ಚಿತ್ರದುರ್ಗ (ಅ.25): ಚಿತ್ರದುರ್ಗದಲ್ಲಿ ಸುರಿದ ಭಾರೀ ಮಳೆ ಶಾಸಕರ ಮನೆಯೇ ಕುಸಿದು ಬಿದ್ದಿದೆ. 

ಸರ್ಕಾರದಿಂದ ಮಂಜೂರು ಮಾಡಲಾಗಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಗೂಳಿಹಟ್ಟಿ ಗ್ರಾಮದಲ್ಲಿರುವ ಜನತಾ ಮನೆ ಕುಸಿದು ಬಿದ್ದಿದೆ. 

ಗೂಳಿಹಟ್ಟಿ ಶೇಖರ್ ಅವರು ಶಾಸಕರಾಗುವ ಮುನ್ನ ಮಂಜೂರಾಗಿದ್ದ ಈ ಮನೆಯಲ್ಲಿ ಅವರ ತಾಯಿ ಪುಟ್ಟಮ್ಮ ವಾಸವಾಗಿದ್ದು, ಮನೆಯಲ್ಲಿಯೇ ಇದ್ದ ಅವರ ತಾಯಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. 

ಪುತ್ರ ಶಾಸಕರಾಗಿದ್ದರೂ ಕೂಡ ಸಾಮಾನ್ಯರಂತೆ ಜನತಾ ಮನೆಯಲ್ಲಿ ವಾಸವಾಗಿದ್ದ ತಾಯಿ ಪುಟ್ಟಮ್ಮ ಇದೀಗ ಮನೆ ಕುಸಿದ ಕಾರಣ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗ ಮನೆ ಕುಸಿದಿದ್ದು, ಮನೆ ಕುಸಿದ ಪ್ರದೇಶಗಳಲ್ಲಿ ಅವಶೇಷಗಳನ್ನು ತೆರವುಗೊಳಿಸಲಾಗಿದೆ. 

ಮಳೆಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸೋಲು ಕಂಡಿದ್ದ ಗೂಳಿಹಟ್ಟಿ ಶೇಖರ್ ಕಳೆದ 2018ರ ಚುನಾವಣೆ ವೇಳೆ ಹೊಸದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಕಂಡಿದ್ದರು. ಕಳೆದ 15 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಒಂದೂ ಬಾರಿಯೂ ಬಿಜೆಪಿ ಗೆಲುವು ಸಾಧಿಸಿರಲಿಲ್ಲ. ಆದರೆ ಗೂಳಿಹಟ್ಟಿ ಶೇಖರ್ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಹೊಸ ದಾಖಲೆ ಬರೆದಿದ್ದರು.