ಸನಮ್ ತೇರಿ ಕಸಮ್ ಇಷ್ಟಪಟ್ಟವರಿಗೆ, ಇಲ್ಲಿವೆ 5 ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾಗಳು. ಈ ಸಿನಿಮಾಗಳನ್ನು ನೋಡಿದಾಗ ಪ್ರೀತಿಯ ಭಾವನೆಗಳು ಅರಳುತ್ತವೆ,

ಬೆಂಗಳೂರು: ಇತ್ತೀಚೆಗೆ ಸಿನಿಮಾಗಳ ಮರು ಬಿಡುಗಡೆ ಟ್ರೆಂಡ್ ಶುರುವಾಗಿದೆ. ಸನಮ್ ತೇರಿ ಕಸಮ್ ರಿ-ರಿಲೀಸ್ ಆಗಿ ಮೊದಲಿನಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದಾಖಲೆಯನ್ನು ಬರೆದಿತ್ತು. ಸನಮ್ ತೇರಿ ಕಸಮ್ ನೋಡಿದ ಜನರು ಪ್ರೀತಿಯ ಕಥೆಗೆ ಫುಲ್ ಮಾರ್ಕ್ಸ್ ನೀಡಿದ್ದರು. ನೀವು ರೊಮ್ಯಾಂಟಿಕ್ ಸಿನಿಮಾಗಳ ಪ್ರಿಯರಾಗಿದ್ದರೆ ಈ ಐದು ಚಿತ್ರಗಳನ್ನು ನೀವು ನೋಡಲೇಬೇಕು. ಈ ಐದು ಸಿನಿಮಾಗಳು ಓಟಿಟಿಯಲ್ಲಿ ಲಭ್ಯವಿದ್ದು, ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದು. 

1.ಚಾರ್ಲಿ (Charlie)
2015ರಲ್ಲಿ ಬಿಡುಗಡೆಯಾದ ಚಾರ್ಲಿ ಸಿನಿಮಾ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿತ್ತು. ಮಾರ್ಟಿನ್ ಪ್ರಾಕ್ಕತ್ ನಿರ್ದೇಶನದ ಚಾರ್ಲಿ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಮತ್ತು ಪಾರ್ವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಚಾರ್ಲಿಗೆ ಪ್ರವಾಸ ಮಾಡೋದು ಅಂದರೆ ಇಷ್ಟ. ಜೀವನದ ಪ್ರತಿ ಕ್ಷಣವನ್ನು ಆನಂದಿಸಬೇಕು ಅನ್ನೋದು ಚಾರ್ಲಿಯ ಥೇರಿ. ಜೀವನವನ್ನು ಹಬ್ಬದ ರೀತಿಯಲ್ಲಿ ನೋಡಬೇಕು ಎಂದು ತನ್ನ ಸುತ್ತಲಿನ ಜನರಿಗೆ ಹೇಳುತ್ತಿರುತ್ತಾನೆ. ಇಂತಹ ಚಾರ್ಲಿಗೆ ಟೇಸಾ ಮೇಲೆ ಲವ್ ಆಗುತ್ತದೆ. ಮುಂದೆ ಇಬ್ಬರ ಪ್ರೇಮಕಥೆ ಹೇಗೆ ಬದಲಾಗುತ್ತೆ ಎಂಬುವುದು ಸಿನಿಮಾದ ಸ್ಟೋರಿ. ಐಎಂಡಿಬಿನಲ್ಲಿ 8.1 ರೇಟಿಂಗ್ ಪಡೆದಿರುವ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.

2.ಅಮರನ್ (Amarann)
ರಾಜಕುಮಾರ್ ಪೆರಿಯಾಸಾಮಿ ನಿರ್ದೇಶನದ ತಮಿಳು ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಾಗಿ ಕಾಣಿಸಿಕೊಂಡಿದ್ದಾರೆ. ನೈಜ ಕಥೆಯಾಧರಿತ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. 

YouTube video player

3.ಪಾಸ್ಟ್ ಲೈವ್ಸ್ (Past Lives)
2023ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಡ್ರಾಮಾ 'ಪಾಸ್ಟ್ ಲೈವ್ಸ್' ನಿಮಗೆ ಖಂಡಿತ ಇಷ್ಟವಾಗುತ್ತದೆ. ಗ್ರೇಟಾ ಲಿ, ಟಿಓ ಯು ಮತ್ತು ಜಾನ್ ಮೈಗಾರೋ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. 

YouTube video player

4. 96/99
ತಮಿಳಿನ 96 ಸಿನಿಮಾದಲ್ಲಿ ವಿಜಯ್ ಸೇತುಪತಿ, ತ್ರಿಶಾ ಕೃಷ್ಣನ್ ನಟಿಸಿದ್ದಾರೆ. ಹೈಸ್ಕೂಲ್ ಲವ್ ಸ್ಟೋರಿಯನ್ನು ಹೊಂದಿರುವ ಈ ಸಿನಿಮಾ ನಿಮ್ಮಲ್ಲಿನ ಪ್ರೇಮದ ಭಾವನೆಗಳನ್ನು ಅರಳಿಸುತ್ತದೆ. ಈ ಚಿತ್ರವನ್ನು ಸೋನಿ ಲಿವ್‌ನಲ್ಲಿ ವೀಕ್ಷಿಸಬಹುದು. ಇದೇ ಸಿನಿಮಾ ಕನ್ನಡದಲ್ಲಿ '99' ಆಗಿ ರಿಮೇಕ್ ಆಗಿದ್ದು, ಗಣೇಶ್ ಮತ್ತು ಭಾವನಾ ಮೆನನ್ ನಟಿಸಿದ್ದಾರೆ. ಈ ಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. 

ಇದನ್ನೂ ಓದಿ: ಹಾರರ್ ಮೂವಿ ಲವರ್ಸ್‌ಗೆ ಇದು ಬೆಸ್ಟ್ ಸಿನಿಮಾ; ಇದನ್ನ ನೋಡೋಕೆ ಸ್ವಲ್ಪ ಧೈರ್ಯವೂ ಬೇಕು!

YouTube video player

5. ಗೀತಾ ಗೋವಿಂದಂ
2018ರಲ್ಲಿ ಬಿಡುಗಡೆಯಾದ ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಐಎಂಡಿಬಿಯಲ್ಲಿ 7.7 ರೇಟಿಂಗ್ ಪಡೆದಿರುವ ಸಿನಿಮಾವನ್ನು ಜಿಯೋ ಹಾಟ್‌ಸ್ಟಾರ್‌ ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. 

ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‌ನಲ್ಲಿಯೇ ಹೆಂಡ್ತಿಯ ಬ್ಯಾಕ್ ನೋಡಿ ವಾವ್ ಎಂದ ಕೃಷ್ಣ ಅಭಿಷೇಕ್; ನಿಮಗೆ ನಾಚಿಕೆ ಆಗಲ್ವಾ? ನೆಟ್ಟಿಗರ ಕ್ಲಾಸ್

YouTube video player