ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ ಟ್ವಿಟರ್ ಖಾತೆ ಹ್ಯಾಕ್ 2020 ಎಪ್ರಿಲ್‌ನಲ್ಲಿಯೂ ನಟಿಯ ಖಾತೆ ಹ್ಯಾಕ್

ಚೆನ್ನೈ(ಜು.21): ಬಿಜೆಪಿ ನಾಯಕಿ, ನಟಿ ಖುಷ್ಬು ಸುಂದರ್ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ನನ್ನ ಟ್ವಿಟ್ಟರ್ ಖಾತೆಯನ್ನು ಮೂರು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಟ್ವಿಟರ್ ಆಡಳಿತ ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದ ಕೆಲವು ದಿನಗಳಲ್ಲಿ ಈ ಖಾತೆಯಿಂದ ಯಾವುದೇ ಚಟುವಟಿಕೆ ಅಥವಾ ಟ್ವೀಟ್ ಮಾಡಿದ್ದರೆ ಅದು ನಾನು ಮಾಡಿದ್ದಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖುಷ್ಬು ಸುಂದರ್ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡುವುದು ಇದೇ ಮೊದಲಲ್ಲ. ನಟಿ ಮತ್ತು ರಾಜಕಾರಣಿ ತಮ್ಮ ಟ್ವಿಟ್ಟರ್ ಖಾತೆ ಏಪ್ರಿಲ್ 2020 ರಲ್ಲಿ ಹ್ಯಾಕ್ ಆದಾಗ ತಮ್ಮ ಅಭಿಮಾನಿಗಳ ಸಹಾಯವನ್ನು ಕೋರಿದ್ದರು.

View post on Instagram

ಹ್ಯಾಕಿಂಗ್ ಮಾಡಿದ ನಂತರ ಹ್ಯಾಕರ್ ಡಿಸ್‌ಪ್ಲೇ ಚಿತ್ರ, ಬ್ಯಾನರ್ ಚಿತ್ರ, ಹಾಗೆಯೇ ಹೆಸರನ್ನು ಬ್ರಿಯಾನ್ ಎಂದು ಬದಲಾಯಿಸಲಾಗಿದೆ ಎಂದು ತಿಳಿದು ಬಂದಿದೆ.

View post on Instagram