ನಟ ಅಜಿತ್ ಕುಮಾರ್ ಸಿನಿಮಾಗಳಲ್ಲಿ ಅಬ್ಬರಿಸುವುದರ ಜೊತೆಗೆ ಕಾರು ರೇಸಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ಆದರೆ ಅಜಿತ್ ಕುಮಾರ್ ಕಾರು ಪದೇ ಪದೇ ಅಪಘಾತಕ್ಕೀಡಾಗುತ್ತಿದೆ. ಇದೀಗ ಇಟಲಿಯಲ್ಲಿ ನಡೆಯುತ್ತಿರುವ ಕಾರ್ ರೇಸಿಂಗ್‌ನಲ್ಲಿ ಅಜಿತ್ ಕಾರು ಅಪಘಾತಕ್ಕೀಡಾಗಿದೆ. 

ಇಟಲಿ (ಜು.20) ನಟ ಅಜಿತ್ ಕಮಾರ್ ಸಿನಿಮಾ ಜೊತೆಗೆ ಕಾರು ರೇಸಿಂಗ್‌ನಲ್ಲಿ ಅಷ್ಟೇ ಆಸಕ್ತಿ. ರೇಸರ್ ಆಗಿರುವ ಅಜಿತ್ ಕುಮಾರ್ ಸಿನಿಮಾದಿಂದ ಬ್ರೇಕ್ ಪಡೆದು ಸತತವಾಗಿ ಕಾರು ರೇಸಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಅಜಿತ್ ಕಾರು ಒಂದಲ್ಲ ಒಂದು ಕಾರಣದಿಂದ ಅಪಘಾತಕ್ಕೀಡಾಗುತ್ತಿದೆ. ಇದೀಗ ಇಟಲಿಯಲ್ಲಿ ನಡೆಯುತ್ತಿರುವ ಕಾರು ರೇಸಿಂಗ್‌ನಲ್ಲಿ ಅಜಿತ್ ಕುಮಾರ್ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇಟಲಿಯಲ್ಲಿ ನಡೆಯುತ್ತಿರುವ GT4 ಕಾರ್ ರೇಸ್‌ನಲ್ಲಿ ಅಜಿತ್ ಕುಮಾರ್ ಅವರ ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಬೈಕ್ ಮತ್ತು ಕಾರ್ ರೇಸ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಅಜಿತ್ ಕಳೆದ ಜನವರಿಯಲ್ಲಿ ದುಬೈನಲ್ಲಿ ನಡೆದ ಕಾರ್ ರೇಸ್‌ನಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ದುಬೈನಲ್ಲಿ ತಂಗಿ ತರಬೇತಿ ಪಡೆದಿದ್ದರು.

GT4 ಕಾರ್ ರೇಸ್‌ನ 2ನೇ ದಿನ ಅಪಘಾತ

ಇಟಲಿಯಲ್ಲಿ ನಡೆಯುತ್ತಿರುವ GT4 ಕಾರ್ ರೇಸ್‌ನ 2ನೇ ದಿನದಂದು ಅಜಿತ್ ಕುಮಾರ್ ಅವರ ಕಾರು ಟ್ರ್ಯಾಕ್‌ನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಅಜಿತ್ ಕಾರಿನ ಮುಂದೆ ಹೋಗುತ್ತಿದ್ದ ಕಾರು ಟ್ರ್ಯಾಕ್‌ನಲ್ಲಿ ನಿಂತಿದ್ದರಿಂದ ಅಜಿತ್ ಕುಮಾರ್ ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಅಜಿತ್‌ಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಅಜಿತ್ ಕಾರು ಹಾನಿಗೊಳಗಾಗಿದೆ. ಹೆಚ್ಚಿನ ಸುರಕ್ಷತೆ ಹೊಂದಿದ್ದ ಕಾರಣ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದುಬೈ ಕಾರ್ ರೇಸ್‌ನಲ್ಲಿ ಅಪಘಾತ

ಕಾರ್ ರೇಸ್‌ಗಾಗಿ ತಮ್ಮ ಕಾರನ್ನು ಸಹ ವಿನ್ಯಾಸಗೊಳಿಸಿದ್ದರು. ದುಬೈ ಕಾರ್ ರೇಸ್ ಆರಂಭವಾಗುವ ಮೊದಲು ಅಜಿತ್ ಅಭ್ಯಾಸದಲ್ಲಿದ್ದಾಗ ಬ್ರೇಕ್ ವೈಫಲ್ಯದಿಂದ ಕಾರು ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ಅಜಿತ್‌ಗೆ ಏನೂ ಆಗಲಿಲ್ಲ. ಇದಾದ ಬಳಿಕ ಈ ಕಾರ್ ರೇಸ್‌ನಿಂದ ಹಿಂದೆ ಸರಿಯುವುದಾಗಿ ಘೋಷಿಸಿ ನಂತರ ಮತ್ತೆ ಕಾರ್ ರೇಸ್‌ನಲ್ಲಿ ಭಾಗವಹಿಸಿದರು.

ಪೋರ್ಚುಗಲ್ ಕಾರ್ ರೇಸ್‌ನಲ್ಲಿ ಅಪಘಾತ

ಇದರಲ್ಲಿ 3ನೇ ಸ್ಥಾನ ಪಡೆದು ಸಾಧನೆ ಮಾಡಿದರು. ದುಬೈ ಕಾರ್ ರೇಸ್ ಸರಣಿಯ ನಂತರ ಪೋರ್ಚುಗಲ್‌ನಲ್ಲಿ ನಡೆದ ಕಾರ್ ರೇಸ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಅನಿರೀಕ್ಷಿತವಾಗಿ ಕಾರು ಅಪಘಾತಕ್ಕೀಡಾದರು. ಅಭ್ಯಾಸದಲ್ಲಿದ್ದಾಗ ಅವರ ಕಾರು ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ಅಜಿತ್‌ಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಅವರ ಕಾರು ಮಾತ್ರ ತೀವ್ರವಾಗಿ ಹಾನಿಗೊಳಗಾಗಿದೆ.

ಅಜಿತ್ ಕುಮಾರ್ ಅಭಿನಯದ ಗುಡ್, ಬ್ಯಾಡ್ & ಅಗ್ಲಿ' ಚಿತ್ರಗಳು ಈ ವರ್ಷ ಬಿಡುಗಡೆಯಾಗಿದ್ದು, 'ಗುಡ್, ಬ್ಯಾಡ್ & ಅಗ್ಲಿ' ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಚಿತ್ರಗಳ ನಂತರ ಇಲ್ಲಿಯವರೆಗೆ ಯಾವುದೇ ಚಿತ್ರಕ್ಕೆ ಅಜಿತ್ ಬದ್ಧರಾಗಿಲ್ಲ. ನಿರ್ದೇಶಕ ಆದಿಕ್ ರವಿಚಂದ್ರನ್ ಅಜಿತ್ ಅವರ ಚಿತ್ರವನ್ನು ನಿರ್ದೇಶಿಸಲು ಆಸಕ್ತಿ ಹೊಂದಿದ್ದಾರೆ ಎಂಬುದು ಗಮನಾರ್ಹ.