾಡಿದ ಸೈನ್ ಲಾಂಗ್ವೇಜ್ ನಿಘಂಟಿನಲ್ಲಿ ಬಾಲಿವುಡ್(Bollywood) ಬಾದ್‌ ಶಾ ಕಿಂಗ್ ಖಾನ್ ಅವರ ಹೆಸರು ಸೇರಿದೆ. ಸೈನ್ ಲಾಂಗ್ವೇಜ್ ನಿಘಂಟಿನ ಮೊದಲ ವರ್ಷನ್ 2018ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ3000 ಪದಗಳು ಇದ್ದವು. ಇದರಲ್ಲಿ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಪ್ರಿಯಾಂಕ ಚೋಪ್ರಾ ಅವರ ಹೆಸರೂ ಈ ನಿಘಂಟಿನಲ್ಲಿ ಸೇರಿದೆ.

ಭಾರತೀಯ ಸೈನ್ ಲಾಂಗ್ವೇಜ್ ರಿಸರ್ಚ್ ಹಾಗೂ ತರಬೇತಿ ಕೇಂದ್ರ ಈ ನಿಂಘಟಿನ ಇತ್ತೀಚಿನ ವರ್ಷನ್ ಬಿಡುಗಡೆ ಮಾಡಿದ್ದು 10 ಸಾವಿರ ಪದಗಳು ಇವೆ. ಇದನ್ನು 17 ಫೆಬ್ರವರಿ 2021ರಲ್ಲಿ ಆನ್‌ಲೈನ್‌ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಯಿತು. 

ಪಿವಿ ಸಿಂಧು ಬಯೋಪಿಕ್‌ನಲ್ಲಿ ದೀಪಿಕಾ? ಒಲಿಂಪಿಕ್ಸ್ ಸ್ಟಾರ್‌ ಜೊತೆ ನಟಿ!

ಟ್ವಿಟ್ಟರ್ ನಲ್ಲಿ, ಅಭಿಮಾನಿಯೊಬ್ಬರು ಶಾರುಖ್ ಖಾನ್(Shah Rukh Khan) ಚಿಹ್ನೆಯನ್ನು ಪ್ರದರ್ಶಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು. ಎಡ ಎದೆಯ ಹತ್ತಿರ ಬಂದೂಕಿನಂತೆ ಎರಡು ಬೆರಳುಗಳನ್ನು ಹಿಡಿದು ನಂತರ ಅದನ್ನು ಆ ಪ್ರದೇಶದಲ್ಲಿ ಎರಡು ಬಾರಿ ತಟ್ಟುವುದು ಶಾರೂಖ್ ಖಾನ್ ಎಂಬುದನ್ನು ಸೂಚಿಸುತ್ತದೆ.

ಈ ಸುದ್ದಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೆಲಸದ ವಿಚಾರವಾಗಿ ಶಾರೂಖ್ ಖಾನ್ ಸಿದ್ಧಾರ್ಥ್ ಆನಂದ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವರದಿಯ ಪ್ರಕಾರ, ಅವರು 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಎಂಬ ವೈಜ್ಞಾನಿಕ ಸಿನಿಮಾದಲ್ಲೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow Us:
Download App:
  • android
  • ios