ಚಿಕ್ಕಮಗಳೂರು : ಪ್ರೀ ವೆಡ್ಡಿಂಗ್ ಫೋಟೊ ಶೂಟ್‌ಗೆ ಬಂದು ತುಂಬಿದ ನದಿ ಮಧ್ಯೆ ಸಿಲುಕಿದರು
ಪ್ರೀ ವೆಡ್ಡಿಂಗ್ ಫೋಟೊ ಶೂಟ್ ಗೆ ಬಂದ ವೇಳೆ ಚಿಕ್ಕಮಗಳೂರಿನ ತುಂಬಿದ ಭದ್ರಾ ನದಿ ಮಧ್ಯದಲ್ಲಿ ಸಿಲುಕಿದ್ದ ಘಟನೆ ನಡೆದಿದೆ. ಈ ಬಾರಿ ಮಳೆಯಿಂದ ನದಿಗಳಲ್ಲಿ ಹೆಚ್ಚಿನ ನೀರಿನ ಹರಿವು ಇದ್ದು ಅಪಾಯಕರ ಸನ್ನಿವೇಶಗಳು ಎದುರಾಗುತ್ತಿದೆ.
ಚಿಕ್ಕಮಗಳೂರು [ನ.06]: ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಳ್ಳಲು ಬಂದವರು ತುಂಬಿ ಹರಿಯುತ್ತಿದ್ದ ನದಿಯಲ್ಲಿ ಸಿಲುಕಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಪ್ರೀ ವೆಡ್ಡಿಂಗ್ ಫೋಟೊಶೂಟ್ ನಡೆಯುತ್ತಿದ್ದ ವೇಳೆ ಬಾಲಕನೋರ್ವ ಇಲ್ಲಿನ ಕಳಸ ಸಮೀಪದ ಭದ್ರಾ ನದಿಯಲ್ಲಿ ಸಿಲುಕಿಕೊಂಡಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಬಾಲಕ ನೀರಿನ ಮದ್ಯದಲ್ಲಿ ಸಿಲುಕಿದ್ದು, ಈ ವೇಳೆ ಆತನ ರಕ್ಷಣೆಗೆ ಹೋಗಿದ್ದ ಮತ್ತೋರ್ವ ವ್ಯಕ್ತಿಯೂ ಕೂಡ ನೀರಿನಲ್ಲಿ ಸಿಲುಕಿದ್ದು ಕಂಡು ಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಚಿಕ್ಕಮಗಳೂರಿನ ಭದ್ರಾ ನದಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರಿಂದ ಇವರ ರಕ್ಷಣಾ ಕಾರ್ಯ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲೆಯಲ್ಲಿ ಈ ಬಾರಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು ಇಲ್ಲಿನ ಎಲ್ಲಾ ನದಿಗಳೂ ಕೂಡ ಉಕ್ಕಿ ಹರಿಯುತ್ತಿವೆ. ಇನ್ನು ಇಲ್ಲಿನ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಕಳಸ ಸಮೀಪದ ಅಂಬುತೀರ್ಥದಲ್ಲಿ ಹೆಚ್ಚಿನ ನೀರಿನ ಹರಿವು ಇದ್ದು ಪ್ರವಾಸಿಗರು ಮುನ್ನೆಚ್ಚರಿಕೆ ಕೈಗೊಳ್ಳುವುದು ಅತ್ಯಗತ್ಯವಾಗಿರುತ್ತದೆ.
ಭಾರತದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸೋಕೆ ಈ ಸ್ಥಳಗಳು ಬೆಸ್ಟ್!...
"