Asianet Suvarna News Asianet Suvarna News

ಸಮಾಜದ ಹಿತಾಸಕ್ತಿಗೆ ರಾಜೀನಾಮೆಗೂ ಸಿದ್ಧ ಎಂದ ಶಾಸಕ

ಅತ್ಯಂತ ಹಿಂದುಳಿದ ಬೋವಿ ಜನಾಂಗಕ್ಕಿರುವ ಮೀಸಲಾತಿಯನ್ನು ಕಸಿಯಲು ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಸಮಾಜದ ಹಿತಾಸಕ್ತಿಗಾಗಿ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ತಿಳಿಸಿದ್ದಾರೆ. 

ready to resign for development of society says mla chandrappa
Author
Bangalore, First Published Oct 26, 2019, 12:23 PM IST

ಚಿಕ್ಕಬಳ್ಳಾಪುರ(ಅ.26): ಅತ್ಯಂತ ಹಿಂದುಳಿದ ಬೋವಿ ಜನಾಂಗಕ್ಕಿರುವ ಮೀಸಲಾತಿಯನ್ನು ಕಸಿಯಲು ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಸಮಾಜದ ಹಿತಾಸಕ್ತಿಗಾಗಿ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ತಿಳಿಸಿದ್ದಾರೆ.

ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಆಯಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬೋವಿ ಜನಾಂಗಕ್ಕೆ ಮಾರಕವಾಗಿರುವ ಸದಾಶಿವ ಆಯೋಗದ ವರದಿ ಕೈಬಿಡಬೇಕೆಂದು ಸರ್ಕಾರವನ್ನು ಒತ್ತಾಯಪಡಿಸಿದ್ದಾರೆ.

ಮೈಸೂರು: ಹಾರಂಗಿ ನಾಲೆ ಮೂಲಕ ಕೆರೆಕಟ್ಟೆಗಳಿಗೆ ನೀರು

ಎಡ ಮತ್ತು ಬಲ ಜನಾಂಗಕ್ಕೆ ಮೀಸಲಾತಿಯಲ್ಲಿ ಶೇ.15ರಷ್ಟುನೀಡಿದ್ದು, ಬೋವಿ ಮತ್ತು ಲಂಬಾಣಿ ಜನಾಂಗಕ್ಕೆ ಶೇ.3ರಷ್ಟುಮಾತ್ರ ಮೀಸಲಾತಿ ನೀಡಲಾಗಿದೆ. ಇದು ಸಮಾಜಕ್ಕೆ ಭವಿಷ್ಯದಲ್ಲಿ ಮಾರಕವಾಗಲಿದೆ. ಸದಾಶಿವ ವರದಿ ಜಾರಿಗೆ ಬಂದಲ್ಲಿ ಸಮಾಜದ ಯುವಕರು ಆತ್ಮಹತ್ಯೆ ಹಾದಿ ತುಳಿಯಬೇಕಾಗುತ್ತದೆ ಎಂದಿದ್ದಾರೆ.

ಬೋವಿ ಸಮಾಜವು ಆರ್ಥಿಕವಾಗಿ ಹಿಂದುಳಿದಿದ್ದು, ಸಮಾಜದ ಕುಲ ಕಸುಬು ಬಂಡೆ ಮತ್ತು ಕಲ್ಲು ಚಪ್ಪಡಿ ಗುತ್ತಿಗೆಯನ್ನು ಕೋಟ್ಯಧಿಪತಿಗಳಿಗೆ ನೀಡುತ್ತಿದ್ದು, ರಾಜ್ಯಾದ್ಯಂತ ಕಲ್ಲು ಮತ್ತು ಬಂಡೆಗಳನ್ನು ಬೋವಿ ಸಮಾಜಕ್ಕೆ ಮೀಸಲು ಇಡಬೇಕು ಎಂದರು. ತಮ್ಮ ಸಮಾಜದ 4 ಜನ ಶಾಸಕರಿದ್ದು, ಮಂತ್ರಿ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

ಅಸಲಿ ಲಾರಿ, ನಕಲಿ ಡಾಕ್ಯುಮೆಂಟ್ಸ್: ಚಿಕ್ಕಬಳ್ಳಾಪುರಲ್ಲಿ ಸಿಕ್ಕಿಬಿದ್ರು ಅಂತಾರಾಜ್ಯ ಕಳ್ಳರು..!

ತಾಲೂಕು ಬೋವಿ ಸಮಾಜದ ಅಧ್ಯಕ್ಷ ಚಿಕ್ಕ ನರಸಿಂಹಯ್ಯ ಮಾತನಾಡಿ, ನಮ್ಮಲ್ಲಿ ಸಂಘಟನೆ ಕೊರತೆ ಇದ್ದು, ಸಂಘಟಿತರಾಗದಿದ್ದಲ್ಲಿ ಮತ್ತೆ ಶೋಷಣೆಗೆ ಒಳಗಾಗಬೇಕಾಗುತ್ತದೆ. ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ, ಬೋವಿ ಸಮಾಜದ ರಾಷ್ಟ್ರೀಯ ಕಾರ್ಯಾಧ್ಯಕ್ಷ ರವಿ ಮಾರ್ಕಲಿ, ವಕೀಲ ಶಂಕರಪ್ಪ, ನಿವೃತ್ತ ಐಎಎಸ್‌ ಅಧಿಕಾರಿ ಗಂಗಾಧರಪ್ಪ, ನರೇಂದ್ರ, ಕೋಟ್ರೇಶ್‌ ಮುಂತಾದವರು ಇದ್ದರು.

Follow Us:
Download App:
  • android
  • ios