ನಿನ್ನ ಜೊತೆ ಮಲಗಬೇಕು ಎಂದು ಆ ಹುಡುಗಿ ನೇರವಾಗೇ ಕೇಳಿದ್ಲು, ಆಮೇಲೆ... ಆಮೀರ್ ಮಾತಿಗೆ ಪತ್ನಿ ಶಾಕ್!
ಒಬ್ಬ ಹುಡುಗಿ ಆಮೀರ್ ಖಾನ್ ಬಳಿ ಬಂದು ನಿಮ್ಮ ಜೊತೆ ನಾನು ಮಲಗಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಳಂತೆ! ಈ ವಿಷಯವನ್ನು ಪತ್ನಿ ಕಿರಣ್ ರಾವ್ ಎದುರೇ ನಟ ಹೇಳಿದಾಗ ರಿಯಾಕ್ಷನ್ ಹೇಗಿತ್ತು ನೋಡಿ...
ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರು ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಕೆಲವು ಬಾಲಿವುಡ್ ನಟರಂತೆ ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇವರ ಇಬ್ಬರು ಪತ್ನಿಯರೂ ಹಿಂದೂಗಳೇ ಎನ್ನುವುದು ವಿಶೇಷ, ಈಗ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್ 2005ರಲ್ಲಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ಕಳೆದ ಡಿಸೆಂಬರ್ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್ ಅವರ ಮದುವೆ ಸಮಾರಂಭಕ್ಕೆ ಕಿರಣ್ ಅವರು ಕೂಡ ಹಾಜರಿದ್ದುದು ಇದಕ್ಕೆ ಸಾಕ್ಷಿ.
ಇದೀಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದು ಆಮೀರ್ ಇನ್ನೂ ಕಿರಣ್ ಅವರಿಗೆ ಡಿವೋರ್ಸ್ ಕೊಟ್ಟಿರದ ಸಮಯ. ಆಗ ವಿವಾದಿತ ಟಾಕ್ ಷೋ, ಕಾಫಿ ವಿತ್ ಕರಣ್ ಜೋಹರ್ನಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಕರಣ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಆಮೀರ್ ಅವರು ಒಬ್ಬ ಹುಡುಗಿ ನೇರವಾಗಿ ತಮ್ಮ ಬಳಿಗೆ ಬಂದು ನನ್ನ ಜೊತೆ ಮಗಲುತ್ತಿಯಾ ಎಂದು ಕೇಳಿದ್ಲಂತೆ. ಇದನ್ನು ಕೇಳಿ ಕಿರಣ್ ರಾವ್ಗೆ ಶಾಕ್ ಆಯ್ತು. ಇದನ್ನು ನೀವು ನನಗೆ ಹೇಳೇ ಇರಲಿಲ್ಲಾ ಎಂದರು. ನಿನಗೆ ಹೇಳಿದ್ದೆ, ನೆನಪಿಲ್ಲ ಎಂದು ಆಮೀರ್ ಉತ್ತರ ಕೊಟ್ಟರು. ಬಳಿಕ, ಕರಣ್ ಅವರು ಆಗ ನೀವು ಏನು ಹೇಳಿದ್ರಿ ಎಂದು ಪ್ರಶ್ನಿಸಿದ್ದರು. ನಾನು ಆಗ ಬೇಡ ಎಂದೇ ಹೇಳಿದೆ. ಆದರೆ ವಿಷಯ ಅದಲ್ಲ, ಆ ಹುಡುಗಿಯ ಧೈರ್ಯಕ್ಕೆ ನಾನು ಈಗಲೂ ಮೆಚ್ಚುತ್ತೇನೆ. ನೇರವಾಗಿ ಬಂದು ಇಂಥ ಬೋಲ್ಡ್ ಪ್ರಶ್ನೆ ಕೇಳುವುದು ಎಂದರೆ ಸುಲಭವಲ್ಲ ಎಂದರು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಿಜ ಹೇಳಿ, ಆ ಹುಡುಗಿ ಹೇಳಿದಂತೆ ನೀವು ಕೇಳಲಿಲ್ವಾ ಎಂದು ನಟನ ಕಾಲೆಳೆಯುತ್ತಿದ್ದಾರೆ ಅಭಿಮಾನಿಗಳು. ಈ ಷೋ ಮುಗಿದು ಮನೆಗೆ ಹೋದ್ಮೇಲೆ ಆಮೀರ್ ಖಾನ್ ಗತಿ ಏನಾಯ್ತೋ ಎಂದು ಗೊತ್ತಾಗಲಿಲ್ಲ ಎಂದ್ರೆ, ಮತ್ತೆ ಕೆಲವರು ಬಹುಶಃ ಈ ಷೋ ಬಳಿಕವೇ ಕಿರಣ್ ಆಮೀರ್ಗೆ ಡಿವೋರ್ಸ್ ಕೊಡಲು ಮುಂದಾಗಿರಬೇಕು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಆಮೀರ್ ಖಾನ್ ಮಾತಿಗೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.
ಹೆಣ್ಣೆಂದು ತಿಳಿದು ಆ ರಾಜಕಾರಣಿ ಸಂಬಂಧ ಬೆಳೆಸಿದ್ರು, ಆಮೇಲೆ... ಕಾಂಗ್ರೆಸ್ ಮುಖಂಡೆ ಚರಿತಾ ನೋವಿನ ನುಡಿ...
ಇನ್ನು ಈ ಜೋಡಿ ಕುರಿತು ಹೇಳುವುದಾದರೆ, Laapataa ಎಂಬ ಚಿತ್ರದಲ್ಲಿ ಆಮೀರ್ ಖಾನ್ ಮತ್ತು ಕಿರಣ್ ಅವರು ಒಟ್ಟಿಗೇ ಕೆಲಸ ಮಾಡಿದ್ದಾರೆ. ಕಳೆದ ಮಾರ್ಚ್ನಲ್ಲಿ ಚಿತ್ರ ಬಿಡುಗಡೆಯಾಗಿ ಹಲವು ದಾಖಲೆಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಚಿತ್ರವು ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಕೂಡ ಪ್ರದರ್ಶನಗೊಂಡಿದೆ. 15 ವರ್ಷಗಳ ದಾಂಪತ್ಯದ ಬಳಿಕ ಆಮೀರ್ ಮತ್ತು ಕಿರಣ್ ಬೇರೆ ಬೇರೆಯಾದವರು. ಡಿವೋರ್ಸ್ ಬಳಿಕ ಮತ್ತೆ ಪತಿ-ಪತ್ನಿ ಒಂದೇ ಕಡೆ ಕೆಲಸ ಮಾಡುತ್ತಿರುವುದನ್ನು ಕಂಡ ಹಲವರು ಹುಬ್ಬೇರಿಸಿದ್ದೂ ಆಗಿದೆ. ಆದ್ದರಿಂದ ವಿಚ್ಛೇದನದ ಬಳಿಕ ಒಟ್ಟಿಗೆ ಅದ್ಹೇಗೆ ಕೆಲಸ ಮಾಡುತ್ತೀರಿ ಎಂಬ ಪ್ರಶ್ನೆ ಆಮೀರ್ ಖಾನ್ ಅವರಿಗೆ ಎದುರಾಗುತ್ತಿದ್ದಂತೆಯೇ, ಆಮೀರ್ ಸ್ವಲ್ಪ ಗರಂ ಆದರು. ಪಾಪರಾಜಿಗಳು ಈ ಪ್ರಶ್ನೆ ಕೇಳಿದಾಗ ಸ್ವಲ್ಪ ಸಿಟ್ಟುಕೊಂಡರೂ ಸುಧಾರಿಸಿಕೊಂಡ ಆಮೀರ್ ಖಾನ್, ಯಾಕೆ ಪತಿ-ಪತ್ನಿ ದೂರದೂರವಾದ ಮೇಲೆ ಒಟ್ಟಿಗೇ ಕೆಲಸ ಮಾಡಬಾರದು ಎಂದು ಯಾವುದಾದ್ರೂ ಡಾಕ್ಟರ್ ಹೇಳಿದ್ದಾರಾ ಎಂದು ಪ್ರಶ್ನಿಸಿದ್ದರು.
ಆಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತ ಅವರಿಗೆ ಡಿವೋರ್ಸ್ ಕೊಡಲು ಕಿರಣ್ ರಾವ್ ಅವರೇ ಕಾರಣ ಎನ್ನುವ ಸುದ್ದಿ ಆಗಲೂ ಹರಡಿತ್ತು, ಈಗಲೇ ಇದರ ಸುದ್ದಿಯಾಗುತ್ತಲೇ ಇದೆ. ಲಗಾನ್ ಬಿಡುಗಡೆಯಾದ ಒಂದು ವರ್ಷದ ನಂತರ 2002 ರಲ್ಲಿ ಆಮೀರ್ ಮತ್ತು ರೀನಾ ತಮ್ಮ ಮದುವೆಯನ್ನು ಕೊನೆಗೊಳಿಸಿದರು. ಕುತೂಹಲಕಾರಿಯಾಗಿ, ಕಿರಣ್ ಲಗಾನ್ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು, ಇದು ಅವರ ಪತ್ನಿ ರೀನಾ ದತ್ತಾದಿಂದ ನಟನ ವಿಚ್ಛೇದನಕ್ಕೆ ಅಮೀರ್ನೊಂದಿಗಿನ ಪ್ರಣಯ ಸಂಬಂಧದ ಕಾರಣ ಎಂದು ಅನೇಕರು ನಂಬಲು ಕಾರಣವಾಯಿತು. ಇದಕ್ಕೆ ಈಗ ಕಿರಣ್ ರಾವ್ ಸ್ಪಷ್ಟನೆ ನೀಡಿದ್ದರು. ಆಮೀರ್ ಖಾನ್ ಅವರು ರೀನಾ ದತ್ತ ಅವರಿಗೆ ಡಿವೋರ್ಸ್ ಕೊಟ್ಟ ಬಳಿಕವಷ್ಟೇ ನಾವಿಬ್ಬರೂ ಡೇಟಿಂಗ್ ಪ್ರಾರಂಭಿಸಿದ್ದು ಎಂದು ಸ್ಪಷ್ಟಪಡಿಸಿದ್ದರು.
ಮಗಳನ್ನೇ ಮದ್ವೆಯಾದ ಅಪ್ಪ! ಕುಂಕುಮ-ಸಿಂಧೂರ ಇಟ್ಟದ್ಯಾಕೆ ಎಂದು ಅವ್ರ ಬಾಯಲ್ಲೇ ಕೇಳಿ...