ಆಯುಧ ಪೂಜೆ ಮುಗಿಸಿ ಈಜಲು ಹೋಗಿದ್ದ ಮೂವರು ಬಾಲಕರು ಸಾವು
ಆಯುಧ ಪೂಜೆ ಮುಗಿಸಿ ಈಜಲು ಹೋಗಿದ್ದ ಮೂವರು ಬಾಲಕರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬ ಬಾಲಕನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.
ಚಿಕ್ಕಮಗಳೂರು(ಅ.08): ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಬಿಳಿಕಲ್ಲು ಗ್ರಾಮದ ಸಮೀಪ ಕೆರೆಯಲ್ಲಿ ಘಟನೆ ನಡೆದಿದ್ದು, ಆಯುಧಪೂಜೆ ಆಚರಣೆಯ ನಂತರ ಮೂವರು ಬಾಲಕರೂ ಬಿಳೆಕಲ್ಲು ಗ್ರಾಮದ ಕಂಚಿಕಟ್ಟೆ ಕೆರೆಗೆ ಈಜಲು ತೆರಳಿದ್ದರು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದ್ದು ಇನ್ನೊಬ್ಬ ಬಾಲಕನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.
38ರ ಮಹಿಳೆ ದಿಢೀರ್ ನಾಪತ್ತೆ; ಮಿಸ್ಸಿಂಗ್ ಕಹಾನಿ ಹಿಂದಿತ್ತು ಆಪತ್ತಿನ ಕತೆ!
ಮುರುಳಿ ಕಾರ್ತಿಕ್(14), ಜೀವಿತ್ (14), ಮೃತದೇಹ ಪತ್ತೆಯಾಗಿದ್ದು, ಸಿರಜ್ (14) ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಇವರು ಚಿಕ್ಕಮಗಳೂರು ನಗರದ ಹೌಸಿಂಗೌ ಬೋರ್ಡ್ ನ AIT ಕಾಲೇಜಿನ ಚಾಲಕರ ಮಕ್ಕಳೆಂದು ತಿಳಿದುಬಂದಿದೆ.
ಪ್ರಿಯತಮೆಯ ಪತಿಯನ್ನೇ ಗುಂಡಿಟ್ಟು ಕೊಂದ ಪ್ರಿಯಕರ
ಅಯುಧ ಪೂಜೆ ಹಬ್ಬ ಮುಗಿಸಿ ಬಾಲಕರು ಈಜಲು ಹೋಗಿದ್ದರು. ನಿನ್ನೆಯಿಂದ ಬಾಲಕರು ನಾಪತ್ತೆಯಾದ ಹಿನ್ನಲೆ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ: ಸಹಾಯ ಮಾಡಲು ಹೋದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ದರೋಡೆ