ತೆಲಂಗಾಣದ ಜಿಲ್ಲೆ ಒಂದರಲ್ಲಿರುವ 400 ಬುಡಕಟ್ಟು ಕುಟುಂಬಗಳಿಗೆ ಉಚಿತ ದಿನಸಿ ಹಾಗೂ ಔಷಧಿಗಳನ್ನು ನೀಡಿದ ನಟ ರಾಣಾ ದಗ್ಗುಬಾಟಿ.

ಟಾಲಿವುಡ್‌ ಹ್ಯಾಂಡ್ಸಮ್ ನಟ ರಾಣಾ ದಗ್ಗುಬಾಟಿ ಕಳೆದ ಲಾಕ್‌ಡೌನ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಾಣಾ ಕಾಲ್‌ಶೀಟ್ ಕೂಡ ಫುಲ್ ಆಗಿದ್ದು, ಚಿತ್ರೀಕರಣ ಮಾಡಿ ಮುಗಿಸುವಷ್ಟು ತುದಿಗಾಲಿನಲ್ಲಿ ನಿಂತಿದ್ದಾರೆ. 

ಚಿತ್ರರಂಗದ ಕಾರ್ಮಿಕರಿಗೆ ಉಚಿತ ಅಕ್ಕಿ ನೀಡಿ 

ಲಾಕ್‌ಡೌನ್‌ ಸಡಿಲಿಕೆ ಆಯ್ತು, ಚಿತ್ರರಂಗದ ಚಟುವಟಿಕೆಗಳು ಸುಧಾರಿಸಿಕೊಳ್ಳುತ್ತಿವೆ ಎನ್ನುವಷ್ಟರಲ್ಲಿ ಮತ್ತೊಂದು ಲಾಕ್‌ಡೌನ್‌ ಘೋಷಣೆ ಆಗಿತ್ತು. ಈ ಲಾಕ್‌ಡೌನ್‌‌ನಿಂದ ಅನೇಕರಿಗೆ ಪೆಟ್ಟು ಬಿದ್ದಿದೆ. ಅದರಲ್ಲೂ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿರುವ ಸುಮಾರು 400 ಕುಟುಂಬಗಳು ಸಂಕಷ್ಟ ಎದುರಿಸುತ್ತಿದೆ. ಈ ಕುಟುಂಬಗಳಿಗೆ ನೆರವಾಗಿ ರಾಣಾ ನಿಂತಿದ್ದಾರೆ. 

ಪಾಲ ರೇಗಡಿ, ಅಡ್ಡಾಲ ತಿಮ್ಮಾಪುರ, ಕಾಹಿ ತಾಂಡಾ, ಗಗನ್ ಪೇಟ್ ಇನ್ನೂ ಹಲವು ಹಳ್ಳಿಗಳಿಗೆ ರಾಣಾ ದಗ್ಗುಬಾಟಿ ತಂಡ ಉಚಿತ ದಿನಸಿ ಮತ್ತು ಔಷಧಿ ವಿತರಣೆ ಮಾಡಿದ್ದಾರೆ. ರಾಣಾ ಇತ್ತೀಚಿಗೆ ಅಭಿನಯಿಸಿದ 'ಅರಣ್ಯ' ಸಿನಿಮಾದಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ರಾಣಾ ಬುಡಕಟ್ಟು ಜನರಿಗಾಗಿ ಈ ಸೇವಾಕಾರ್ಯ ಮಾಡಿದ್ದಾರೆ.