ಪತ್ನಿಯೊಂದಿಗೆ ಮಿಲಿಂದ್ ಹಾಟ್ ಫೋಟೋಶೂಟ್

Milind Soman photo shoots with wife Ankita
Highlights

ಸುಮಾರು 30 ವರ್ಷಗಳಿಗಿಂತಲೂ ಕಿರಿಯ ಯುವತಿಯೊಂದಿಗೆ ಸಪ್ತಪದಿ ತುಳಿದ ಮಿಲಿಂದ್ ಸೋಮನ್ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಇದೀಗ ಮತ್ತೆ ತಮ್ಮ ಪತ್ನಿಯೊಂದಿಗೆ ಜಾಹೀರಾತುವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಫೋಟೋಶೂಟ್ ಮಾಡಸಿದ್ದಾರೆ. ಇದು ಸಾಮಾಜಿಕ ಜಾಲಾತಣದಲ್ಲಿ ಸದ್ದು ಮಾಡುತ್ತಿದೆ.

ತನಗಿಂತ 24 ವರ್ಷ ಸಣ್ಣ ಯುವತಿಯನ್ನು ಮದುವೆಯಾಗುವ ಮೂಲಕ ಬಾಲಿವುಡ್ ನಟ ಹಾಗೂ ಮಾಡೆಲ್ ಆಗಿರುವ ಮಿಲಿಂದ್ ಸೋಮನ್ ಬಿಸಿ ಬಿಸಿ ಸುದ್ದಿಯಲ್ಲಿದ್ದರು. ಇದೀಗ ತನ್ನ ಪತ್ನಿ ಅಂಕಿತಾ ಜೊತೆ ಜಾಹೀರಾತಿಗಾಗಿ ಫೋಟೋಶೂಟ್ ಮಾಡಿಸಿದ್ದಾರೆ. ರೊಮ್ಯಾಂಟಿಕ್ ಆಗಿರುವ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

 

Victoria Krundysheva (Tonse) (@victoriakrundysheva) ರಿಂದ ಹಂಚಲಾದ ಪೋಸ್ಟ್ ಅವರು ಜು 7, 2018 ರಂದು 9:25ಅಪರಾಹ್ನ PDT ಸಮಯಕ್ಕೆ ರಂದು

ಲೆದರ್ ಟ್ರಾವೆಲ್ ಆಕ್ಸೆಸರೀಸ್ ಬ್ರಾಂಡ್ ಜಾಹೀರಾತಿಗಾಗಿ ಫೋಟೊಶೂಟ್ ಮಾಡಿಸಿದ್ದಾರೆ. ವಿಕ್ಟೊರಿಯಾ ಫೋಟೋಗ್ರಾಫರ್ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋಶೂಟಲ್ಲಿ ಅಂಕಿತಾ ಮತ್ತು ಮಿಲಿಂದ್ ಜೋಡಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದೆ. 

 

Ankita Konwar (@earthy_5) ರಿಂದ ಹಂಚಲಾದ ಪೋಸ್ಟ್ ಅವರು ಜು 7, 2018 ರಂದು 2:50ಪೂರ್ವಾಹ್ನ PDT ಸಮಯಕ್ಕೆ ರಂದು

ಹಲವಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ 55 ವರ್ಷದ ಮಿಲಿಂದ್, ಇತ್ತೀಚೆಗಷ್ಟೇ 24 ವರ್ಷದ ಅಂಕಿತಾ ಅವರನ್ನು ಮದುವೆಯಾಗಿದ್ದಾರೆ.

loader