Asianet Suvarna News Asianet Suvarna News

ಆಸ್ಕರ್‌ ಪುರಸ್ಕೃತ ನಿರ್ಮಾಪಕಿಗೆ 2 ಕೋಟಿ ರು. ಮೊತ್ತದ ನೋಟಿಸ್‌ ನೀಡಿದ ಬೆಳ್ಳಿ

ಆಸ್ಕರ್‌ ಪ್ರಶಸ್ತಿ ಪುರಸ್ಕೃತ ‘ದಿ ಎಲಿಫೆಂಟ್‌ ವಿಸ್ಪರರ್ಸ್‌’ ಸಾಕ್ಷ್ಯಚಿತ್ರಕ್ಕೆ ಮೂಲಕಥೆಯಾಗಿದ್ದ ತಮಿಳುನಾಡಿನ ಮುದುಮಲೈ ಅರಣ್ಯದ ಕಾವಾಡಿಗಳಾದ ಬೊಮ್ಮನ್‌ ಮತ್ತು ಬೆಲ್ಲಿ, ಇದೀಗ ಚಿತ್ರದ ನಿರ್ಮಾಪಕರಿಂದ 2 ಕೋಟಿ ರು.ನೆರವು ಕೋರಿ ನೋಟಿಸ್‌ ಜಾರಿ ಮಾಡಿದ್ದಾರೆ.

2 crores to the Oscar winning producer given notice of amount akb
Author
First Published Aug 7, 2023, 10:04 AM IST | Last Updated Aug 7, 2023, 10:05 AM IST

ಬೆಂಗಳೂರು: ಆಸ್ಕರ್‌ ಪ್ರಶಸ್ತಿ ಪುರಸ್ಕೃತ ‘ದಿ ಎಲಿಫೆಂಟ್‌ ವಿಸ್ಪರರ್ಸ್‌’ ಸಾಕ್ಷ್ಯಚಿತ್ರಕ್ಕೆ ಮೂಲಕಥೆಯಾಗಿದ್ದ ತಮಿಳುನಾಡಿನ ಮುದುಮಲೈ ಅರಣ್ಯದ ಕಾವಾಡಿಗಳಾದ ಬೊಮ್ಮನ್‌ ಮತ್ತು ಬೆಳ್ಳಿ, ಇದೀಗ ಚಿತ್ರದ ನಿರ್ಮಾಪಕರಿಂದ 2 ಕೋಟಿ ರು.ನೆರವು ಕೋರಿ ನೋಟಿಸ್‌ ಜಾರಿ ಮಾಡಿದ್ದಾರೆ.  ಚಿತ್ರ ನಿರ್ಮಾಣಕ್ಕೂ ಮುನ್ನ ತಮಗೆ ಮನೆ ಕಟ್ಟಿಸಿಕೊಡುವುದಾಗಿ, ವಾಹನ ಖರೀದಿಸಿ ಕೊಡುವುದಾಗಿ ಮತ್ತು ಹಣ ನೀಡುವುದಾಗಿ ಹಲವು ಭರವಸೆ ನೀಡಲಾಗಿತ್ತು.

ಆದರೆ ಚಿತ್ರ ಹೆಚ್ಚು ಲಾಭ ಗಳಿಸಿದ್ದರೂ ಇಲ್ಲಿಯವರೆಗೆ ಯಾವುದೇ ಭರವಸೆ ಈಡೇರಿಸಿಲ್ಲ. ಕರೆ ಮಾಡಿದರೂ ನಿರ್ಮಾಪಕರು ಕರೆ ಸ್ವೀಕರಿಸುತ್ತಿಲ್ಲ ಎಂದು ನಿರ್ಮಾಪಕಿ ಕಾರ್ತಿಕಿ ಗೊನ್ಸಾಲ್ವೆನ್ಸ್‌ ಅವರಿಗೆ ಕಾನೂನು ನೋಟಿಸ್‌ ಜಾರಿ (Notice) ಮಾಡಲಾಗಿದೆ. ಚಿತ್ರದಲ್ಲಿ ದಂಪತಿಗಳನ್ನು ದೇಶದಲ್ಲಿ ನಿಜವಾದ ಹೀರೋಗಳು ಎಂದು ಪರಿಚಯಿಸಿ ವ್ಯಾಪಕ ಪ್ರಚಾರ ಪಡೆದುಕೊಳ್ಳಲಾಗಿದೆ. ತೆಲಂಗಾಣ ಮುಖ್ಯಮಂತ್ರಿ (Telangana CM) ದೇಶದ ಪ್ರಧಾನಿಗಳಿಂದ ನಿರ್ಮಾಪಕರು ಆರ್ಥಿಕ ಪ್ರಯೋಜನ ಪಡೆದಿದ್ದಾರೆ. ಆದರೆ ನಮಗೆ ನೀಡಿದ ಭರವಸೆ ಮಾತ್ರ ಈಡೇರಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ದಿ ಎಲಿಫ್ಯಾಂಟ್‌ ವಿಸ್ಪರ್ಸ್‌ನ ಬೆಳ್ಳಿಗೆ ಸರ್ಕಾರಿ ಕೆಲಸ: ಬೆಳ್ಳಿ ಈಗ ತಮಿಳುನಾಡಿನ ಮೊದಲ ಮಹಿಳಾ ಕಾವಡಿ

ಕಾಡಿನಲ್ಲಿ ಅನಾಥವಾಗಿದ್ದ ಆನೆಮರಿಯೊಂದನ್ನು ಸಾಕುವ ಬೆಳ್ಳಿ ಅವರ ನಿಜ ಜೀವನದ ಕಥೆಯನ್ನೇ ಆಧರಿಸಿ ಸಾಕ್ಷ್ಯಚಿತ್ರ (Documentry)ನಿರ್ಮಿಸಲಾಗಿತ್ತು.
 

Latest Videos
Follow Us:
Download App:
  • android
  • ios