ದಶಕಗಳ ಕಾಲ ಭಾರತೀಯ ಸಿನಿರಂಗದಲ್ಲಿ ಮನೋರಂಜನೆ ನೀಡುತ್ತಲೇ ಬಂದಿರುವ ಬಹುಭಾಷಾ ನಟ ಮಾಧವನ್‌ಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ. ಈ ಸಂತಸದ ವಿಚಾರವನ್ನು ಮಾಧವನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

SSLCಲೀ ನಟ ಮಾಧವನ್ ಇಷ್ಟೇ ಮಾರ್ಕ್ ತೆಗೆದಿದ್ದಾ? 

'ಕೊಲ್ಹಾಪುರದ ಡಿವೈ ಪಾಟೀಲ್ ಎಜುಕೇಶನ್ ಸೊಸೈಟಿಯಿಂದ ಡಾಕ್ಟರ್ ಆಫ್ ಲೆಟರ್ಸ್ (ಡಿ. ಲಿಟ್.) ಪದವಿಯನ್ನು ಪಡೆದಿದ್ದಕ್ಕಾಗಿ ತುಂಬಾ ಹಂಬಲ್ ಹಾಗೂ ಗ್ರೇಟ್‌ಫುಲ್‌. ಇದು ನನಗೆ ಸಿಕ್ಕಿರುವ ಗೌರವ ಮತ್ತು ಜವಾಬ್ದಾರಿ ಹೆಚ್ಚಿದೆ,' ಎಂದು ಮಾಧವನ್ ಬರೆದು ಕೊಂಡಿದ್ದಾರೆ.

MSc ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿರುವ ಮಾಧವನ್ ಕೆನಡಾ ಆಲ್ಬೆರ್ಟಾ ಸೆಟ್ಲರ್‌ನಲ್ಲಿ ವಿದ್ಯಾರ್ಥಿವೇತನದಿಂದ ಉನ್ನತ ಶಿಕ್ಷಣ ಪಡೆದುಕೊಂಡರು. ಶಾಲಾ ಕಾಲೇಜ್‌ ದಿನಗಳಿಂದ ಮಾಧವನ್ ಶಿಕ್ಷಣ ಹಾಗೂ ಕಲೆ ವಿಭಾಗದಲ್ಲಿ ಎಂದಿಗೂ ಫಸ್ಟ್.

ಬರಡು ಭೂಮಿಯನ್ನು ಹಸಿರಾಗಿಸಿದ ನಟ ಮಾಧವನ್ 

ಸದ್ಯಕ್ಕೆ ಮಾಧವನ್‌ ತಾವೇ ಬಂಡಬಾಳ ಹಾಕಿ ಆ್ಯಕ್ಷನ್ ಕಟ್ ಹೇಳುತ್ತಿರುವ ರಾಕೆಟ್ರಿ: ದಿ ನಂಬಿ ಎಫೆಕ್ಟ್‌ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.