ಮುಂಬೈ ( ಜೂ. 17)   ಬಾಲಿವುಡ್ ಅಗಲಿದ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಸ್ಮರಣೆಯಲ್ಲಿ ಸಂಕಷ್ಟದಲ್ಲಿರುವ 3400  ಕುಟುಂಬಗಳಿಗೆ  ಬಾಲಿವುಡ್ ನಿರ್ದೇಶಕ ಅಭಿಷೇಕ್ ಕಪೂರ್ ಮತ್ತು ಅವರ ಪತ್ನಿ ಪ್ರಗ್ಯಾ ಕಪೂರ್ ಆಹಾರ ನೀಡಿದ್ದಾರೆ.

ಅಭಿಷೇಕ್ ಕಪೂರ್ ನಿರ್ದೇಶನದ ಕಿಪೋಚಿ(2013)  ಮೂಲಕ ಸುಶಾಂತ್ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು.  2018 ರಲ್ಲಿ ಕೇದರ್ ನಾಥ್ ಸಿನಿಮಾದ ಮೂಲಕ ಮತ್ತೆ ಜತೆಯಾಗಿದ್ದರು.

ಸುಶಾಂತ್ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತ ಗೆಳತಿ

ಜೂನ್ 15  ರಂದು ನೆರವೇರಿದ ಸುಶಾಂತ್ ಸಿಂಗ್ ಅಂತಿಮ ವಿಧಿ ವಿಧಾನದಲ್ಲಿಯೂ ದಂಪತಿ ಭಾಗವಹಿಸಿದ್ದರು.  ಪ್ರಗ್ಯಾ ಕಪೂರ್ ಚಾರಿಟಿ ಟ್ರಸ್ಟ್ ಎನ್ ಜಿಒ  ದಿ ಅರ್ಥ್ ಫೌಂಡಡೇಶನ್ ಮೂಲಕ  ನೆರವು ನೀಡಲಾಗಿದೆ.

ಧೋನಿ ಅನ್ ಟೋಲ್ಡ್ ಸ್ಟೋರಿ ಮೂಲಕ ಮನೆಮಾತಾಗಿದ್ದ ಸುಶಾಂತ್ ಸಿಂಗ್ ಮುಂಬೈನ ತಮ್ಮ ನಿವಾಸದಲ್ಲಿ ಭಾನುವಾರ ನೇಣಿಗೆ ಶರಣಾಗಿದ್ದರು.  ಇಡೀ ದೇಶದ ಚಿತ್ರರಂಗ ಕಂಬನಿ ಮಿಡಿದಿತ್ತು.