ಕೈ ಮುಖಂಡನ ಅಳಿಯನ ಮನೆಯಲ್ಲಿತ್ತು ದಾಖಲೆ ಇಲ್ಲದ ಲಕ್ಷ ಲಕ್ಷ ಹಣ
ಕಾಂಗ್ರೆಸ್ ಹಿರಿಯ ಮುಖಂಡ ಆರ್.ಎಲ್. ಜಾಲಪ್ಪ ಅವರ ಅಳಿಯ ಜಿ.ಎಚ್. ನಾಗರಾಜ್ ಅವರ ನಿವಾಸದಲ್ಲಿ ಐಟಿ ದಾಳಿ ಮುಗಿದಿದೆ. ದಾಖಲೆ ಇಲ್ಲದ ಸುಮಾರು 10 ಲಕ್ಷ ರೂಪಾಯಿ ಲಭ್ಯವಾಗಿದ್ದು, ಅ.15ಕ್ಕೆ ವಿಚಾರಣೆ ನಡೆಯಲಿದೆ.
ಚಿಕ್ಕಬಳ್ಳಾಪುರ(ಅ.13): ಕಾಂಗ್ರೆಸ್ ಹಿರಿಯ ಮುಖಂಡ ಆರ್.ಎಲ್. ಜಾಲಪ್ಪ ಅವರ ಅಳಿಯ ಹಾಗೂ ಕೋಲಾರದ ದೇವರಾಜ ಅರಸು ಮೆಡಿಕಲ್ ಕಾಲೇಜು ಕಾರ್ಯದರ್ಶಿ ಜಿ.ಎಚ್. ನಾಗರಾಜ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ್ದ ದಾಳಿ ಮುಗಿದಿದೆ.
ಅ.15ಕ್ಕೆ ವಿಚಾರಣೆಗೆ ಹಾಜರಾಗುವಂತೆ ನಾಗರಾಜು ಅವರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ಜಾಲಪ್ಪ ಅವರ ಪುತ್ರ ರಾಜೇಂದ್ರ ಅವರು ಆ.14ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಜಾಲಪ್ಪ ಅಳಿಯ ನಾಗರಾಜ್ ಮನೆ ಮೇಲೆ ಐಟಿ ದಾಳಿ ಇದೇ ಮೊದಲಲ್ಲ..!
ಅ.10ರ ಗುರುವಾರದಂದು ಬೆಳಗ್ಗೆ 8 ಗಂಟೆಗೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳ ತಂಡ ಸತತ ಮೂರು ದಿನಗಳ ಕಾಲ ಜಿ.ಎಚ್. ನಾಗರು ಅವರ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ಶುಕ್ರವಾರ ಸಂಜೆ ಕೋಲಾರಕ್ಕೆ ಕರೆದೊಯ್ದಿದ್ದ ಅಧಿಕಾರಿಗಳು ವಿಚಾರಣೆ ನಡೆಸಿ ನಂತರ ಶುಕ್ರವಾರ ತಡರಾತ್ರಿ ಮನೆಗೆ ವಾಪಸ್ ಕರೆತಂದಿದ್ದರು.
ದಾಖಲೆ ಇಲ್ಲದ 10 ಲಕ್ಷ ನಗದು
ಮನೆಯ ಮೂಲೆಮೂಲೆಯಲ್ಲಿಯೂ ಪರಿಶೀಲನೆ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳಿಗೆ ಮನೆಯಲ್ಲಿ 12 ಲಕ್ಷ ನಗದು ದೊರೆತಿದ್ದು, ಇದರಲ್ಲಿ 10 ಲಕ್ಷ ರುಪಾಯಿಗೆ ಲೆಕ್ಕಗಳಿಲ್ಲ ಎಂಬ ಕಾರಣಕ್ಕೆ ಅ.15 ರಂದು ಬೆಂಗಳೂರಿನ ಆದಾಯ ತೆರಿಗೆ ಕೇಂದ್ರ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಮೂಲಕ ದಾಳಿಯನ್ನು ಅಂತ್ಯಗೊಳಿಸಿದ್ದಾರೆ.
ದಾಖಲೆಗಳಶೇಖರಣೆ
ಜಿ.ಎಚ್. ನಾಗರಾಜ್ ಅವರ ನಿವಾಸದಿಂದ ಬ್ಯಾಗ್ ಮತ್ತು ಸೂಟ್‌ಕೇಸ್‌ನಲ್ಲಿ ದಾಖಲೆಗಳನ್ನು ಕೊಂಡೊಯ್ದಿರುವ ಐಟಿ ಅಧಿಕಾರಿಗಳು, ಅ.15ಕ್ಕೆ ಕೇಂದ್ರ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಿ ಶನಿವಾರ ಸಂಜೆ ವಾಪಸ್ ತೆರಳಿದ್ದಾರೆ.
ಕಿರುಕಳ ನೀಡಲೆಂದೇ ದಾಳಿ
ಆದಾಯ ತೆರಿಗೆ ಅಧಿಕಾರಿಗಳ ನಿರ್ಗಮನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಎಚ್. ನಾಗರಾಜ್ ಕಿರುಕುಳ ನೀಡುವ ಉದ್ಧೇಶದಿಂದಲೇ ತಮ್ಮ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ ತಮ್ಮ ಆಸ್ತಿ ಮತ್ತು ಆದಾಯಕ್ಕೆ ಸಂಬಂಧಿಸಿದ ಸಮರ್ಪಕ ದಾಖಲೆಗಳನ್ನು ತಾವು ಹೊಂದಿರುವುದಾಗಿ ಅವರು ಹೇಳಿದರು.
ಚಿಕ್ಕಬಳ್ಳಾಪುರ: ಮಾಜಿ ಸಚಿವರ ಅಳಿಯ, ಮಗನ ನಿವಾಸದ ಮೇಲೆ ಐಟಿ ದಾಳಿ
ಅ.15 ರಂದು ಬೆಂಗಳೂರಿನ ಕೇಂದ್ರ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳ ನೋಟೀಸ್ ನೀಡಿರುವುದಾಗಿ ಹೇಳಿದ ಅವರು, ಶೋಧ ಕಾರ್ಯದ ವೇಳೆ ನಾಲ್ಕು ಕೆಜಿ ಚಿನ್ನಾಭರಣ, 12 ಲಕ್ಷ ನಗದು ಸೇರಿದಂತೆ ಮತ್ತಿತರ ವಸ್ತುಗಳು ಲಭ್ಯವಾಗಿರುವುದಾಗಿ ತಿಳಿಸಿದ್ದಾರೆ.
ರಮೇಶ್ ಆತ್ಮಹತ್ಯೆಗೆ ಸಂತಾಪ
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಸಂತಾಪ ವ್ಯಕ್ತಪಡಿಸಿದ ನಾಗರಾಜ್, ರಮೇಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಅಲ್ಲದೆ ಐಟಿ ಅಧಿಕಾರಿಗಳ ದಾಳಿ ಕುರಿತು ಶೀಘ್ರವೇ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸುವುದಾಗಿ ತಿಳಿಸಿದರು.
'ಎರಡು ಬಾರಿ ಗೆದ್ದಿರುವ ಶಿವಶಂಕರರೆಡ್ಡಿ ಏನು ಅಭಿವೃದ್ಧಿ ಮಾಡಿದ್ದಾರೆ'..?
ಅಲ್ಲದೆ ಐಟಿ ಅಧಿಕಾರಿಗಳ ವರ್ತನೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದು, ವಿಚಾರಣೆಯಲ್ಲಿ ಮೂರು ದಿನಗಳ ಕಾಲ ಕೇಳಿದ್ದನ್ನೇ ಕೇಳಿ ಕೆದಕಿ ವಿಚಾರಣೆ ನಡೆಸಿದರು. ಐಟಿ ಅಧಿಕಾರಿಗಳಿಗೆ ನಾನೂ ಸಂಪೂರ್ಣ ಸಹಕಾರ ನೀಡಿದ್ದೇನೆ. ನಮ್ಮ ಮನೆ ಹಾಗೂ ಆಸ್ಪತ್ರೆಯಲ್ಲಿ ಏನೂ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.