ಮುಂಬೈ(ಜ. 08)  ಕೊರೋನಾ ನಿಯಮ ಪಾಲಿಸದೆ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಅಮೀರ್ ಖಾನ್ ಟೀಕೆಗೆ ಗುರಿಯಾಗಿದ್ದಾರೆ.  ಪ್ರಧಾನಿ ಮೋದಿ ಆದಿಯಾಗಿ ಪ್ರತಿಯೊಬ್ಬರು ಕೊರೋನಾ ನಿಯಮ ಪಾಲಿಸಿ ಎಂದು ಮೇಲಿಂದ ಮೇಲೆ ಕರೆ ಕೊಡುತ್ತಲೇ ಇರುತ್ತಾರೆ. 

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಜನ ಕಮೆಂಟ್  ಮಾಡಿದ್ದಾರೆ.  ಬಿಗ್ ಬಾಸ್ ಸ್ಪರ್ಧಿ ಕಿಶ್ವರ್ ಮರ್ಚೆಂಟ್ ಮಾಸ್ಕ್ ಧರಿಸದ್ದರ ಬಗ್ಗೆ ಕಮೆಂಟ್ ಮಾಡಿದ್ದು ಹಲವರು ಅವರ ನೆರವಿಗೆ ಬಂದಿದ್ದಾರೆ

ಕೊರೋನಾ ಲಸಿಕೆ ಬೇಕಾ? ಹಾಗಾದರೆ ಏನು ಮಾಡಬೇಕು

ಕೆಲ ಚೆಂಡುಗಳನ್ನು ಆಡಿದ ಅಮೀರ್ ಖಾನ್ ನಂತರದಲ್ಲಿ ತಮ್ಮ ವಸ್ತುಗಳು ಸೇರಿದಂತೆ ಮಾಸ್ಕ್ ನ್ನು ತೆಗೆದುಕೊಳ್ಳುತ್ತಾರೆ. 

ಅಮೀರ್ ಖಾನ್ ಗೆ ಸ್ವಚ್ಛತೆ ಗೊತ್ತಿಲ್ಲ.  ನಟ ಬೇಜವಾಬಗ್ದಾರಿಯಿಂದ ನಡೆದುಕೊಂಡಿದ್ದಾರೆ.  ಜನರಿಗೆ ರೋಲ್ ಮಾಡಲ್ ಆಗಬೇಕಕಾದವರು ಹೀಗೆ ನಡೆದುಕೊಳ್ಳಬಾರದಿತ್ತು ಎಂದು ಸಲಹೆ ಕೊಟ್ಟಿದ್ದಾರೆ.   ಕ್ರಿಕೆಟ್ ಆಡಬೇಕಿದ್ದರೆ ಉಸಿರಾಟ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಅಮೀರ್ ಖಾನ್ ಮಾಸ್ಕ್ ಧರಿಸಿಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.