Asianet Suvarna News Asianet Suvarna News

ಸೀನಿಯರ್‌ಗಳು ನನ್ನ ಎದೆಗೆ ಕೈ ಹಾಕುತ್ತಿದ್ರು : ಬಾಲ್ಯದಲ್ಲಿ ಅನುಭವಿಸಿದ ಕಿರುಕುಳ ಬಿಚ್ಚಿಟ್ಟ ನಟ

ಶಾಲಾ ದಿನಗಳಲ್ಲಿ ತಮಗಾದ ಕೆಟ್ಟ ಅನುಭವವನ್ನು ನಟ ಪ್ರಶಾಂತ್ ಹಂಚಿಕೊಂಡಿದ್ದಾರೆ. ಇದರಿಂದ  ಪರೀಕ್ಷೆಗೆ ಹೋಗಲು ನನಗೆ ಭಯವಾಗುತ್ತಿತ್ತು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.

Actor Prasanth Alexander shares a disturbing experience from his school days mrq
Author
First Published Sep 2, 2024, 4:31 PM IST | Last Updated Sep 2, 2024, 4:31 PM IST

ತಿರುವನಂತಪುರ: ಹೇಮಾ ಸಮಿತಿ ವರದಿ ಹೊರಬಂದ ನಂತರ ಅನೇಕರು ತಮ್ಮ ಅನುಭವಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಹಲವಾರು ಪ್ರಮುಖ ನಟರು ಮತ್ತು ನಿರ್ದೇಶಕರ ವಿರುದ್ಧ ಆರೋಪಗಳು ಕೇಳಿಬಂದಿವೆ. ಮೊದಲು ನಟಿಯರು ಮಾತನಾಡಲು ಆರಂಭಿಸಿದರೆ, ಈಗ ನಟರು ಸಹ ತಮ್ಮ ಜೀವನದಲ್ಲಾದ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟ ಪ್ರಶಾಂತ್ ಅಲೆಕ್ಸಾಂಡರ್, ಶಾಲಾ ದಿನಗಳಲ್ಲಿ ತಮಗಾದ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ್ದಾರೆ. 

ಶಾಲೆಯಲ್ಲಿ ಓದುತ್ತಿದ್ದಾಗ ಹಿರಿಯ ವಿದ್ಯಾರ್ಥಿಗಳು ತನ್ನ ಎದೆಯ ಮೇಲೆ ಕೈ ಹಾಕುತ್ತಿದ್ರು. ಅದು ತಮಗೆ ದೊಡ್ಡ ಆಘಾತವನ್ನು ನೀಡಿತು ಎಂದು ಪ್ರಶಾಂತ್ ಅಲೆಕ್ಸಾಂಡರ್ ಹೇಳುತ್ತಾರೆ. ಎಬಿಸಿ ಸಿನಿಮಾ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಅಲೆಕ್ಸಾಂಡರ್ ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಚಿತ್ರೀಕರಣದ ವೇಳೆಯೇ ಕಿರುಕುಳ ನಡೆದ್ರೆ ಯಾಕೆ ಧ್ವನಿ ಎತ್ತಲ್ಲ ಎಂಬ ಪ್ರಶ್ನೆಯನ್ನು ಪ್ರಶಾಂತ್ ಅವರಿಗೆ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಅಲೆಕ್ಸಾಂಡರ್, ಅದು ಅವರ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಹೇಗೆ ಪ್ರತಿಕ್ರಿಯಿಸಬೇಕೆಂದು ಅವರಿಗೆ ತಿಳಿದಿಲ್ಲದಿರಬಹುದು. ಅಂತಹ ಪರಿಸ್ಥಿತಿಯನ್ನು ಅವರು ಮೊದಲ ಬಾರಿಗೆ ಎದುರಿಸುತ್ತಿರಬಹುದು ಎಂದು ಹೇಳಿದರು. 

ನಟಿಯರಿಗೆ ಲೈಂಗಿಕ ಕಿರುಕುಳ.. ಇಂದು, ನಿನ್ನೆಯದಲ್ಲ: ಕಾಸ್ಟಿಂಗ್ ಕೌಚ್‌ ಬಗ್ಗೆ ನಟಿ ಊರ್ವಶಿ ಸ್ಫೋಟಕ ಹೇಳಿಕೆ

ನಾನು ಚಿಕ್ಕವನಿದ್ದಾಗ ತುಂಬಾ ದಪ್ಪಗಿದ್ದೆ. ಪರೀಕ್ಷೆ ಸಮಯದಲ್ಲಿ ಅಕ್ಕ-ಪಕ್ಕ 10ನೇ ಕ್ಲಾಸ್ ಹುಡುಗರು, ನಾನು ಮಧ್ಯದಲ್ಲಿ ಕುಳಿತುಕೊಳ್ಳುತ್ತಿದ್ದೆ. ನನ್ನನ್ನು ನೋಡಿದ ತಕ್ಷಣ ಎದೆಯ ಮೇಲೆ ಕೈ ಹಾಕುತ್ತಿದ್ದರು. ಅದು ಅವರಿಗೆ ಹಾಸ್ಯ ಅನ್ನಿಸುತ್ತಿತ್ತು. ಅವರಿಗೆ ಒಂದು ರೀತಿಯ ಸಂತೋಷವಾಗುತ್ತಿತ್ತು. ಮೊದಲ ದಿನ ಅವರು ಏನು ಮಾಡುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ಅವರ ವರ್ತನೆಯಿಂದ ನೋವಾದಾಹ ಅದು ಹಾಸ್ಯ ಅಲ್ಲ ಎಂದು ಅರಿವಾಯ್ತು. ನಂತರ ಪರೀಕ್ಷೆಗೆ ಹೋಗಲು ಭಯ ಶುರುವಾಯ್ತು. ಆದರೂ ಭಯಪಟ್ಟಿಕೊಂಡೇ  ಪರೀಕ್ಷೆಗೆ ಹೋಗುತ್ತಿದ್ದೆ ಎಂದು ನಟ ಪ್ರಶಾಂತ್ ಅಲೆಕ್ಸಾಂಡರ್ ಬಾಲ್ಯದಲ್ಲಿ ಅನುಭವಿಸಿದ ಕರಾಳ ದಿನಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡರು. 

ನಾನು ಇದನ್ನು ಶಿಕ್ಷಕರ ಬಳಿಯೂ ಹೇಳಿಕೊಳ್ಳಲು ಭಯವಾಗುತ್ತಿತ್ತು. ಹೇಳಿದ್ರೆ ಏನಾದ್ರೂ ಬೇರೆ ಆದ್ರೆ ಹೇಗೆ ಎಂಬ ಆತಂಕವಾಗುತ್ತಿತ್ತು. 10ನೇ ಕ್ಲಾಸ್ ಅಣ್ಣಂದಿರು ಹಾಗೆ ಮಾಡಿದಾಗ ನಾನು ಸುಮ್ಮನೆ ಸಹಿಸಿಕೊಳ್ಳುತ್ತಿದ್ದೆ. ಆದ್ರೆ ಇದು ನನ್ನ ಮನಸ್ಸಿನ ಮೇಲೆ ದೊಡ್ಡ ನಕಾರಾತ್ಮಕ ಪರಿಣಾಮ ಬೀರಿತ್ತು. ನಾನು ದುರ್ಬಲನಲ್ಲ ಎಂದು ತೋರಿಸಬೇಕು ಎಂದು ನಗುತ್ತಲೇ ಎಲ್ಲ ಕಷ್ಟವನ್ನು ಸಹಿಸಿಕೊಳ್ಳುತ್ತಿದ್ದೆ. ನಾನು ನಾಯಕನಾದ ಮೇಲೆ ಯಾರಾದರೂ ಹೀಗೆ ಮಾಡುತ್ತಿದ್ದಾರಾ ಎಂದು ನೋಡಲು ಹೋದೆ, ಆದರೆ ಯಾರೂ ಹಾಗೆ ಮಾಡುತ್ತಿರಲಿಲ್ಲ. ಆದರೆ ನಾನು ದಿಟ್ಟನಾಗಿದ್ದರಿಂದ ನನ್ನನ್ನು ಯಾರೂ ಮುಟ್ಟಲಿಲ್ಲ ಎಂದು ಪ್ರಶಾಂತ್ ಹೇಳುತ್ತಾರೆ.

'ಹೇಳೋದ್‌ ಆಚಾರ, ಮಾಡೋದ್‌ ಅನಾಚಾರ..' ಹೆಣ್ಮಕ್ಕಳ ಎದುರು ಒಳ್ಳೆಯವನಾಗೋಕೆ ಹೋಗಿ ಪೇಚಿಗೆ ಸಿಲುಕಿದ ನಟ ವಿಶಾಲ್‌!

Latest Videos
Follow Us:
Download App:
  • android
  • ios