ವಾ!...ರೊಮ್ಯಾಂಟಿಕ್ ಫಿಲ್ಮ್‌ ಅಂದ್ರೆ ಇದಪ್ಪಾ ಯಾರೀ ಮಿಸ್‌ ಮಾಡುತ್ತಾರೆ! ಇಂತಹ ಬೇಶ್ ಕಾಮೆಂಟ್‌ ಪಡೆದುಕೊಂಡ ಸಿನಿಮಾ 'ಆಶಿಕಿ-2'. ಇಷ್ಟೊಂದು ಹಾರ್ಟ್‌ ಟಚ್ಚಿಂಗ್ ಕಥೆ ಬರೆಯುವುದಕ್ಕೆ ಯಾರು ಸ್ಪೂರ್ತಿ? ಇದನ್ನು ಬರೆದವರು ಯಾರು? ಎನ್ನುವ  ಪ್ರಶ್ನೆಗಳಿಗ ಹಿಂದೆ ಹೊರಟಾಗ  ಸಿಕ್ಕ ಉತ್ತರವಿದು.... 

ಹೌದು! ಬಾಲಿವುಡ್‌ ಬಾಕ್ಸ್ ಆಫೀಸ್ ನಲ್ಲಿ  ಸೂಪರ್‌ ಹಿಟ್‌ ಕಲೆಕ್ಷನ್‌ ಪಡೆದ ಸಿನಿಮಾ 'ಆಶಿಕಿ-2' ಸಿನಿಮಾ ಬರಹಗಾರ್ತಿ ಶಿಗುಫ್ತಾ ರಫಕಿ. ತೀರ ಬಡತನದ ಕುಟುಂಬದಿಂದ ಬಂದ ಶಿಗುಫ್ತಾಗೆ ಜೀವನ ನಡೆಸಲು, ಬಂದ ಕಷ್ಟಗಳನ್ನು ಎದುರಿಸಲು ಹಣವಿರಲಿಲ್ಲ. ಅನಿವಾರ್ಯ ಕಾರಣಕ್ಕೆ ಕೆಲ ವರ್ಷಗಳ ಕಾಲ ವೇಶ್ಯೆಯಾಗಿದ್ದರಂತೆ, ಆ ನಂತರ ಬಾರ್‌ ಡ್ಯಾನ್ಸರ್‌ ಆಗಿದ್ದರಂತೆ.  ಹಾಗಿದ್ದರೆ ಶಿಗುಫ್ತಾ ರಿಯಲ್‌ ಲೈಫ್‌ನಲ್ಲಿ ಚಿತ್ರಕಥೆ ಬರೆಯಲು  ಬರಹಗಾರ್ತಿಯಾಗಲು ಕಾರಣವೇನು? ಮನಸ್ಸಿನಲ್ಲಿದ್ದ ಆ ಕಿಚ್ಚು ಏನು?

16ನೇ ವಯಸ್ಸಿಗೆ ವೇಶ್ಯಾವಾಟಿಕೆಗೆ ಇಳಿದವಳಿಂದು ಬಾಲಿವುಡ್‌ನ ಯಶಸ್ವಿ ರೈಟರ್!

11 ವಯಸ್ಸಿಗೆ ಬಾರ್‌ ಡ್ಯಾನ್ಸರ್‌:

ತಂದೆ-ತಾಯಿ ಯಾರೆಂದು ತಿಳಿಯದ ಶಗುಫ್ತಾಳನ್ನು ಯಾರೋ ಹೆಣ್ಣು ಮಗಳೊಬ್ಬಳು ಸಾಕಿದ್ದರು. ಆಕೆಗೆ ಕೊಲ್ಕತ್ತದ ವ್ಯಕ್ತಿ ಜೊತೆ ಅಕ್ರಮ ಸಂಬಂಧವಿತ್ತು. ಆದರೆ ಆ ವ್ಯಕ್ತಿ ಅಕಾಲಿಕ ಮರಣಕ್ಕೆ ಈಡಾದರು. ಶಗುಫ್ತಾ ಹಾಗೂ ಸಾಕು ತಾಯಿ ಒಂದು ಹೊತ್ತು ಊಟಕ್ಕೂ ಕಷ್ಟ ಪಡುವ ಪರಿಸ್ಥಿತಿ ಎದುರಾಯ್ತು.

ಬಡತನವನ್ನು ಎದುರಿಸಲು ಶಗುಫ್ತಾ 11ನೇ ವಯಸ್ಸಿಗೆ ಬಾರ್‌ ಡ್ಯಾನ್ಸರ್ ಆಗಿ ಕುಣಿಯಲು ಪ್ರಾರಂಭಿಸಿದರು. 

ಮದುವೆಯಾದರೂ ಹಿಂಸೆ:

ಹೀಗೆ ಬಾರ್‌ ಡ್ಯಾನ್ಸರ್‌ ಆಗಿ ಜೀವನ ನಡೆಸುತ್ತಿದ್ದ ಶಗುಫ್ತಾ 17ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಧಾರಣ ಸಿರಿವಂತನಾಗಿದ್ದ ವ್ಯಕ್ತಿ ದಿನೇ ದಿನೆ ಶಗುಫ್ತಾಳನ್ನು ಹಿಂಸಿಸಲು ಆರಂಭಿಸಿದ ಕಾರಣ ಶಿಗುಫ್ತಾ ಆತನನ್ನು ತೊರೆದರು.

ಮದುವೆಯಿಂದ ವೇಶ್ಯಾವಟಿಕೆ ಶುರು:

ಗಂಡನನ್ನು ಬಿಟ್ಟ ಹೆಣ್ಣು  ಎಂದು ಪಟ್ಟ ಪಡೆದುಕೊಂಡ ಶಗುಫ್ತಾಗೆ  ಜೀವನ ನಡೆಸುವುದಕ್ಕೆ ದಾರಿ ಹುಡುಕುವಾಗ ಸಿಕ್ಕಿದ್ದೆ  ವೇಶ್ಯಾವಾಟಿಕೆಯ ಹಾದಿ. ಮುಂಬೈನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡು ಸ್ವಲ್ಪ ಹಣ ಮಾಡುತ್ತಾ ಮತ್ತೆ ಬಾರ್‌ ಡ್ಯಾನ್ಸರ್‌ ಆಗಿ ಕೆಲಸ ಆರಂಭಿಸಿದರು . 

ಅನುಶ್ರೀ ಎಂಬ ಅಪ್ಪಟ ಅಪ್ಪು ಅಭಿಮಾನಿ; ಕನ್ನಡ ನಿರೂಪಣಾ ಲೋಕದ ಕಣ್ಮಣಿ

25ನೇ ವಯಸ್ಸಿಗೆ ಯಾರೋ ಒಬ್ಬರ  ಸಹಾಯ ಪಡೆದು ದುಬೈಗೆ ತೆರಳಿ ಅಲ್ಲಿಯೂ ವೇಶ್ಯಾವಾಟಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ದುಬೈನಲ್ಲಿ ತನಗಿಂತಲೂ  20 ವರ್ಷದ ಹಿರಿಯ ವ್ಯಕ್ತಿ ಜೊತೆ ಶಗುಫ್ತಾ ಮದುವೆಯಾಗಲು ನಿರ್ಧರಿಸಿದ್ದರು. ಹೀಗಾದರೂ  ಜೀವನದಲ್ಲಿ ನೆಲೆ ಸಿಗುತ್ತದೆ ಎಂದು ಶಗುಫ್ತಾ ಮದುವೆಗೆ ಒಪ್ಪಿಕೊಂಡರು ಆದರೆ ದುರಾದೃಷ್ಟ ಆ ವ್ಯಕ್ತಿ  ಮರಣಕ್ಕೀಡಾದರು. ಕಾರಣವೇನೆಂದು ಈಗಲೂ  ತಿಳಿದುಬಂದಿಲ್ಲ.

19 ವರ್ಷಕ್ಕೆ ಶುರುವಾತ್ತು ಚಿತ್ರಕಥೆ:

ಜೀವನದಲ್ಲಿ ಎಲ್ಲರೂ ನಂಬಿಸಿ ಕೈ ಕೊಟ್ಟವರೆ ಎಂದು ಶಗುಫ್ತಾ ಮತ್ತೆ ಬಾರ್‌ ಡ್ಯಾನ್ಸರ್‌ ಆಗಲು ಮುಂಬೈಗೆ ಮರಳುತ್ತಾರೆ. ಈ ನಡುವೆ ಎದುರಿಸಿದ ಜೀವನವನ್ನು ಕಥೆ ರೂಪದಲ್ಲಿ ಬರೆಯಲು ಫ್ರಾ ಪ್ರಾರಂಭಿಸುತ್ತಾರೆ. ಈ ನಡುವೆ ಕಥೆ ಹಿಡಿದು ಮುಂಬೈಗೆ ತೆರಳಿದಾಗಿ ಶಗುಫ್ತಾ ವಿನೇಶ್‌ ಸ್ಟುಡಿಯೋಸ್‌ ಗೆ ಹೋಗುತ್ತಾರೆ. ಅಲ್ಲಿ ಮಹೇಶ್‌ ಭಟ್‌ ಆಕೆಯ ಪ್ರತಿಭೆ ಗುರುತಿಸಿ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ. 

ಅಲ್ಲಿಂದ ಶುರುವಾಯ್ತು  ಶಗುಫ್ತಾ ಸಿನಿ ಜರ್ನಿ. ಇದುವರೆಗೂ 19  ಬಾಲಿವುಡ್‌ ಸಿನುಮಾಗಳಿಗೆ ಚಿತ್ರಕಥೆ ಬರೆದಿದ್ದಾರೆ ಹಾಗೂ ಒಂದು ತೆಲುಗು ಸಿನಿಮಾಕ್ಕೂ ಕಥೆ ಬರೆದಿದ್ದಾರೆ. ತನ್ನ ಸಿನಿಮಾಗಳು ಹಿಟ್‌ ಆಗುತ್ತಿದಂತೆ ಶಿಗುಫ್ತಾ ನಿರ್ದೇಶನ ಶುರು ಮಾಡಿಕೊಂಡು ಮೂರು ಸಿನಿಮಾಗಳನ್ನು  ನಿರ್ದೇಶನ ಸಹ ಮಾಡಿದ್ದಾರೆ.

ಒಟ್ಟಾರೆ ಬಾಲಿವುಡ್‌ನಲ್ಲಿ ಶಗುಫ್ತಾ ಬರೆಯುವ ಚಿತ್ರಕಥೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದೆ. ಕೋಟಿಗೆ ಮಾರಾಟವಾಗುವ ಇವರ ಕಥೆಗಳನ್ನು ಪಡೆಯಲು ನಿರ್ದೇಶಕರು ಹಾಗೂ ನಟರು ಕಾಯುತ್ತಿದ್ದಾರೆ.