ಖ್ಯಾತ ವಿಲನ್ ಕಝಾನ್​ ಖಾನ್​ ಹೃದಯಾಘಾತದಿಂದ ನಿಧನ

ದಕ್ಷಿಣ ಭಾರತದ ಖ್ಯಾತ ವಿಲನ್ ಕಝಾನ್​ ಖಾನ್​ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 

actor Kazan Khan passes away due to heart attack sgk

ಖ್ಯಾತ ನಟ ಕಝಾನ್​ ಖಾನ್​ ಸೋಮವಾರ (ಜೂನ್​ 12) ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಕಝಾನ್ ಇಹಲೋಕ ತ್ಯಜಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಲನ್​ ಪಾತ್ರ ಮಾಡುವ ಮೂಲಕ ಕಝಾನ್​ ಖಾನ್​ ತುಂಬಾ ಫೇಮಸ್​ ಆಗಿದ್ದರು. ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ನಟಿಸಿದ್ದರು, ಜೊತೆಗೆ ಕನ್ನಡದ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.  ಕನ್ನಡದ ‘ಹಬ್ಬ’, ‘ನಾಗದೇವತೆ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿಅಭಿನಯಿಸಿದ್ದರು. ಕಝಾನ್​ ಖಾನ್​ ನಿಧನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

ಕಝಾನ್​ ಖಾನ್​ ನಿಧನದ ಸುದ್ದಿಯನ್ನು ನಿರ್ಮಾಪಕ ಎನ್​ಬಿ ಬದುಶ ಸಾಮಾಜಿಕ ಜಾಲತಾಣದ ಮೂಲಕ ಖಚಿತಪಡಿಸಿದ್ದಾರೆ. ಕಝಾನ್​ ಖಾನ್ ಫೋಟೋ ಶೇರ್ ಮಾಡಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. ಇನ್ನೂ ಕಝಾನ್ ಖಾನ್ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಗಂಧರ್ವಂ’, ‘ಸಿಐಡಿ ಮೂಸಾ’, ‘ದಿ ಕಿಂಗ್​’, ‘ಡ್ರೀಮ್ಸ್​’, ‘ಸೇತುಪತಿ ಐಪಿಎಸ್​’, ‘ವಾನತೈಪೋಲ’, ‘ಮೆಟ್ಟುಕುಡಿ’, ‘ವಲ್ಲರಸು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಝಾನ್​ ಖಾನ್​ ನಟಿಸಿದ್ದರು. 

ರ್ಯಾಂಪ್ ವಾಕ್ ವೇಳೆ ನಡೆದ ದುರಂತಕ್ಕೆ ಮಾಡೆಲ್ ಸಾವು

ಖಡಕ್ ವಿಲನ್ ಆಗಿ ಮಿಂಚಿದ ಕಝಾನ್​ ಖಾನ್ ಇನ್ನು ನೆನಪು ಮಾತ್ರ. ಅವರ ಗಮನಾರ್ಹ ಪಾತ್ರಗಳ ಮೂಲಕ ಸದಾ ನನೆಪಿನಲ್ಲಿ ಇರುತ್ತಾರೆ.  ಕಝಾನ್ ನಿಧನಕ್ಕೆ ಅಭಿಮಾನಿಗಳು, ಸಿನಿಮಾರಂಗದ ಗಣ್ಯರು ಹಾಗೂ ಆಪ್ತರು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಕಝಾನ್​ ಖಾನ್​  1992ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ತಮಿಳು ಸಿನಿಮಾರಂಗಿಂದ ಬಣ್ಣದ ಬದುಕು ಆರಂಭಿಸಿದ ಕಝಾನ್ ಖಾನ್ ಬಳಿಕ ಬೇರೆ ಬೇರೆ ಭಾಷೆಯ ಸಿನಿಮಾರಂಗದಲ್ಲಿ ಮಿಂಚಿದರು. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿದ್ದಾರೆ.

ರಸ್ತೆ ಅಪಘಾತ: ಖ್ಯಾತ ಕಿರುತೆರೆ ನಟ ಕೊಲ್ಲಂ ಸುಧಿ ನಿಧನ

ತಮಿಳು ಸಿನಿಮಾರಂಗದಿಂದ ಪ್ರಾರಂಭವಾದ ಜರ್ನಿ ಆರಂಭಿಸಿದ ಕಝಾನ್ ಖಾನ್ 1995ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 50ಕ್ಕೂ ಅಧಿಕ ಸಿನಿಮಾಗಳಲ್ಲಿ ಕಝಾನ್​ ಖಾನ್​ ನಟಿಸಿದ್ದರು. ಅನೇಕ ಸ್ಟಾರ್​ ನಟರ ಜೊತೆಯೂ ಕಝಾನ್ ಖಾನ್ ನಟಿಸಿ ಸೈ ಎನಿಸಿಕೊಂಡಿದ್ದರು.  

Latest Videos
Follow Us:
Download App:
  • android
  • ios